ಸಂಬಳದ ವಿಚಾರವಾಗಿ ಗಲಾಟೆ ನಡೆದು ಕಾರ್ಮಿಕನಿಗೆ ಮಾಲೀಕನು ಕತ್ತಿಯಿಂದ ಇರಿದ ಘಟನೆ ಎಳ್ಳಾರೆ ಮಾವಿನಕಟ್ಟೆ ಎಂಬಲ್ಲಿ ಮಾ.20ರಂದು ನಡೆದಿದೆ.
ರಬ್ಬರ್ ತೋಟದ ಮಾಲೀಕ ಶಿಜೊ ಎಂಬುವವರು ಕಾರ್ಮಿಕ ಶ್ಯಾಮ(32) ಎಂಬುವವರಿಗೆ ಕತ್ತಿಯಿಂದ ತಿವಿದಿದ್ದಾರೆ.
ಶಿಜೊ ಮತ್ತು ಶ್ಯಾಮ್ ರವರಿಗೆ ಸಂಬಳದ ವಿಚಾರವಾಗಿ ಮಾತುಕತೆ ನಡೆದಿದೆ.ಈ ಸಂಧರ್ಭ ಟ್ಯಾಪಿಂಗ್ ಮಾಡುವ ಕತ್ತಿಯಿಂದಲೇ ತಿವಿದಿದ್ದಾರೆ.ತಕ್ಷಣ ಶ್ಯಾಮ್ ರವರನ್ನು ಮುನಿಯಾಲು ಆಸ್ಪತ್ರೆಗೆ ಸೇರಿಸಲಾಯಿತು.ಹೆಚ್ಚಿನ ಚಿಕಿತ್ಸೆಗೆ ಉಡುಪಿಗೆ ಕೊಂಡೊಯ್ದು ಅಲ್ಲಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶಿಜೊ ವಿರುದ್ಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment