ಕಾರ್ಕಳ:ಗೋಕಳ್ಳತನ ತಡೆಗಟ್ಟುವಂತೆ ಬಜರಂಗದಳ ಮನವಿ-Times of karkala

ಕಾರ್ಕಳ ತಾಲೂಕಿನಾದ್ಯಂತ ಕೆಲವು ದಿನಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಗೋ ಕಳ್ಳತನವು ತಾಲೂಕಿನ ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಪಶುಸಂಗೋಪನೆವನ್ನೇ ಜೀವನಾಧಾರ ಮಾಡಿಕೊಂಡು ಬದುಕುತ್ತಿರುವ ಹಲವು ಕುಟುಂಬಗಳು ಕಂಗಾಲಾಗಿವೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯ ನಂತರವೂ ಯಾವುದೇ ಭಯವಿಲ್ಲದೆ ಹಟ್ಟಿಯಿಂದಲೆ ಗೋವನ್ನು ಕದ್ದುಕೊಂಡು ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಪೋಲಿಸ್ ಇಲಾಖೆ ಅಕ್ರಮ ಗೋ ಸಾಗಾಟ ಮತ್ತು ಗೋ ಕಳ್ಳತನದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಮನವಿ ನೀಡಿದರು. ಬಜರಂಗದಳ ಕರ್ನಾಟಕ ಪ್ರಾಂತ ಸಂಯೋಜಕ್ ಸುನಿಲ್ ಕೆ ಆರ್ ಹಾಗೂ ಬಜರಂಗದಳದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.


 ಜಾಹೀರಾತು 

 
 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget