ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಸಹಭಾಗಿತ್ವದಲ್ಲಿ ಶ್ರೀ ಭುವನೇಂದ್ರ ಪ್ರೌಢಶಾಲೆ, ಕಾರ್ಕಳ ಇಲ್ಲಿ ನೂತನ ಇಂಟರಾಕ್ಟ್ ಕ್ಲಬ್ಬಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಅಸಿಸ್ಟೆಂಟ್ ಗವರ್ನರ್ ರೊ.ನವೀನ್ ಅಮೀನ್ ರವರು ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಪೈಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೊ. ಪ್ರಶಾಂತ ಬೆಳಿರಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂಟರಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಕು.ಆಕಾಶ್ ಭಟ್ ಹಾಗೂ ಕಾರ್ಯದರ್ಶಿಯಾಗಿ ಕು. ರಂಗನಾಥ್ ಅಧಿಕಾರ ವಹಿಸಿಕೊಂಡರು.ರೊ.ನವೀನ್ ಅಮೀನ್ ಇಂಟರಾಕ್ಟ್ ಕ್ಲಬ್ಬಿನ ಧ್ಯೇಯೋದ್ದೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ವೃಂದಾ ಶೆಣೈಯವರು ಅತಿಥಿಗಳನ್ನು ಸ್ವಾಗತಿಸಿದರು.ಇಂಟರಾಕ್ಟ್ ಕ್ಲಬ್ಬಿನ ಶಿಕ್ಷಕ ಸಂಯೋಜಕರಾದ ಶ್ರೀ ಸಂಜಯ್ ಕುಮಾರ್ ಧನ್ಯವಾದಗಳನ್ನಿತ್ತರು.ಕಾರ್ಯಕ್ರಮದಲ್ಲಿ ರೊ.ಸುರೇಂದ್ರ ನಾಯಕ್,ರೊ.ಪ್ರಕಾಶ್ ಪೈ ,ರೊ. ಅಬ್ದುಲ್ ರೆಹಮಾನ್,ರೊ. ಗೀತಾ ರಾವ್, ಸಹಶಿಕ್ಷಕರಾದ ಶ್ರೀ ಗಣೇಶ್ ಜಾಲ್ಸೂರು, ಶ್ರೀಮತಿ ಇಂದಿರಾ ಉಪಸ್ಥಿತರಿದ್ದರು.ಕು.ಪ್ರಿಯಾ ಪೈ ಕಾರ್ಯಕ್ರಮ ನಿರ್ವಹಿಸಿದರು.
ಜಾಹೀರಾತು
Post a comment