April 2021

ನಿಧಾನ ಗತಿಯ ಕಾಮಗಾರಿ,ರಸ್ತೆಯ ಮಧ್ಯೆ ಜಲ್ಲಿಯ ರಾಶಿ, ಬದಿಯಲ್ಲಿ ಅಸಮರ್ಪಕ ಚರಂಡಿ  ಇದು ಕೂಡುಬೆಟ್ಟು ಬಂಗ್ಲೆಗುಡ್ಡೆ ಸಂಪರ್ಕಿಸುವ ರಸ್ತೆಯ ಸವಾರರ ದಿನನಿತ್ಯದ ಗೋಳು 


ಹೌದು...ಇದು ಕೂಡುಬೆಟ್ಟುನಿಂದ  ಬಟ್ಟಹೊಳೆರಸ್ತೆಯಾಗಿ ಬಂಗ್ಲೆಗುಡ್ಡೆ ಸಂಪರ್ಕಿಸುವ ರಸ್ತೆಯ ದುರವಸ್ಥೆ.ಸುಮಾರು 6 ಕೋಟಿ ರೂಪಾಯಿ ವೆಚ್ಚದ ರಸ್ತೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ರಸ್ತೆದುರಸ್ತಿಗೆ ಗುದ್ದಲಿಪೂಜೆ ನಡೆದು ಆರೇಳು ತಿಂಗಳುಗಳಾದರೂ ಇನ್ನೂ ಕೆಲಸ ಪೂರ್ಣಗೊಂಡಿಲ್ಲ.ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಇಲ್ಲಿ ವಾಸಿಸುವ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಅಲ್ಲದೆ ರಸ್ತೆಯಲ್ಲಿರುವ ಜಲ್ಲಿಹುಡಿ,ಮಣ್ಣಿನ ಧೂಳು ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನ, ಆಟೋ ಇತರೆ ವಾಹನಗಳ ಪ್ರಯಾಣಿಕರಿಗೆ ಕಣ್ಣಿಗೆ ರಾಚುತ್ತಿದ್ದು , ವಾಹನ ಸವಾರರು ಇನ್ನಿಲ್ಲದ ಕಿರಿಕಿರಿ ಅನುಭವಿಸುವಂತಾಗಿದೆ.

ಕಾಮಗಾರಿ ಆರಂಭವಾಗಿ ಹಲವು ತಿಂಗಳುಗಳಾದರೂ ಎಲ್ಲ ಕೆಲಸ ನಿಧಾನವಾಗಿ ನಡೆಯುತ್ತಿದೆ. ಹೀಗಾಗಿ ಅಗೆದು ಅಸ್ತವ್ಯಸ್ತ ಮಾಡಿದ,ಮಳೆಯಿಂದ ಕೆಸರುಮಯವಾದ ಹಾಗೂ ಜಲ್ಲಿಯಿಂದ ತುಂಬಿಹೋದ ರಸ್ತೆಯಲ್ಲಿ  ವೃದ್ಧರು, ಮಕ್ಕಳು, ಮಹಿಳೆಯರು ವಾಹನಸವರಾರು ಸಂಚರಿಸುವುದೇ ಕಠಿಣವಾಗಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ.

ಗುದ್ದಲಿ ಪೂಜೆ ನಡೆದು ಏಳು ತಿಂಗಳುಗಳಾದರೂ ಡಾಮರೀಕರಣ ಪೂರ್ಣಗೊಂಡಿಲ್ಲ.ತುರ್ತು ಸಂಧರ್ಭದಲ್ಲಿ ಮಾಳ ಅಥವಾ ಕೆರ್ವಾಶೆಗೆ ಹೋಗಬೇಕಾದಲ್ಲಿ  ರಿಕ್ಷಾ ಚಾಲಕರೂ ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ.ಈಗಾಗಲೇ ಈ ರಸ್ತೆಯಲ್ಲಿ ಹಲವಾರು ಬಾರಿ ಅಪಘಾತಗಳು ಸಂಭವಿಸಿದ್ದು ಗ್ರಾಮಸ್ಥರೇ ಆಸ್ಪತ್ರೆಗೆ ಸೇರಿಸಿದ್ದಾರೆ.ಸದ್ಯ ರಸ್ತೆಯ ಈ ಅವಸ್ಥೆಗೆ ರೋಸಿಹೋಗಿರುವ ಗ್ರಾಮಸ್ಥರು ಸಂಬಂಧಪಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಜಾಹೀರಾತು 

 
 

 

ಕಾರ್ಕಳ:ಜ್ಞಾನಸುಧಾ ಶಿಕ್ಷಣ  ಸಂಸ್ಥೆಗಳ ಪರವಾಗಿ  ಕಾರ್ಕಳ ರೋಟರಿ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವ 50 ರೋಗಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ  ಕೊಡಮಾಡಿರುವ ಒಂದು ಲಕ್ಷ ಐವತ್ತು ಸಾವಿರ ರೂ ಮೌಲ್ಯದ ಚೆಕ್ಕನ್ನು ಹಸ್ತಾಂತರಿಸಲಾಯಿತು. 

ಈ ಸಂದರ್ಭದಲ್ಲಿ  ಮಾಹೆಯ  ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಡಾ. ಎಚ್. ವಿನೊದ್ ಭಟ್, ಎಪಿಜಿಇಟಿ ಆಡಳಿತ ಮಂಡಳಿ ಸದಸ್ಯ ಶ್ರೀ ಗಣಪತಿ ಪೈ,  ಕೊಡುಗೈ ದಾನಿಗಳೂ ಆದ ಶ್ರೀ ತುಕರಾಮ್ ನಾಯಕ್, ಶ್ರೀಮತಿ  ಸುವರ್ಣ ನಾಯಕ್, ರೋಟರಿ  ಆಸ್ಪತ್ರೆ ಕಾರ್ಕಳದ ಮೆಡಿಕಲ್ ಆಫೀಸರ್  ಡಾ. ಕೀರ್ತಿನಾಥ್ ಬಲ್ಲಾಳ್, ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ ಉಪಸ್ಥಿತರಿದ್ದರು.

 ಜಾಹೀರಾತು 

 
 

 

 ಜೇಸಿಐ ಕಾರ್ಕಳ ರೂರಲ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಬಜಗೋಳಿ ಇಲ್ಲಿನ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎಂಬ ವಿಷಯದ ಕುರಿತು ತರಭೇತಿ ಕಾರ್ಯಾಗಾರವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜೇಸಿಐ ರೂರಲ್ ನ ಅಧ್ಯಕ್ಷರಾದ ಆನಂದ್ ಮಾಳ ರವರು ವಹಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ಮುಖ್ಯ ಶಿಕ್ಷಕರಾದ ಬಸವರಾಜ್ ತಾವರ್ಗಿಯವರು ಉದ್ಘಾಟನಾ ಮಾತುಗಳನ್ನಾಡಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಗೋವಿಂದದಾಸ ಕಾಲೇಜಿನ ಉಪನ್ಯಾಸಕ ಜೇಸಿಐ ಸುರತ್ಕಲ್ ನ ಅಧ್ಯಕ್ಷ ರಾಕೇಶ್ ಹೊಸಬೆಟ್ಟು ಭಾಗವಹಿಸಿ ಎಸೆಸೆಲ್ಸಿ ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸುವುದು ಹೇಗೆ ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.ಜೇಸಿಐ  ಕಾರ್ಕಳ ರೂರಲ್ ನ ಪೂರ್ವಾಧ್ಯಕ್ಷರಾದ ಪ್ರಕಾಶ್ ಪೂಜಾರಿ ಕೆರ್ವಾಶೆ,ಕಾರ್ಯದರ್ಶಿ ಸುರೇಶ ಪೂಜಾರಿ ಉಪಸ್ಥಿತರಿದ್ದರು.ಸಹಶಿಕ್ಷಕ ಕೇಶವ್ ಕಾರ್ಯಕ್ರಮ ನಿರ್ವಹಿಸಿದರು.

 ಜಾಹೀರಾತು 

 
 

 

ಹಾಸ್ಯನಟನಾಗಿ ಖ್ಯಾತಿ ಗಳಿಸಿರುವ ತಮಿಳು ಚಿತ್ರರಂಗದ ಹಿರಿಯ ನಟ ವಿವೇಕ್ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಚಿಕಿತ್ಸೆ ಫಲಿಸದೇ ಏಪ್ರಿಲ್​ 17ರ ಮುಂಜಾನೆ 4.30 ರ ವೇಳೆಗೆ ನಿಧನರಾಗಿದ್ದಾರೆ.

ವಿವೇಕ್ ಅವರಿಗೆ ಗುರುವಾರ ಎದೆನೋವು ಕಾಣಿಸಿಕೊಂಡ ಪರಿಣಾಮ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಡ ಮುಂಭಾಗದ ಅಪಧಮನಿ ನಾಳವು ಶೇ 100 ರಷ್ಟು ಬ್ಲಾಕ್​ ಆಗಿದ್ದು, ತೀವ್ರತರವಾದ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಬಳಿಕ ವೈದ್ಯರ ತಂಡ ಆರೋಗ್ಯ ಪರೀಕ್ಷಿಸಿದ ನಂತರ ವಿವೇಕ್ ಅವರು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದ್ರೋಗ ತಜ್ಞರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ವಿವೇಕ್ ಅವರ ಹೃದಯಾಘಾತಕ್ಕೆ ಗುರುವಾರ ತೆಗೆದುಕೊಂಡ ಕೋವಿಡ್​ ಲಸಿಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ತಮಿಳುನಾಡು ಸರ್ಕಾರದ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ ಎಂದಿದ್ದರು.


 ಜಾಹೀರಾತು 

 
 

 


 

ಕಸದಿಂದ ವಿಸ್ಮಯ - ತ್ಯಾಜ್ಯ ವಸ್ತುಗಳ ಸದ್ಬಳಕೆಯ ಮಾದರಿಗಳ ನಿರ್ಮಾಣ ಸ್ಪರ್ಧೆ


ಸ್ಪರ್ಧೆಯ ವಿಷಯ: 

“ಕಸದಿಂದ ವಿಸ್ಮಯ- ತ್ಯಾಜ್ಯ ವಸ್ತುಗಳ ಸದ್ಬಳಕೆಯ ಮಾದರಿಗಳ ನಿರ್ಮಾಣ ಸ್ಪರ್ಧೆ”

ಸಂಕ್ಷಿಪ್ತ ಮಾಹಿತಿ:

ಉಡುಪಿ:ಜಿಲ್ಲೆಯಲ್ಲಿ 100 ಕಿಂತಲೂ ಹೆಚ್ಚು ಗ್ರಾಮ ಪಂಚಾಯತ್ ಗಳಲ್ಲಿ  ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಹಾಗೂ ನಿರ್ವಹಣೆ ಕುರಿತಾಗಿ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ನಿರ್ವಹಣಾ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಕೈ ಚೀಲ, ಪ್ಲಾಸ್ಟಿಕ್ ಬಾಟಲ್ ಗಳು, ಪೇಪರ್, ರಟ್ಟು, ಗ್ರಾಜು, ಲೋಹ, ರಬ್ಬರ್, ಚಪ್ಪಲಿ, ಬಟ್ಟೆ, ಥರ್ಮಕೋಲ್, , ಇಲೆಕ್ಟ್ರಾನಿಕ್ ವಸ್ತುಗಳು, ಟಯರ್ ಮುಂತಾದ ತ್ಯಾಜ್ಯ ವಸ್ತುಗಳು ಲಭ್ಯವಿದ್ದು ಇವುಗಳ ಸದ್ಭಳಕೆ ಮಾದರಿ ನಿರ್ಮಾಣ ಸ್ಫರ್ಧೇಯನ್ನು ಉಡುಪಿ ಜಿಲ್ಲೆಯ ಪಿ.ಯು.ಸಿ ಯಿಂದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದೆ


ಸ್ಪರ್ಧೇಗೆ ಹೆಸರು ನೊಂದಾಯಿಸಲು ಅಂತಿಮ ದಿನಾಂಕ: 20 ಎಪ್ರಿಲ್ 2021

ಮಾದರಿಗಳನ್ನು ಸಲ್ಲಿಸಲು ಅಂತಿಮ ದಿನಾಂಕ: 27 ಎಪ್ರಿಲ್ 2021


ಸ್ಪರ್ಧೆಯ ನಿಯಮ ನಿಬಂಧನೆಗಳು

• ಕಸದಿಂದ ವಿಸ್ಮಯ- ತ್ಯಾಜ್ಯ ವಸ್ತುಗಳ ಸದ್ಬಳಕೆಯ ಮಾದರಿಗಳ ನಿರ್ಮಾಣ ಸ್ಪರ್ಧೆಯನ್ನು ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) ಜಿಲ್ಲಾ ಪಂಚಾಯತ್ ಉಡುಪಿ ಇವರ ನೇತೃತ್ವಲ್ಲಿ ಆಯೋಜಿಸಲಾಗುತ್ತಿದೆ.

• ಸ್ಪರ್ಧೆಯಲ್ಲಿ ಭಾಗವಹಿಸಲು ಪಿ.ಯು.ಸಿ ಯಿಂದ ಸ್ನಾತಕೋತ್ತರ (PUC to Post Graduation)  ಅಧ್ಯಯನ ಮಾಡುತ್ತಿರುವ ಉಡುಪಿ ಜಿಲ್ಲೆಯ ಎಲ್ಲಾ ಆಸಕ್ತ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ.

• ಸ್ಪರ್ಧೇಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

• ನಿಗದಿತ ದಿನಾಂಕದಿಂದ ನಂತರ ಬರುವ ಮಾದರಿಗಳನ್ನು ಸ್ಪರ್ಧೇಗೆ ಪರಿಗಣಿಸಲಾಗುವುದಿಲ್ಲ.

• ಭಾಗವಹಿಸುವ ವಿದ್ಯಾರ್ಥಿಗಳು ಸಮೀಪದ ಗ್ರಾಮ ಪಂಚಾಯತ್ ನಿಂದ ನಿಗದಿತ ಫಾರಂ ಅನ್ನು ಪಡೆದು ಭರ್ತಿ ಮಾಡಿ ಮುಂಚಿತವಾಗಿ ಹೆಸರು ನೊಂದಾಯಿಸಿಕೊಳ್ಳಬೇಕು. 

• ಭರ್ತಿ ಮಾಡಿದ ಅರ್ಜಿ ಫಾರಂನೊಂದಿಗೆ ಕಾಲೇಜಿನಿಂದ ವಿತರಿಸುವ ಗುರುತು ಪತ್ರದ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

• ಒಬ್ಬ ವಿದ್ಯಾರ್ಥಿ ಅಥವಾ 5ಕ್ಕಿಂತ ಮೀರದಂತೆ ವಿದ್ಯಾರ್ಥಿಗಳ ಒಂದು ಗುಂಪು ರಚಿಸಿ ಸ್ಪರ್ಧೇಯಲ್ಲಿ ಭಾಗವಹಿಸಬಹುದು. 

• ಗುಂಪಾಗಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಒಬ್ಬರು ಹೆಸರು ನೊಂದಾಯಿಸುವುದು ಹಾಗೂ ಇತರೇ ವಿದ್ಯಾರ್ಥಿಗಳ ಗುರುತು ಪತ್ರ ಲಗತ್ತಿಸುವುದು.

• ವಿವಿಧ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಒಟ್ಟಾಗಿ ಒಂದು ಗುಂಪು ರಚಿಸಿ ಭಾಗವಹಿಸಲು ಅವಕಾಶವಿದೆ.

• ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ಕೇಂದ್ರ ಇಲ್ಲದಿದ್ದಲ್ಲಿ ಕೇಂದ್ರ ಇರುವ ಸಮೀಪದ ಇತರೇ ಗ್ರಾಮ ಪಂಚಾಯತ್ ನಲ್ಲಿ ಹೆಸರು ನೊಂದಾಯಿಸಿ ಭಾಗವಹಿಸಬಹುದು.

• ಮಾದರಿಗಳನ್ನು ಸಿದ್ದಪಡಿಸಲು ತ್ಯಾಜ್ಯ  ನಿರ್ವಹಣಾ ಕೇಂದ್ರದ ತ್ಯಾಜ್ಯವನ್ನೇ ಬಳಸಬೇಕು.

• ಮಾದರಿಗಳನ್ನು ವಿದ್ಯಾರ್ಥಿಗಳೇ ಸ್ವತಹ: ಸಿದ್ದಪಡಿಸಬೇಕು, ನಕಲು ಮಾದರಿಗಳನ್ನು ಸಲ್ಲಿಸುವಂತಿಲ್ಲ

• ತ್ಯಾಜ್ಯ ಕೇಂದ್ರದಲ್ಲಿ ಶಾಶ್ವತ ಮಾದರಿಗಳನ್ನು ಸಿದ್ದಪಡಿಸಬಹುದು ಅಥವಾ ಸ್ವಂತ ಸ್ಥಳದಲ್ಲಿ ಸಿದ್ದಪಡಿಸಿ ಗ್ರಾಮ ಪಂಚಾಯತ್ ಗೆ ನೀಡಬಹುದು.

• ಒಂದು ತಂಡ  ಒಂದಕ್ಕಿಂತ  ಹೆಚ್ಚು ಮಾದರಿಯನ್ನು ಸಿದ್ದಪಡಿಸಬಹುದು.

• ಮಾದರಿ ಸಿದ್ದಪಡಿಸುವ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು. ಹಾಗೂ ಉಳಿಕೆ ತ್ಯಾಜ್ಯವನ್ನು ತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಮರಳಿ ನೀಡುವುದು.

• ಮಾದರಿಗಳು ಅಸಹ್ಯಕರ ಸನ್ನಿವೇಶಗಳನ್ನು ಅಥವಾ ರಾಜಕೀಯ, ಧಾರ್ಮಿಕವಾಗಿ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ವಿವಾದ ಉಂಟುಮಾಡಬಹುದಾದ ಅಂಶಗಳನ್ನು ಒಳಗೊಂಡಿರಬಾರದು.

• ಸ್ಪರ್ಧೇಗಾಗಿ ಸಿದ್ದಪಡಿಸಿ ಸಲ್ಲಿಸುವ ಮಾದರಿಗಳನ್ನು ಹಿಂತಿರುಗಿಸಲಾಗುವುದಿಲ್ಲ, ಅವುಗಳನ್ನು ಬಳಸಿಕೊಳ್ಳುವ ಹಕ್ಕನ್ನು ಜಿಲ್ಲಾ ಪಂಚಾಯತ್ ಹೊಂದಿರುತ್ತದೆ.

• ಕಸದಿಂದ ವಿಸ್ಮಯ- ತ್ಯಾಜ್ಯ ವಸ್ತುಗಳ ಸದ್ಬಳಕೆಯ ಮಾದರಿಗಳ ನಿರ್ಮಾಣ ಸ್ಪರ್ಧೆಯು ಈ ಕೆಳಗಿನ ಬಹುಮಾನಗಳನ್ನು ಒಳಗೊಂಡಿರುತ್ತದೆ.

• ಸ್ಪರ್ಧೇಯ ವಿಜೇತರ ಹೆಸರುಗಳನ್ನು ದಿನಪ್ರತಿಕೆಯಲ್ಲಿ/ಗ್ರಾ.ಪಂ ನೋಟಿಸು ಬೋರ್ಡ್ ಗಳಲ್ಲಿ ಪ್ರಕಟಿಸಲಾಗುವುದು.

ಪ್ರಥಮ ಬಹುಮಾನ- 15000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ

ದ್ವಿತೀಯ ಬಹುಮಾನ-10000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ

ತೃತೀಯಾ ಬಹುಮಾನ-5000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ

5 ಸಮಾಧಾನಕರ ಬಹುಮಾನ-ತಲಾ1000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ


ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9845924148/9964443064 ಅಥವಾ ಸಮೀಪದ ಗ್ರಾಮ ಪಂಚಾಯತ್ ಕಛೇರಿಯನ್ನು ಸಂಪರ್ಕಿಸಬಹುದು.        

 ಜಾಹೀರಾತು 

 
 

 

                                                                                                                             


MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget