ನೆಲ್ಲಿಯ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು--ರಮಿತಾ ಶೈಲೇಂದ್ರ ರಾವ್ -Times of karkala

 

ನೆಲ್ಲಿಯ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು : 

    ನೆಲ್ಲಿಕಾಯಿ ಅಂದೋಡನೆ ಬಾಯಿ ಯಲ್ಲಿ ನೀರು, ಇದು ಹೆಚ್ಚಾಗಿ ಮಲೆನಾಡಿನ ಬೆಟ್ಟದ ಪ್ರದೇಶದಲ್ಲಿ ಕಂಡುಬರುತ್ತದೆ. ಆದ್ದರಿಂದ ಇದನ್ನು ಬೆಟ್ಟದ ನೆಲ್ಲಿಕಾಯಿ ಎಂದು ಕರೆಯುತ್ತಾರೆ. ಮುಖ್ಯವಾಗಿ ನೆಲ್ಲಿಕಾಯಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದರಲ್ಲಿ ರಾಜನೆಲ್ಲಿ ಅನ್ನೋ ಪ್ರಭೇದವು ನಮ್ಮ ಸುತ್ತಮುತ್ತ ಕಾಣಸಿಗುವುದು.  ನೆಲ್ಲಿಕಾಯಿಯನ್ನು ಆಹಾರದಲ್ಲೂ ಉಪಯೋಗಿಸುತ್ತಾರೆ. ಹಾಗು ಇದನ್ನು ಹಬ್ಬದ ದಿನಗಳಲ್ಲಿ, ಅಂದರೆ ದೀಪಾವಳಿ ಮತ್ತು ಕಾರ್ತೀಕ ಮಾಸದ ತುಳಸಿ ಮದುವೆಗಳಲ್ಲಿ ನೆಲ್ಲಿಕಾಯಿಗೆ ತುಂಬಾ ಮಹತ್ವವಿದೆ.

ನೆಲ್ಲಿಕಾಯಿಯು ಹುಳಿಯ ಜೊತೆಗೆ, ಸ್ವಲ್ಪ ಕಹಿಯ ರುಚಿಯನ್ನು ಹೊಂದಿರುತ್ತದೆ. ಆದರೆ ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ, ಸಿಹಿಯ ಅನುಭವಾಗುತ್ತದೆ. ನೆಲ್ಲಿಕಾಯಿಯನ್ನು ನೇರವಾಗಿ ತಿನ್ನಲು ಇಚ್ಚಿಸದವರು ಅದನ್ನು ಉಪ್ಪಿನಕಾಯಿ, ಚಟ್ನಿ, ಹಾಗು ತಂಬುಳಿಗಳನ್ನಾದರೂ ಮಾಡಿಕೊಂಡು ಸೇವಿಸಬಹುದು. ಬಹಳಷ್ಟು ಜನರು ನೆಲ್ಲಿಕಾಯಿಯನ್ನು ಒಣಗಿಸಿಕೊಂಡು ವರ್ಷಪೂರ್ತಿ ಉಪಯೋಗಿಸುತ್ತಾರೆ. ನೆಲ್ಲಿಕಾಯಿಯ ಗಿಡದ ಬೇರು, ಎಲೆ, ಕಾಯಿ ಎಲ್ಲವು ಔಷಧಿ ಗುಣಗಳನ್ನು ಹೊಂದಿವೆ. ನೆಲ್ಲಿಕಾಯಿ ಗಿಡವು ಚಳಿಗಾಲದ ಸಮಯದಲ್ಲಿ ಕಾಯಿ ಬಿಡುತ್ತದೆ. ಅಕ್ಟೊಬರ್ ನಿಂದ ಜನವರಿವರೆಗೂ ನಾವು ನೆಲ್ಲಿಕಾಯಿಯನ್ನು ಕಾಣಬಹುದು.


ಆಹಾರದಲ್ಲಿ ನೆಲ್ಲಿಕಾಯಿ :


ಸಾಮಗ್ರಿ: ನೆಲ್ಲಿಕಾಯಿ-5, ಜೀರಿಗೆ-ಕಾಲು ಚಮಚ, ಕಾಳುಮೆಣಸು-ಅರ್ಧ ಚಮಚ, ಶುಂಠಿ-1 ಚೂರು, ಉಪ್ಪು-ರುಚಿಗೆ ತಕ್ಕಷ್ಟು, ಪುದೀನ ಎಲೆ-4,ಕರಿಬೇವು ಎಲೆ-4.


ವಿಧಾನ: ನೆಲ್ಲಿಕಾಯಿಗಳನ್ನು ಕತ್ತರಿಸಿ ಬೀಜ ತೆಗೆದು ಮೇಲಿನ ಸಾಮಗ್ರಿ ಮತ್ತು ನೀರು ಸೇರಿಸಿ ಮಿಕ್ಸ್‌ ಜಾರ್‌ಗೆ ಹಾಕಿ ಅರೆದು ಸೋಸಿ ಸ್ವಲ್ಪ ಬೆಲ್ಲ ಹಾಕಿ ಕುಡಿಯಿರಿ.


ಸಿಹಿನೆಲ್ಲಿ ಮುರಬ್ಬ : 

ಸಾಮಗ್ರಿ: ನೆಲ್ಲಿ ಕಾಯಿ ಅರ್ಧ ಕೆ.ಜಿ, ಸಕ್ಕರೆ ಕಾಲು ಕೆ.ಜಿ, ಏಲಕ್ಕಿ 2-3.

ವಿಧಾನ: ನೆಲ್ಲಿಕಾಯಿಯನ್ನು ಸಣ್ಣ ಹೋಳುಗಳಾಗಿ ಮಾಡಿಟ್ಟುಕೊಳ್ಳಿರಿ, ಇದಕ್ಕೆ ಸಕ್ಕರೆಯನ್ನು ಹಾಕಿ. ಇದು ನೆಲ್ಲಿ ರಸದೊಂದಿಗೆ ಬೆರೆತು ನೀರಾಗಿ ಅದರಲ್ಲೇ ಚೆನ್ನಾಗಿ ಕುದಿಯಲು ಪ್ರಾರಂಭವಾದಾಗ 10 ನಿಮಿಷ ಕುದಿಸಿರಿ. ನಂತರ ಏಲಕ್ಕಿ ಪುಡಿ ಹಾಕಿ ತಣ್ಣಗಾಗಲು ಬಿಡಿ ನಂತರ ಬಸಿದು ಹೋಳುಗಳನ್ನು ಬಿಸಿಲಿನಲ್ಲಿ 4-5 ದಿನ ಚೆನ್ನಗಿ ಒಣಗಿಸಿದರೆ ನೆಲ್ಲಿ ಸಿಹಿ ಅಡಕೆ ರೆಡಿ.


 ವಿಟಮಿನ್ ‘ಸಿ’ ಕೊರತೆಯಿದ್ದಾಗ ಮಕ್ಕಳಿಗೆ ಇದನ್ನು ನೀಡಬಹುದು. ಎಷ್ಟು ದಿನ ಇಟ್ಟರೂ ಕೆಡುವುದಿಲ್ಲ!


ಮನೆಗೊಂದು ನೆಲ್ಲಿ ಗಿಡ ನೆಟ್ಟು ಅರೋಗ್ಯವನ್ನು ರಕ್ಷಿಸೋಣ


-ರಮಿತಾ ಶೈಲೇಂದ್ರ ರಾವ್ 

 ಜಾಹೀರಾತು 

ಬಜಗೋಳಿಯ  ಕೂಷ್ಮಾ೦ಡಿನಿ ಪ್ರಸಾದ ಕಾಂಪ್ಲೆಕ್ಸ್ ನಲ್ಲಿ ದಿನಾಂಕ 13-04-2021  ಮಂಗಳವಾರದಂದು  ಎಲೆಕ್ಟ್ರಿಕ್  ಸ್ಕೂಟರ್ ಮಳಿಗೆ ಶುಭಾರಂಭಗೊಳ್ಳಲಿದೆ. 
 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget