ರಾಷ್ಟ್ರಮಟ್ಟದ(ಜೆ.ಇ.ಇ.ಮೈನ್) ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ:ಜ್ಞಾನಸುಧಾ ವಿದ್ಯಾರ್ಥಿಗಳ ಉತ್ಕೃಷ್ಟ ಸಾಧನೆ-Times of karkala

 

ರಾಷ್ಟ್ರ ಮಟ್ಟದಲ್ಲಿ ನಡೆಸುವ ಇಂಜಿನಿಯರಿoಗ್ ಪ್ರವೇಶ ಪರೀಕ್ಷೆಯಾದ ಜೆ.ಇ.ಇ. ಮೈನ್‌ನ ಫೆಬ್ರವರಿ 2021ರ ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶ ದೊರೆತಿದ್ದು ಕಾರ್ಕಳ ಜ್ಞಾನಸುಧಾದ ಅಭಯ ಕಾಮತ್ ಇವರು ಗಣಿತದಲ್ಲಿ 100 ಕ್ಕೆ 100 ಅಂಕಗಳಿಸುವುದರೊಂದಿಗೆ  99.86 % ಗಳಿಸಿರುತ್ತಾರೆ. 

ಇದೇ ಕಾಲೇಜಿನ ಶ್ರೇಯಸ್ ಪೈಯವರು 99.65% ಪರ್ಸಂಟೈಲ್ ಗಳಿಸಿರುತ್ತಾರೆ. ಮನ್ವಿತ್ ಪ್ರಭು ಇವರು 99.35% ಗಳಿಸಿರುತ್ತಾರೆ. 

ಕಾಲೇಜಿನ 25 ವಿದ್ಯಾರ್ಥಿಗಳು 65 ಪರ್ಸಂಟೈಲ್‌ಗಿ0ತ ಅಧಿಕ ಅಂಕಗಳಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸುಮಾರು 6,61,761 ವಿದ್ಯಾರ್ಥಿಗಳು ಈ ಪರೀಕ್ಷೆ ಎದುರಿಸಿದ್ದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಈ ಮೂವರು ವಿದ್ಯಾರ್ಥಿಗಳಿಗೆ ಒಟ್ಟು ರೂಪಾಯಿ ಒಂದು ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ ಹಾಗೂ ಫಲಿತಾಂಶಕ್ಕೆ ಕಾರಣೀಭೂತರಾದ ಉಪನ್ಯಾಸಕ ವೃಂದವನ್ನು ಅಭಿನಂದಿಸಿದ್ದಾರೆ.

ಅಭಯ ಕಾಮತ್ 

ಮನ್ವಿತ್ ಪ್ರಭು 

 ಶ್ರೇಯಸ್ ಪೈ

 ಜಾಹೀರಾತು

 

  

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget