ರೆಂಜಾಳ:ಚುಚ್ಚುಮದ್ದು ತೆಗೆದುಕೊಂಡ ಕೆಲವೇ ಸಮಯದಲ್ಲಿ ಬಾಯಲ್ಲಿ ನೊರೆಬಂದು ಸಾವನ್ನಪ್ಪಿದ ಮಗು!-Times of karkala

ರೆಂಜಾಳ:ಚುಚ್ಚುಮದ್ದು ತೆಗೆದುಕೊಂಡ ಕೆಲವೇ ಸಮಯದಲ್ಲಿ ಬಾಯಲ್ಲಿ ನೊರೆಬಂದು ಸಾವನ್ನಪ್ಪಿದ ಮಗು!


ರೆಂಜಾಳ:ಚುಚ್ಚುಮದ್ದು ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಮಗುವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ರೆಂಜಾಳ ಗ್ರಾಮದಲ್ಲಿ ನಡೆದಿದೆ.ಶ್ರೀಯಾನ್ (4.5 ತಿಂಗಳು ) ಮೃತಪಟ್ಟ ಮಗು.

ಶ್ರೀಯಾನ್‌ ಗೆ ದಿನಾಂಕ 07/04/2021 ರಂದು ಮದ್ಯಾಹ್ನ 12:30 ಗಂಟೆಗೆ  ಕಾರ್ಕಳ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಆರೋಗ್ಯ ಕೇಂದ್ರದ ಶುಶ್ರೂಕಿಯರು ಚುಚ್ಚು ಮದ್ದು ನೀಡಿದ್ದರು.

ಅದಾದ ಬಳಿಕ ಮನೆಗೆ ಕರೆದುಕೊಂಡು ಬಂದಿದ್ದು  ಮದ್ಯಾಹ್ನ 02:30  ರ ಹೊತ್ತಿಗೆ ಶ್ರೀಯಾನ್‌ ಬಾಯಿಯಲ್ಲಿ ನೊರೆ ಬಂದಿದ್ದಲ್ಲದೆ ತೀವೃ ರೀತಿಯಲ್ಲಿ ಅಸ್ವಸ್ಥಗೊಂಡಿತ್ತು.ಕಾರ್ಕಳ ರೋಟರಿ ಪೈ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಿದ್ದು  ಸಂಜೆ 06:50 ಗಂಟೆಗೆ ಶ್ರೀಯಾನ್‌ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿರುತ್ತಾರೆ.ಶ್ರೀಯಾನ್‌ಗೆ ರೆಂಜಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿಯವರು  ಚುಚ್ಚುಮದ್ದು ನೀಡಿದ ಅಡ್ಡ ಪರಿಣಾಮದಿಂದಲೇ ಮೃತಪಟ್ಟಿದ್ದಾಗಿ, ಮಗುವಿನ ತಂದೆ ಸುಧಾಕರ ಆರ್‌. ಶೆಟ್ಟಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ವರದಿ:ಕಾರ್ಕಳ: ಮೃತ ಶ್ರೀಯಾನ್‌ ಪ್ರಾಯ 4½ ತಿಂಗಳು ಈತನಿಗೆ ಕಾರ್ಕಳ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಆರೋಗ್ಯ ಕೇಂದ್ರದ ಶುಶ್ರೂಕಿಯರು ದಿನಾಂಕ 07/04/2021 ರಂದು ಮದ್ಯಾಹ್ನ 12:30 ಗಂಟೆಗೆ ತಿಂಗಳ ಚುಚ್ಚು ಮದ್ದು ನೀಡಿರುತ್ತಾರೆ, ನಂತರ ಶ್ರೀಯಾನ್‌ನನ್ನು  ಮನೆಗೆ ಕರೆದುಕೊಂಡು ಬಂದಿದ್ದು ಮದ್ಯಾಹ್ನ 02:30 ಗಂಟೆಯಿಂದ 03:00 ಗಂಟೆಯ ಅವದಿಯಲ್ಲಿ ಶ್ರೀಯಾನ್‌ ಬಾಯಿಯಲ್ಲಿ ನೊರೆ ಬಂದಿದ್ದಲ್ಲದೆ ತೀವೃ ರೀತಿಯಲ್ಲಿ ಅಸ್ವಸ್ಥಗೊಂಡವನನ್ನು ಕಾರ್ಕಳ ರೋಟರಿ ಪೈ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯರು ಸಂಜೆ 06:50 ಗಂಟೆಗೆ ಶ್ರೀಯಾನ್‌ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿರುತ್ತಾರೆ. ಶ್ರೀಯಾನ್‌ಗೆ ರೆಂಜಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿಯವರು  ಚುಚ್ಚುಮದ್ದು ನೀಡಿದ ಅಡ್ಡ ಪರಿಣಾಮದಿಂದಲೇ ಮೃತಪಟ್ಟಿದ್ದಾಗಿ ಮೃತರ ಮರಣದಲ್ಲಿ ಸಂಶಯ ವ್ಯಕ್ತಪಡಿಸಿ ಸುಧಾಕರ ಆರ್‌. ಶೆಟ್ಟಿ (49),ತಂದೆ:ರಾಜು ಶೆಟ್ಟಿ, ವಾಸ:ಗುರುಬೆಟ್ಟು ಮನೆ ಸಾಣೂರು ಗ್ರಾಮ ಮತ್ತು ಅಂಚೆ ಕಾರ್ಕಳ ತಾಲೂಕು  ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 13/2021 ಕಲಂ: 174(3)(IV) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ. 


 ಜಾಹೀರಾತು   

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget