ಜ್ಞಾನಸುಧಾ "ಸಾಧನೆಗೆ ಪಂಚಸೂತ್ರ ಪಾಲಿಸಿ"ಜಿಲ್ಲಾಧಿಕಾರಿ ಜಿ.ಜಗದೀಶ್ ಜೆ.ಇ.ಇ ಮೈನ್ ಹಾಗೂ ಕೆ.ವಿ.ಪಿ.ವೈ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ-Times of karkala

ಜ್ಞಾನಸುಧಾ : ಜೆ.ಇ.ಇ ಮೈನ್ ಹಾಗೂ ಕೆ.ವಿ.ಪಿ.ವೈ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ

"ಸಾಧನೆಗೆ ಪಂಚಸೂತ್ರ ಪಾಲಿಸಿ"ಜಿಲ್ಲಾಧಿಕಾರಿ ಜಿ.ಜಗದೀಶ್

೧ಲಕ್ಷ ೬೦ ಸಾವಿರ ಪ್ರೋತ್ಸಾಹ ಧನ ವಿತರಣೆ

ಕಾರ್ಕಳ: ನಮ್ಮ ವಿದ್ಯಾಭ್ಯಾಸ ಕೇವಲ ಅಕ್ಷರವಂತರನ್ನು ನಿರ್ಮಿಸಿ ಸಾಕ್ಷರರನ್ನಾಗಿಸದೆ ಮೌಲ್ಯಯುತವಾದ ಬದುಕನ್ನು ರೂಢಿಸಿಕೊಂಡು ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಣದ ಅಗತ್ಯವಿದೆ ಎಂದು   ಉಡುಪಿ ಜಿಲ್ಲಾಧಿಕಾರಿ ಶ್ರೀ ಜಿ.ಜಗದೀಶ್ ಹೇಳಿದರು. 


ಅವರು ಜೆ.ಇ.ಇ ಮೈನ್ ಹಾಗೂ ಕೆ.ವಿ.ಪಿ.ವೈ ಪರೀಕ್ಷೆಯಲ್ಲಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಯಾವ ಕಾರ್ಯ   ಸೇವಾಮನೋಭಾವದಲ್ಲಿರುವುದೋ ಅಲ್ಲಿ ಯಶಸ್ಸು ಇದೆ.  ಯಾವ ಕಾರ್ಯವು ಲಾಭದುದ್ದೇಶದಿಂದ ಇರುವುದೋ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ.  ಮೊಬೈಲ್, ದುರಭ್ಯಾಸ, ಕಾಲಹರಣ ಮಾಡುವಂತಹ ಚಟುವಟಿಕೆ, ನಕಾರಾತ್ಮಕ ವ್ಯಕ್ತಿಗಳು ಮತ್ತು ಉದಾಸೀನ ಮನೋಭಾವ, ಈ ಐದು ಅಂಶಗಳಿAದ ದೂರವಿದ್ದರೆ ಯಶಸ್ಸು ಸಿಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನಾಡಿದರು.
ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರ ಸಮರ್ಥ ನಾಯಕತ್ವದಲ್ಲಿ ಇಂಥ ಗ್ರಾಮೀಣ ಭಾಗದಲ್ಲಿಯೂ ಶೈಕ್ಷಣ ಕವಾಗಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವುದರ ಕುರಿತು ಜಿಲ್ಲಾಧಿಕಾರಿ ಮೆಚ್ಚುಗೆಯ ಮಾತುಗಳನ್ನಾಡಿದರು.  

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದ   ಎನ್.ಐ.ಟಿ.ಕೆ ಸುರತ್ಕಲ್‌ನ ಸ್ಟೂಡೆಂಟ್ ವೆಲ್‌ಫೇರ್ ಫರ‍್ಮರ್ ಡೀನ್ ಡಾ.ಎಸ್.ಎಂ.ಹೆಗ್ಡೆ ಮಾತನಾಡಿ ನಮ್ಮ ವೃತ್ತಿ ನಮಗೆ ನಿವೃತ್ತಿಯನ್ನು  ತರಿಸಬಹುದು. ಆದರೆ ನಮ್ಮ ಪ್ರವೃತ್ತಿಯು ನಮಗೆ ನಿವೃತ್ತಿಯ ನಂತರವೂ ಜೀವನೋತ್ಸಾವನ್ನು ಸದಾ ಕಾಲ ಉಳಿಸುವಂತೆ ವ್ಯಕ್ತಿತ್ವರೂಪಿಸಿಕೊಂಡು   ವಿದ್ಯಾರ್ಥಿಯಾದವನು ತಂದೆ, ತಾಯಿ, ಗುರುಗಳ ಹಾಗೂ ಸಮಾಜದ ಋಣವನ್ನು ಮರೆಯದೆ ತೀರಿಸುವಂತಹ ಸೌಜನ್ಯತೆ ಇರಬೇಕು ಎಂದು ಕರೆ ನೀಡಿದರು.        
 
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಕೆ.ವಿ.ಪಿ.ವೈ ಸಾಧಕರಾದ ಮನ್ವಿತ್ ಪ್ರಭು, ಸುಕ್ಷಿತ್ ಪಿ.ಎಚ್, ಅದೀಶ್ ಆರ್ ರವರನ್ನು  ಹಾಗೂ  ಜೆ.ಇ.ಇ ಮೈನ್-೨೦೨೧ರ ಪರೀಕ್ಷೆಯಲ್ಲಿ ಗಣ ತದಲ್ಲಿ ೧೦೦ಕ್ಕೆ ೧೦೦ ಅಂಕ ಗಳಿಸುವುದರೊಂದಿಗೆ ೯೯.೮೬ ಪರ್ಸಂಟೈಲ್ ಸಂಪಾದಿಸಿದ ಅಭಯ್ ಕಾಮತ್, ೯೯.೬೯ ಪರ್ಸಂಟೈಲ್ ಸಂಪಾದಿಸಿದ ಶ್ರೇಯಸ್ ಪೈ ಹಾಗೂ ೯೯.೩೫ ಪರ್ಸಂಟೈಲ್ ಗಳಿಸಿದ  ಎಂ ಮನ್ವಿತ್ ಪ್ರಭು,  ಜೆಇಇ ಮೈನ್ - ಬಿ.ಆರ್ಕ್ನಲ್ಲಿ ೯೯.೭೪ ಪರ್ಸಂಟೈಲ್ ಪಡೆದ ಶ್ರೀಹರಿ ಪಡಿಗಾರ್  ಇವರೆಲ್ಲರನ್ನು ಸನ್ಮಾನಿಸಿ ಒಟ್ಟು ೧ ಲಕ್ಷ ೩೦ ಸಾವಿರ ನಗದು ಪುರಸ್ಕಾರದ ಜೊತೆಗೆ ೯೦ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ ಒಟ್ಟು ೪೫ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.   ಉತ್ತಮ ಫಲಿತಾಂಶಕ್ಕೆ ನೆರವಾದ ಉಪನ್ಯಾಸಕರಿಗೆ ಟ್ರಸ್ಟ್ನ ವತಿಯಿಂದ ೩೦ಸಾವಿರ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಇತ್ತೀಚೆಗೆ ನಡೆದ ಜಿಲ್ಲಾವಾರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.   

  ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿಗಳಾದ ಶ್ರೀಕರುಣಾಕರ ಶೆಟ್ಟಿ, ಶ್ರೀಮತಿ ವಿದ್ಯಾಸುಧಾಕರ್ ಶೆಟ್ಟಿ, ಶ್ರೀ ಗಣಪತಿ ಪೈ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಶಾಂತಿರಾಜ್ ಹೆಗ್ದೆ, ಶ್ರೀ ಪ್ರಕಾಶ್ ಶೆಣೈ, ಶ್ರೀ ಅನಿಲ್ ಕುಮಾರ್ ಜೈನ್ ಉಪಸ್ಥಿತರಿದ್ದರು. 

 ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಉಪನ್ಯಾಸಕಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲ ಶ್ರೀ ದಿನೇಶ್ ಎಂ ಕೊಡವೂರ್ ವಂದಿಸಿದರು.  

 ಜಾಹೀರಾತು

 
 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget