ಕಬ್ಬಿನಾಲೆ:ನಾಡ್ಪಾಲು - ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ:ಜನರನ್ನು ಸಂಕಷ್ಟದಿಂದ ದೂರ ಮಾಡಿ:ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಪೂಜಾರಿ.-Times of karkala

 ಹೆಬ್ರಿ : ಕಬ್ಬಿನಾಲೆ ಮತ್ತು ನಾಡ್ಪಾಲು ಗ್ರಾಮದಲ್ಲಿ ಉಡುಪಿ ಜಿಲ್ಲಾಧಿಕಾರಿಯವರು ಮಾಡುವ ಗ್ರಾಮವಾಸ್ತವ್ಯ ಸ್ವಾಗತಾರ್ಹ. ಗ್ರಾಮ ವಾಸ್ತವ್ಯ ಕಾಟಾಚಾರಕ್ಕೆ ಆಗದೆ ಜನರ ನಿಜವಾದ ಸಮಸ್ಯೆಯನ್ನು ಆಲಿಸುವಂತಾಗಲಿ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಒತ್ತಾಯಿಸಿದರು.

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಕಛೇರಿಯಲ್ಲಿ ಬುಧವಾರ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿದರು.

ಅವರು ಬುಧವಾರ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಾಡ್ಪಾಲು ಕಬ್ಬಿನಾಲೆ ಸೇರಿ ಹೆಬ್ರಿ ಕಾರ್ಕಳ ತಾಲ್ಲೂಕಿನ ೧೧ ಗ್ರಾಮಗಳ ಜನತೆ ಹುಲಿ ಯೋಜನೆ, ಕಸ್ತೂರಿರಂಗನ್‌ ವರದಿ ಮತ್ತು ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಯಿಂದಾ ಭಯಭೀತರಾಗಿದ್ದಾರೆ. ಈ ಪ್ರದೇಶದಲ್ಲಿ ಯಾವೂದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ರಸ್ತೆ ವಿದ್ಯುತ್‌ ಸಹಿತ ಮೂಲ ಸೌಕರ್ಯಗಳಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ತಡೆ ಮಾಡುತ್ತಿದ್ದಾರೆ. ಜನತೆಯ ವಾಸದ ಭೂಮಿಗೆ ೯೪ಸಿ, ಅಕ್ರಮಸಕ್ರಮ ಹಕ್ಕುಪತ್ರ ದೊರೆಯದೆ ಅತಂತ್ರರಾಗಿದ್ದಾರೆ. ಕಳೆದ ೨ ವರ್ಷದಿಂದ ಸರ್ಕಾರದ ಆಶ್ರಯ ಮನೆ, ನಿವೇಶನಗಳ ವಿತರಣೆಯಾಗುತ್ತಿಲ್ಲ. ಜನರ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ನೀಡಬೇಕು, ಹುಲಿ ಯೋಜನೆ ಕಸ್ತೂರಿರಂಗನ್‌ ವರದಿಯ ಬಗ್ಗೆ ಸ್ಪಷ್ಟವಾದ ಭರವಸೆ ನೀಡಬೇಕು ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದ್ದಾರೆ. ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ವರಂಗ ಸಿಎ ಬ್ಯಾಂಕ್‌ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಯುವ ಕಾಂಗ್ರೆಸ್‌ ಅಧ್ಯಕ್ಷ ದಿನೇಶ ಶೆಟ್ಟಿ ಹುತ್ತುರ್ಕೆ, ಅಶ್ವಿನಿ ಮುದ್ರಾಡಿ ಇದ್ದರು. 

 ಜಾಹೀರಾತು 

 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget