ಕಾರ್ಕಳ:ಎಂಪಿಎಂ ಕಾಲೇಜಿಗೆ ಎರಡು ಚಿನ್ನದ ಪದಕ-Times of karkala

 ದಿನಾಂಕ 10.04.2021ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 29ನೆಯ ಘಟಿಕೋತ್ಸವದಲ್ಲಿ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಎರಡು ಚಿನ್ನದ ಪದಕಗಳನ್ನು ಗಳಿಸಿದೆ.

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆ೦ಟ್ಸ್ ಆಫ್ ಇಂಡಿಯಾ ಸಂಸ್ಥೆಯು, ಪ್ರತಿ ವರ್ಷ ವಿಶ್ವದ್ಯಾನಿಲಯದ ಬಿಕಾಂ ಪದವಿಯ ಐದನೇ ಮತ್ತು ಆರನೇ ಸೆಮೆಸ್ಟರ್ ನ ಪರೀಕ್ಷೆಗಳ ಫೈನಾನ್ಶಿಯಲ್ ಅಕೌಂಟೆನ್ಸಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೊಡಮಾಡಿರುವ ಈ ಚಿನ್ನದ ಪದಕವನ್ನು ಎರಡೂ ಸೆಮಿಸ್ಟರ್ ಗಳಲ್ಲಿ ನೂರೈವತ್ತು ಅಂಕಗಳಿಗೆ ನೂರೈವತ್ತು ಅಂಕಗಳನ್ನು ಗಳಿಸಿದ ಬಿಕಾಂನಲ್ಲಿ ಎರಡನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಸಹನಾ ಭಟ್ ಕೆ. ಹಾಗೂ ಪ್ರಸ್ತುತ ಇದೇ ಕಾಲೇಜಿನ ಪ್ರಥಮ ವರ್ಷದ ಎಂ.ಕಾo.ವಿದ್ಯಾರ್ಥಿನಿಯಾಗಿರುವ ರಶ್ಮಿ ಭಟ್ ಪಡೆದು ಕಾಲೇಜಿನ ಕೀರ್ತಿಯ ಕಿರೀಟಕ್ಕೆ ಇನ್ನೆರಡು ಗರಿಗಳನ್ನು ಜೋಡಿಸಿರುತ್ತಾರೆ. 

ಇವರಿಗೆ ಕಾಲೇಜು ಅಭಿವೃಧ್ದಿ ಸಮಿತಿ, ಕಾಲೇಜಿನ ಸಮಸ್ತ ಸಿಬಂದಿ ವರ್ಗ ಹಾಗೂ ಎಲ್ಲರೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.

 ಜಾಹೀರಾತು 

ಬಜಗೋಳಿಯ  ಕೂಷ್ಮಾ೦ಡಿನಿ ಪ್ರಸಾದ ಕಾಂಪ್ಲೆಕ್ಸ್ ನಲ್ಲಿ ದಿನಾಂಕ 13-04-2021  ಮಂಗಳವಾರದಂದು  ಎಲೆಕ್ಟ್ರಿಕ್  ಸ್ಕೂಟರ್ ಮಳಿಗೆ ಶುಭಾರಂಭಗೊಳ್ಳಲಿದೆ. 
 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget