ಸಾಣೂರು:ಹಣ್ಣಿನ ವ್ಯಾಪಾರಿ ಮೇಲೆ ಹಲ್ಲೆ-Times of karkala

ಹಣ್ಣಿನ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕು ಮುರತ್ತಂಗಡಿ ಬಳಿ ಸಂಭವಿಸಿದೆ.ಮುರತ್ತಗಂಡಿ ನಿವಾಸಿ ನಾರಾಯಣ ಶೆಟ್ಟಿಗಾರ್‌ (63) ಹಲ್ಲೆಗೊಳಗಾದವರು.

ಅವರು ದಿನಾಂಕ 16 ರಂದು ಬೆಳಿಗ್ಗೆ 11:00 ಗಂಟೆಗೆ ಸಾಣೂರು ಗ್ರಾಮದ ಮುರತಂಗಡಿಯ ಮಥಾಯಿಸ್ ಫಾರ್ಮ್‌ನ ಎದುರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬುಟ್ಟಿಯಲ್ಲಿ ಫೈನಾಪಲ್‌ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ  ಸೇಬಿನ್ ಎಂಬುವವರು ತನ್ನ ಮಿನಿ ಟೆಂಪೋವನ್ನು ಫೈನಾಪಲ್‌ ಬುಟ್ಟಿಯ ಬದಿಯಲ್ಲಿ ಅಡ್ಡವಾಗಿ ನಿಲ್ಲಿಸಿದ್ದಾರೆ.


ಈ ಸಮಯ ಅಲ್ಲಿಯೇ ಇದ್ದ ಸುಬೀನ್‌ ಮತ್ತು ಆತನ ತಾಯಿ ಸಿಂಧೂ ಅವರು  ನಾರಾಯಣ ರವರಿಗೆ ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ ಸುಬೀನ್ ಅವರನ್ನು ನೆಲಕ್ಕೆ ದೂಡಿದ್ದು ಇದನ್ನ ಕಂಡು ಪಕ್ಕದಲ್ಲಿ ಇದ್ದ ಸಂದೀಪ್‌ ಮತ್ತು ವಿಬಿನ್ ರವರು ನಾರಾಯಣ ಶೆಟ್ಟಿಗಾರ್ ರವರ ಬೆನ್ನಿಗೆ, ಸೊಂಟಕ್ಕೆ ತುಳಿದು ಕೈಗಳಿಂದ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.


 ಜಾಹೀರಾತು



 

 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget