ವಾರೀಸುದಾರರಿಲ್ಲದ ಶವದ ಅಂತ್ಯಕ್ರಿಯೆ ನಡೆಸಿದ ಪುರಸಭಾ ಸದಸ್ಯ ಶುಭದ್ ರಾವ್ ಹಾಗೂ ಸ್ನೇಹಿತರು-Times of karkala Video+News

ಕಳೆದ ಹಲವು ದಿನಗಳಿಂದ ಸರಕಾರಿ ಆಸ್ಪತ್ರೆಯಲ್ಲಿ  ವಾರೀಸುದಾರಿಲ್ಲದೆ ಅನಾಥವಾಗಿದ್ದ ಶವದ ಅಂತ್ಯಕ್ರಿಯೆಯನ್ನು ಕರಿಯಕಲ್ಲು‌ ಹಿಂದೂ ರುದ್ರಭೂಮಿಯಲ್ಲಿ ನಡೆಸುವ  ಮೂಲಕ ಪುರಸಭಾ ಸದಸ್ಯ ಹಾಗೂ ಅವರ ಮಿತ್ರರು ಅಂತಿಮವಾಗಿ ಮುಕ್ತಿ ನೀಡಿದ್ದಾರೆ. 


ಶನಿವಾರ  ಮಧ್ಯಾಹ್ನ ಶವದ ಅಂತ್ಯಕ್ರಿಯೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡು ಶವ ತರಲು ಆಸ್ಪತ್ರೆಗೆ ತೆರಳಿದಾಗ  ವಾರೀಸುದಾರೆಂದು ಹೇಳಿಕೊಂಡು  ಬಂದವರು ಶವವನ್ನು ‌ನಮಗೆ  ಬಿಟ್ಟು ಕೊಡಿ ನಾವೇ ಅದರ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ವಿಂತಿಸಿಕೊಂಡ ಮೇರೆಗೆ ಅದಕ್ಕೆ ಒಪ್ಪಿ ಇಲ್ಲಿ ನಡೆಸಿದ ಎಲ್ಲಾ ತಯಾರಿಗಳನ್ನು ಬಿಟ್ಟು ತೆಗೆದ ಹೊಂಡವನ್ನೂ ಮುಚ್ಚಿ ಎಲ್ಲರೂ ಮನೆಗೆ ತೆರಳಿದ್ದರು.

ಆದರೆ ಇತ್ತ ಆಸ್ಪತ್ರೆಯಲ್ಲಿ ಸಂಬಂದಿಕರು  ಎಂದು ಬಂದಿದ್ದ ವ್ಯಕ್ತಿಗಳಲ್ಲಿ ಗುರುತು ಚೀಟಿ ಕೇಳಿದಾಗ ಅವರು ತಮ್ಮ ಮಾತನ್ನು ‌ಬದಲಾಯಿಸಿ ನಮಗಾರಿಗೂ ಈ ಶವ ಬೇಡ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ‌ ಎಂದು ಅಲ್ಲಿಂದ ತೆರಳಿದರು.ಸಂಜೆ ವೇಳೆಗೆ ಇದರ ಮಾಹಿತಿ‌ ಪಡೆದ ಶುಭದ ರಾವ್ ಮತ್ತು ಅವರ ಮಿತ್ರರು‌ ಮತೊಮ್ಮೆ ಬೇಕಾಗುವ ಎಲ್ಲಾ ಸಿದ್ದತೆಗಳನ್ನು‌ ಮಾಡಿ ಶವದ  ಅಂತ್ಯಕ್ರಿಯೆ ನಡೆಸಿದರು.ಈ ಸಂದರ್ಭ ಸಾಮಾಜಿಕ ‌ಕಾರ್ಯಕರ್ತೆ ಆಯಿಷಾ, ಅನಂತಕೃಷ್ಣ ಶೆಟ್ಟಿ, ನಾಗೇಶ್ ಹೆಗ್ಡೆ, ನವೀನ್, ಚೇತನ್, ಸುರೇಶ ದೇವಾಡಿಗ,   ರಾಜಾರಾಮ್ ಕಾಮತ್, ಸುರೇಂದ್ರ, ರಾಜರಾಮ್‌ ರಾವ್, ಸಹಕರಿಸಿದರು.


"ಹುಟ್ಟಿದ ವ್ಯಕ್ತಿಗೆ ಸಾವು ಖಚಿತ, ಮೃತ ವ್ಯಕ್ಕಿಯ ಅಂತ್ಯಕ್ರಿಯೆ ಗೌರವಪೂರ್ಣವಾಗಿ ನಡೆಸುವುದು ಕರ್ತವ್ಯ, ಹಾಗಾಗಿ ನಾನು ನನ್ನ ಕರ್ತವ್ಯ‌ಮಾಡಿದ್ದೇನೆ ಇದನ್ನು  ಮುಂದುವರೆಸುತ್ತೇನೆ"

ಶುಭದ ರಾವ್.

 

 ಜಾಹೀರಾತು  


 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget