ಕಾರ್ಕಳ ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆ, ಶಾಸಕರ ಮೌನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪುರಸಭಾ ಸದಸ್ಯ ಶುಭದ ರಾವ್-Times of karkala

ಕಾರ್ಕಳ ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುವುದರ ಜೊತೆಗೆ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ ಈ ಬಗ್ಗೆ ಶಾಸಕರು ಮೌನವಹಿಸಿದ್ದಾರೆ ಎಂದು ಪುರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾರ್ಕಳ ಪುರಸಭೆಯಲ್ಲಿ 93 ಸಿಬ್ಬಂದಿಗಳ ಮಂಜೂರಾತಿ ಇದ್ದರೂ ಈಗ ಕೇವಲ 34 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದಾರೆ.ರಾಜ್ಯದಲ್ಲಿ ತನ್ನದೇ  ಸರಕಾರವಿದ್ದರೂ ಯಾವುದೇ ಕ್ರಮ ಜರುಗಿಸದೆ ಮೌನವಾಗಿರುವ ಕಾರ್ಕಳ ಶಾಸಕರು ಪುರಸಭಾ ‌ಸದಸ್ಯರು‌ ಹಾಗೂ‌ ಸಾರ್ವಜನಿಕರ ಉಗ್ರ ಪ್ರತಿಭಟನೆ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಸಿದ್ದಾರೆ. 

ಪುರಸಭೆಯ ಪ್ರಮುಖ ಹುದ್ದೆಗಳಾದ ಪರಿಸರ ಅಭಿಯಂತರರು, ಕಿರಿಯ ಪರಿಸರ ಅಭಿಯಂತರರು, ಮತ್ತು ಎರಡು ಸಿವಿಲ್ ಇಂಜಿನಿಯರ್ ಹುದ್ದೆಗಳು ಖಾಲಿಯಾಗಿದ್ದು ಸಿಬ್ಬಂದಿಗಳ ಕೊರತೆಯಿಂದ ಪುರಸಭೆ ನಲುಗುತಿದೆ.ಪ್ರಸ್ತುತ ಇದ್ದ ಒಬ್ಬ ಇಂಜಿನಿಯರು ಕೂಡ ವರ್ಗಾವಣೆ ಯಾಗಿರುವ ಕಾರಣ ಇಂಜಿನಿಯರೇ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಏಕೈಕ ಪುರಸಭೆ ನಮ್ಮದು ಎನ್ನುವ ಬೇಸರ ಜನಪ್ರತಿನಿಧಿಗಳಾದ ನಮ್ಮನ್ನು ‌ಕಾಡುತಿದೆ. ಕೆಲವು ದಕ್ಷ ಸಿಬ್ಬಂದಿಗಳ ವರ್ಗಾವಣೆಗೆ ಮುಖ್ಯಾಧಿಕಾರಿಯವರ ಕುಮ್ಮಕ್ಕೇ ಕಾರಣ.

ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಾಧಿಕಾರಿಯವರನ್ನು ಉಳಿಸಿಕೊಂಡು ಅಗತ್ಯವಿರುವ ಸಿಬ್ಬಂದಿಗಳ ವರ್ಗಾವಣೆ ಮಾಡಿರುವ ಶಾಸಕರ ನಡೆಯ ಬಗ್ಗೆ ನಮಗೆ ಅನುಮಾನವಿದೆ. ಪುರಸಭೆಯಲ್ಲಿ ನಿಮ್ಮದೇ ಪಕ್ಷದ ಆಡಳಿತವಿದ್ದರೂ ಆಡಳಿತಕ್ಕೂ ಅಧಿಕಾರಿ ವರ್ಗಕ್ಕೂ ಹೊಂದಾಣಿಕೆ ಇಲ್ಲದಿರುವುದು ನಿಮ್ಮ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿಯಾಗಿದೆ ಸ್ವರ್ಣ ಕಾರ್ಕಳದ  ಕಲ್ಪನೆ ಅಂದರೆ ಇದೆಯೇ? ಎಂದು ಅವರು ಉತ್ತರಿಸಬೇಕಾಗಿದೆ. ಪುರಸಭಾ ಚುನಾವಣಾ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಕಾಲಿಗೆ ಬೀಳುತ್ತಿದ್ದ ಕೆಲವು ನಾಯಕರು ಮತ್ತು ಜನಪ್ರತಿನಿಧಿಗಳು ಈಗ ಕಾಣೆಯಾಗಿದ್ದಾರೆ ಶಾಸಕರು ಈ ಬಗ್ಗೆ ಮೌನ ಮುರಿದು ಮಾತನಾಡಬೇಕು  ಇಲ್ಲವಾದರೆ ಈ ಅವ್ಯವಸ್ಥೆಗೆ  ನೀವೇ ಕಾರಣ ಎಂದು ಒಪ್ಪಿ ಕೊಂಡಂತಾಗುತ್ತದೆ ಎಂದು ಶುಭದರಾವ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ಜಾಹೀರಾತು 

ಬಜಗೋಳಿಯ  ಕೂಷ್ಮಾ೦ಡಿನಿ ಪ್ರಸಾದ ಕಾಂಪ್ಲೆಕ್ಸ್ ನಲ್ಲಿ ದಿನಾಂಕ 13-04-2021  ಮಂಗಳವಾರದಂದು  ಎಲೆಕ್ಟ್ರಿಕ್  ಸ್ಕೂಟರ್ ಮಳಿಗೆ ಶುಭಾರಂಭಗೊಳ್ಳಲಿದೆ. 
 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget