ಹೆಬ್ರಿ ಸಮೀಪದ ಮುದ್ರಾಡಿ ಮಲೆನಾಡ ಸಿರಿ ಸಾಂಸ್ಕೃತಿಕ ಜಾನಪದ ಕಲಾ ಸಂಘಟನೆಯ ವತಿಯಿಂದ ಮುದ್ರಾಡಿ ನಾಟ್ಕದೂರಿನ ಬಯಲು ರಂಗಮಂದಿರದಲ್ಲಿ ಭಾನುವಾರ ರಾತ್ರಿ ನಡೆದ 26 ನೇ ಸಾಂಸ್ಕೃತಿಕ ಸಂಭ್ರಮವನ್ನು ಧರ್ಮಯೋಗಿ ಮೋಹನ್ ಉದ್ಘಾಟಿಸಿದರು.
ನಮ ತುಳುವೆರ್ ಕಲಾ ಸಂಘಟನೆಯ ಕಲಾವಿದರಾದ ವಾಣಿ ಸುಕುಮಾರ್ ಮತ್ತು ಸುಗಂಧಿ ಉಮೇಶ್ ಕಲ್ಮಾಡಿ ಅಭಿನಯದ ಗುರುರಾಜ್ ಮಾರ್ಪಳ್ಳಿ ರಚಿಸಿ ನಿರ್ದೇಶಿಸಿದ ಅವ್ವ ನನ್ನವ್ವ ನಾಟಕ ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಸಂಭ್ರಮವನ್ನು ಧರ್ಮಯೋಗಿ ಮೋಹನ್ ಉದ್ಘಾಟಿಸಿದರು.
ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ,ಸದಸ್ಯರಾದ ಗಣಪತಿ ಮುದ್ರಾಡಿ, ಶುಭದರ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರು,ಗಣ್ಯರು ಇದ್ದರು. ಸಂಸ್ಥೆಯ ಅಧ್ಯಕ್ಷ ಸುಧನ್ವ ಮುದ್ರಾಡಿ ಸ್ವಾಗತಿಸಿದರು.
ಜಾಹೀರಾತು
Post a comment