ಹೆಬ್ರಿ:ತಾಲ್ಲೂಕು,ಜಿಲ್ಲಾ ಪಂಚಾಯಿತಿ ಚುನಾವಣೆ:ನಿಷ್ಠಾವಂತ ಜನಸೇವಕರಿಗೆ ಟಿಕೇಟ್:ಮಂಜುನಾಥ ಪೂಜಾರಿ. ಹೆಬ್ರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರ ಸಭೆ.-Times of karkala

ಹೆಬ್ರಿ:ತಾಲ್ಲೂಕು,ಜಿಲ್ಲಾ ಪಂಚಾಯಿತಿ ಚುನಾವಣೆ:ನಿಷ್ಠಾವಂತ ಜನಸೇವಕರಿಗೆ ಟಿಕೇಟ್:ಮಂಜುನಾಥ ಪೂಜಾರಿ.


ಹೆಬ್ರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರ ಸಭೆ. 

ಹೆಬ್ರಿ : ಎಲ್ಲರಿಗೂ ಎಲ್ಲಾ ಅವಕಾಶಗಳು ಕಾಂಗ್ರೆಸ್‌ ಪಕ್ಷದಲ್ಲಿ ಹಂತಹಂತವಾಗಿ ದೊರೆಯುತ್ತದೆ. ನಾವು ಪ್ರಾಮಾಣಿಕವಾಗಿ ಪಕ್ಷದ ಸೇವೆ ಮಾಡಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕಿದೆ. ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಜನಸೇವಕರಿಗೆ ಎಲ್ಲರ ಸಹಮತದಲ್ಲಿ ಟಿಕೇಟ್ ನೀಡುತ್ತೇವೆ. ಎಲ್ಲರೂ ಕೈಜೋಡಿಸಿ ಪಕ್ಷವನ್ನು ಬೆಳೆಸಿ ಮುನ್ನಡಸಿ, ಸಂಕಷ್ಟದ ಕಾಲದಲ್ಲಿ ಕಾಂಗ್ರೆಸ್‌ ಪಕ್ಷ ಜನರೊಂದಿಗೆ ಇರುತ್ತದೆ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಭಾನುವಾರ ನಡೆದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷ ಹುತ್ತುರ್ಕೆ ದಿನೇಶ ಶೆಟ್ಟಿ ಮತ್ತು ಎನ್‌ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ ರಕ್ಷಿತ್‌ರಾಜ್‌ ಅವರನ್ನು ಸನ್ಮಾನಿಸಲಾಯಿತು.

ಅವರು ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರ ನಡೆದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಕಾಂಗ್ರೆಸ್ಸಿಗೆ ಮುಂದೆ ಒಳ್ಳೇಯ ದಿನಗಳು ಬರಲಿವೆ. ಡಿ.ಕೆ.ಶಿವಕುಮಾರ್‌ ಸಾರಥ್ಯದಲ್ಲಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿದು ಜಯಗಳಿಸಬೇಕಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ನಾಯಕರನ್ನು ನೀವೆ ಆರಿಸಿಕೊಳ್ಳಿ ಎಂದು ಸ್ಪಷ್ಟ ಸಂದೇಶವನ್ನು ನಮ್ಮ ನಾಯಕ ವೀರಪ್ಪ ಮೊಯಿಲಿ ರವಾನಿಸಿದ್ದಾರೆ ಎಂದು ತಿಳಿಸಿದರು. 


ಯುವ ಕಾಂಗ್ರೆಸ್‌ ಅಧ್ಯಕ್ಷ ಹುತ್ತುರ್ಕೆ ದಿನೇಶ ಶೆಟ್ಟಿ ಮತ್ತು ಎನ್‌ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ ರಕ್ಷಿತ್‌ರಾಜ್‌, ನೂತನ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.ಪಕ್ಷದ ವಿವಿಧ ಘಟಕಗಳ ಪ್ರಮುಖರಾದ ಸೀತಾನದಿ ರಮೇಶ ಹೆಗ್ಡೆ, ಕೆರ್ವಾಸೆ ಪ್ರಕಾಶ ಪೂಜಾರಿ, ಅಜೆಕಾರು ರಾಮಕೃಷ್ಣ ಶೆಟ್ಟಿ, ಆಸ್ಟಿನ್‌ ರಾಡ್ರೀಗಸ್‌, ಜಯಕುಮಾರ್‌ ಜೈನ್‌, ಮುದ್ರಾಡಿಯ ಶಶಿಕಲಾ ಪೂಜಾರಿ, ಹೆಬ್ರಿಯ ಎಚ್‌. ಜನಾರ್ಧನ್‌ ಹಾಜರಿದ್ದರು. 

 ಜಾಹೀರಾತು

 
 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget