ಬಂಗ್ಲೆಗುಡ್ಡೆ ಕೂಡುಬೆಟ್ಟು ಕೂಡುರಸ್ತೆ:ನಿಧಾನಗತಿಯ ಕಾಮಗಾರಿಯಿಂದ ಗ್ರಾಮಸ್ಥರಿಗೆ ನಿತ್ಯ ತೊಂದರೆ-Times of karkala

ನಿಧಾನ ಗತಿಯ ಕಾಮಗಾರಿ,ರಸ್ತೆಯ ಮಧ್ಯೆ ಜಲ್ಲಿಯ ರಾಶಿ, ಬದಿಯಲ್ಲಿ ಅಸಮರ್ಪಕ ಚರಂಡಿ  ಇದು ಕೂಡುಬೆಟ್ಟು ಬಂಗ್ಲೆಗುಡ್ಡೆ ಸಂಪರ್ಕಿಸುವ ರಸ್ತೆಯ ಸವಾರರ ದಿನನಿತ್ಯದ ಗೋಳು 


ಹೌದು...ಇದು ಕೂಡುಬೆಟ್ಟುನಿಂದ  ಬಟ್ಟಹೊಳೆರಸ್ತೆಯಾಗಿ ಬಂಗ್ಲೆಗುಡ್ಡೆ ಸಂಪರ್ಕಿಸುವ ರಸ್ತೆಯ ದುರವಸ್ಥೆ.ಸುಮಾರು 6 ಕೋಟಿ ರೂಪಾಯಿ ವೆಚ್ಚದ ರಸ್ತೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ರಸ್ತೆದುರಸ್ತಿಗೆ ಗುದ್ದಲಿಪೂಜೆ ನಡೆದು ಆರೇಳು ತಿಂಗಳುಗಳಾದರೂ ಇನ್ನೂ ಕೆಲಸ ಪೂರ್ಣಗೊಂಡಿಲ್ಲ.ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಇಲ್ಲಿ ವಾಸಿಸುವ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಅಲ್ಲದೆ ರಸ್ತೆಯಲ್ಲಿರುವ ಜಲ್ಲಿಹುಡಿ,ಮಣ್ಣಿನ ಧೂಳು ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನ, ಆಟೋ ಇತರೆ ವಾಹನಗಳ ಪ್ರಯಾಣಿಕರಿಗೆ ಕಣ್ಣಿಗೆ ರಾಚುತ್ತಿದ್ದು , ವಾಹನ ಸವಾರರು ಇನ್ನಿಲ್ಲದ ಕಿರಿಕಿರಿ ಅನುಭವಿಸುವಂತಾಗಿದೆ.

ಕಾಮಗಾರಿ ಆರಂಭವಾಗಿ ಹಲವು ತಿಂಗಳುಗಳಾದರೂ ಎಲ್ಲ ಕೆಲಸ ನಿಧಾನವಾಗಿ ನಡೆಯುತ್ತಿದೆ. ಹೀಗಾಗಿ ಅಗೆದು ಅಸ್ತವ್ಯಸ್ತ ಮಾಡಿದ,ಮಳೆಯಿಂದ ಕೆಸರುಮಯವಾದ ಹಾಗೂ ಜಲ್ಲಿಯಿಂದ ತುಂಬಿಹೋದ ರಸ್ತೆಯಲ್ಲಿ  ವೃದ್ಧರು, ಮಕ್ಕಳು, ಮಹಿಳೆಯರು ವಾಹನಸವರಾರು ಸಂಚರಿಸುವುದೇ ಕಠಿಣವಾಗಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ.

ಗುದ್ದಲಿ ಪೂಜೆ ನಡೆದು ಏಳು ತಿಂಗಳುಗಳಾದರೂ ಡಾಮರೀಕರಣ ಪೂರ್ಣಗೊಂಡಿಲ್ಲ.ತುರ್ತು ಸಂಧರ್ಭದಲ್ಲಿ ಮಾಳ ಅಥವಾ ಕೆರ್ವಾಶೆಗೆ ಹೋಗಬೇಕಾದಲ್ಲಿ  ರಿಕ್ಷಾ ಚಾಲಕರೂ ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ.ಈಗಾಗಲೇ ಈ ರಸ್ತೆಯಲ್ಲಿ ಹಲವಾರು ಬಾರಿ ಅಪಘಾತಗಳು ಸಂಭವಿಸಿದ್ದು ಗ್ರಾಮಸ್ಥರೇ ಆಸ್ಪತ್ರೆಗೆ ಸೇರಿಸಿದ್ದಾರೆ.ಸದ್ಯ ರಸ್ತೆಯ ಈ ಅವಸ್ಥೆಗೆ ರೋಸಿಹೋಗಿರುವ ಗ್ರಾಮಸ್ಥರು ಸಂಬಂಧಪಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಜಾಹೀರಾತು 

 
 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget