ಕಾರ್ಕಳ:ಶಾಸಕ ಸುನೀಲ್ ಕುಮಾರ್ ಗೆ ಶುಭದ ರಾವ್ ಬಹಿರಂಗ ಪತ್ರ-Times of karkala

ಕಾರ್ಕಳ ವಿಧಾನಸಭಾ ವ್ಯಾಪ್ತಿಯಲ್ಲಿರುವ ಕಾರ್ಕಳ ಪುರಸಭೆಯು ನಿಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೋ ಇಲ್ಲವೋ ಎಂಬ ಸಂಶಯ ಸಾರ್ವಜನಿಕರಿಗೆ ಮತ್ತು ಪುರಸಭೆಯ ಜನಪ್ರತಿನಿಧಿಗಳಾದ ನಮಗೆ ಕಾಡುತ್ತಿದೆ.ಯಾಕೆಂದರೆ ಸಮಸ್ಯೆಗಳ ಆಗರವಾಗಿರುವ ಪುರಸಭೆ ಆಡಳಿತದ ಬಗ್ಗೆ ತಾವು ಯಾವುದೇ ಕಾಳಜಿ ವಹಿಸದೆ ನಿರ್ಲಕ್ಷ ವಹಿಸಿರುವುದು ಈ ಸಂಶಯಕ್ಕೆ ಕಾರಣವಾಗಿದೆ. ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಸಂಸದರ ಜೊತೆಗೂಡಿ ಅಧಿಕಾರಕ್ಕಾಗಿ‌ ಬಂದು ಮತ ಚಲಾಯಿಸಿದ ನಂತರ ಯಾವತ್ತೂ ಪುರಸಭೆಯ ಆಡಳಿತದ ಬಗ್ಗೆ ಯಾವುದೇ ರೀತಿಯ ಮಾರ್ಗದರ್ಶನವಾಗಲಿ ಅಥವಾ ಚುನಾಯಿತ ಸರ್ವ ಸದಸ್ಯರ ಸಭೆಯನ್ನಾಗಲಿ ಮಾಡಿ ಸಲಹೆಗಳನ್ನು ನೀಡಿದ ಉದಾಹರಣೆಗಳೇ ಇಲ್ಲ.

 ಪ್ರಾಧಿಕಾರದ ಸಮಸ್ಯೆಯಿಂದಾಗಿ ಐನೂರಕ್ಕೂ ಹೆಚ್ಚು ಕಡತಗಳು ವಿಲೇವಾರಿಯಾಗದೆ ಉಳಿದುಕೊಂಡಿದೆ ಇದರ ಪರಿಣಾಮವಾಗಿ ಸ್ವಂತ ಮನೆಯ ಕನಸು ಕಂಡಿದ್ದ ಸಾರ್ವಜನಿಕರು ಕಣ್ಣೀರು ಹಾಕುತ್ತಿದ್ದಾರೆ.ಕಸ ವಿಲೇವಾರಿಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಪುರಸಭೆಯಲ್ಲಿ ಕಸ ವಿಲೇವಾರಿಯಾಗದೆ ಸಾರ್ವಜನಿಕರು ಹಿಂಸೆಯನ್ನು ಅನುಭವಿಸುತ್ತಿದ್ದು ಹಿಡಿಶಾಪ ಹಾಕುತ್ತಿದ್ದಾರೆ, ರಸ್ತೆ ಅಗಲೀಕರಣದ ಬಗ್ಗೆ ತಾವು ಯಾವದೇ ಶ್ರಮವಹಿಸದ  ಕಾರಣ ಆ ಕೆಲಸ ಅರ್ಧಕ್ಕೆ ನಿಂತು ಅಭಿವೃದ್ಧಿಗೆ ಹಿನ್ನಡೆಯಾಗಿದೆ. 


ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಮಾಡಿಸಿಕೊಳ್ಳಲು ಅಧಿಕಾರಿಯೊಬ್ಬರಿಗೆ ಲಂಚ ನೀಡುಬೇಕಾದ ಪದ್ದತಿ ಪುರಸಭೆಯಲ್ಲಿ ಪ್ರಾರಂಭವಾಗಿದ್ದು ಅವರ ಹಣದ ದಾಹಕ್ಕೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ತಮಗೆ ಅನೇಕ ದೂರುಗಳು ಬಂದರೂ ತಾವೂ ಯಾವ ಕಾರಣಕ್ಕೆ ಮೌನವಾಗಿದ್ದೀರಿ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ ಪುರಸಭೆಯಲ್ಲಿ ನಿಮ್ಮ ಪಕ್ಷ‌ದ ಆಡಳಿತದ ಬಗ್ಗೆ ಭರವಸೆ ಇಟ್ಟವರು ನಿರಾಶರಾಗಿದ್ದಾರೆ. 


ಕೇಂದ್ರದಲ್ಲಿ, ರಾಜ್ಯದಲ್ಲಿ‌ ಮತ್ತು ಪುರಸಭೆಯಲ್ಲಿ ನಿಮ್ಮದೇ ಸರಕಾರವಿದೆ ತಾವು‌‌ ಸ್ವಲ್ಪ ಬಿಡುವು ಮಾಡಿಕೊಂಡು ಎಲ್ಲಾ ಸದಸ್ಯರ‌ ಜೊತೆ  ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರೆ ತಮಗೆ ಸಂಪೂರ್ಣ ಸಹಕಾರ ಮತ್ತು ಸಲಹೆ ನೀಡಲು‌ ನಾವು ಸಿದ್ಧರಿದ್ದೇವೆ. ಪ್ರವಾಸೋದ್ಯಮದ ಕೇಂದ್ರವಾಗಿರುವ ಕಾರ್ಕಳ ಪುರಸಭೆಯ ಅಭಿವೃದ್ಧಿಗಾಗಿ ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಾವು ಗಮನಹರಿಸುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.

ಶುಭದ ರಾವ್ 

ಪುರಸಭಾ ಸದಸ್ಯರು

ಕಾರ್ಕಳ

 ಜಾಹೀರಾತು  
 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget