ಕಾರ್ಕಳ:ಕೊರೊನಾ ಮಹಾಮಾರಿಯಿಂದ ಎಲ್ಲಾ ಉದ್ಯಮ ನೆಲಕಚ್ಚಿದರೂ ಕೃಷಿ ಕ್ಷೇತ್ರ ಗಟ್ಟಿಯಾಗಿದೆ: ಹರೀಶ್ ನಾಯಕ್ ತೆಂಗು ಬೆಳೆ ಸಮಗ್ರ ನಿರ್ವಹಣೆ ತರಬೇತಿ ಕಾರ್ಯಾಗಾರ-Times of karkala

 ಕಾರ್ಕಳ:ಕೊರೊನಾ ಸಾಂಕ್ರಾಮಿಕ ಖಾಯಿಲೆಯಿಂದ ಜಾಗತಿಕವಾಗಿ ಎಲ್ಲಾ ಉದ್ಯಮಗಳು ಪಾತಾಳಕ್ಕೆ  ಕುಸಿದಿದ್ದರೂ ಕೃಷಿ ಕ್ಷೇತ್ರ ಮಾತ್ರ ಅತ್ಯಂತ ಸಧೃಡವಾಗಿದ್ದು ರೈತರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಕಾರ್ಕಳ ತಾ.ಪಂ ಉಪಾಧ್ಯಕ್ಷ ಹರೀಶ್ ನಾಯಕ್ ಹೇಳಿದರು.

ಅವರು ಸೋಮವಾರ ಅಜೆಕಾರು ರಾಮ ಮಂದಿರದಲ್ಲಿ ನಡೆದ ತೆಂಗು ಬೆಳೆ ಸಮಗ್ರ ನಿರ್ವಹಣೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಕೃಷಿಯನ್ನು ನಂಬಿದವರಿಗೆ ಕೃಷಿ ನೆಮ್ಮದಿಯ ಬದುಕು ಕಲ್ಪಿಸುತ್ತದೆ .ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳ ಶ್ರಮ ಅಪಾರ. ಇಂತಹ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಂಡಾಗ ಕೃಷಿಯು ಲಾಭದಾಯಕವಾಗಲು ಸಾಧ್ಯವೆಂದರು.

ಮರ್ಣೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿತಜ್ಞ ಡಾ.ಚೈತನ್ಯ ರಾವ್ ,ಮರ್ಣೆ ಗ್ರಾಮ ಪಂಚಾಯತಿ ಪಿಡಿಓ ತಿಲಕ್ ರಾಜ್, ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಆಚಾರ್ಯ, ಹರೀಶ್ ಪೂಜಾರಿ,ಯಶೋಧ ಶೆಟ್ಟಿ, ಜಾನ್ ಟೆಲ್ಲಿಸ್, ಅಬ್ದುಲ್ ಗಫೂರ್ ಮುಂತಾದವರು ಉಪಸ್ಥಿತರಿದ್ದರು.ಕಾರ್ಕಳ ತೋಟಗಾರಿಕಾ ಇಲಾಖೆಯ  ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿವೃತ್ತ ಜೇನು ಪ್ರದರ್ಶಕ ಅಧಿಕಾರಿ ಲಕ್ಷಣ ನಾಯ್ಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ತೆಂಗು‌ಬೆಳೆಯ ಕುರಿತು ಡಾ.ಚೈತನ್ಯ ರಾವ್ ಅವರು ರೈತರೊಂದಿಗೆ ವಿಚಾರ ವಿನಿಮಯ ನಡೆಸಿ ರೈತರಿಗೆ ಸೂಕ್ತ ಮಾಹಿತಿ ನೀಡಿದರು.

 ಜಾಹೀರಾತು 



 




 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget