ಕಾರ್ಕಳ ಮಾ.16: ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಇದೇ ಜನವರಿ-೨೦೨೧ರಲ್ಲಿ ನಡೆಸಿದ ರಾಷ್ಟ್ರಮಟ್ಟದ ಕೆ.ವಿ.ಪಿ.ವೈ. ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಾದ ಎಮ್. ಮನ್ವಿತ್ ಪ್ರಭು, ಅದಿಶ್ ಆರ್., ಸುಕ್ಷಿತ್ ಪಿ.ಎಚ್. ಇವರು ತೇರ್ಗಡೆ ಹೊಂದುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಒಟ್ಟು 1753 ಪ್ರತಿಭಾವಂತ ವಿದ್ಯಾರ್ಥಿಗಳು ಈ ಅರ್ಹತೆಯನ್ನು ಗಿಟ್ಟಿಸಿಕೊಂಡಿರುತ್ತಾರೆ. ಎಮ್. ಮನ್ವಿತ್ ಪ್ರಭು ಇವರು ಇತ್ತೀಚೆಗಷ್ಟೇ ನಡೆದ ಜೆ.ಇ.ಇ. ಮೈನ್ ಫೆಬ್ರವರಿ-೨೦೨೧ ರ ಫಲಿತಾಂಶದಲ್ಲೂ ಕೂಡ 99.35 % ಅಂಕ ಪಡೆದು ಉನ್ನತ ಸಾಧನೆ ಮಾಡಿದ್ದರು.
ವಿದ್ಯಾರ್ಥಿಗಳ ಸಾಧನೆಯನ್ನು, ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಅಭಿನಂದಿಸಿದ್ದು, ಕಾಲೇಜಿನ ಉಪನ್ಯಾಸಕ ಬಳಗದ ಪರಿಶ್ರಮವನ್ನು ಶ್ಲಾಘಿಸಿದ್ದಾರೆ
ಸುಕ್ಷಿತ್ ಪಿ.ಎಚ್. |
ಎಮ್. ಮನ್ವಿತ್ ಪ್ರಭು |
ಜಾಹೀರಾತು
|
Post a comment