ಬೈಲೂರು:ಬಾವಿಯಲ್ಲಿ ಆಮ್ಲಜನಕ ಲಭಿಸದೆ ಓರ್ವ ಸಾವು,ಇಬ್ಬರು ಅಸ್ವಸ್ಥ-Times of karkala

 ಹೂಳು ತೆಗೆಯಲು ಬಾವಿಗೆ ಇಳಿದ ಸಂಧರ್ಭ ಬಾವಿಯ ಆಳದಲ್ಲಿ ಆಮ್ಲಜನಕ ಲಭಿಸದೆ ಉಸಿರುಗಟ್ಟಿ ಓರ್ವ ಸಾವನ್ನಪ್ಪಿ ಇಬ್ಬರು ಅಸ್ವಸ್ಥಗೊಂಡ ಘಟನೆ ಕಾರ್ಕಳ ತಾಲೂಕು ಬೈಲೂರು ಬಳಿ ನಡೆದಿದೆ.ಮೂಡುಬಿದಿರೆ ಕೋಟೆಬಾಗಿಲು ನಿವಾಸಿ ಮಣಿ(24) ಮೃತಪಟ್ಟವರು. ಅಸ್ವಸ್ಥಗೊಂಡ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಂಧರ್ಬಿಕ ಚಿತ್ರ 

ಬಾವಿಯಲ್ಲಿ ಹೂಳು ತೆಗೆಯುವ ಉದ್ದೇಶದಿಂದ ಬಾವಿಗೆ ಇಳಿದಿದ್ದ ಮಣಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ.ಅನುಮಾನಗೊಂಡ ಓರ್ವ ಮಣಿಯನ್ನು ಮೇಲಕ್ಕೆತ್ತಲು ಕೆಳಗಿಳಿಯುತ್ತಿದ್ದಂತೆ ಆಮ್ಲಜನಕದ ಕೊರತೆಯಿಂದಾಗಿ ಅಸ್ವಸ್ಥಗೊಂಡಿದ್ದಾರೆ.ಇದನ್ನು ಗಮನಿಸಿದ ಇನ್ನೋರ್ವ ಬಾವಿಗೆ ಇಳಿದಿದ್ದು ಅವನೂ ಅಸ್ವಸ್ಥಗೊಂಡಿದ್ದಾನೆ.

ಕೂಡಲೇ ಎಲ್ಲರನ್ನೂ ಮೇಲಕ್ಕೆತ್ತಲಾಗಿ ಅದಾಗಲೇ ಮಣಿ ಮೃತಪಟ್ಟಿದ್ದು, ಉಳಿದ ಈರ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

 ಜಾಹೀರಾತು 


 

 

 

 

 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget