ಕೌಡೂರು:ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವ್ಯಕ್ತಿ-Times of karkala

ಕೌಡೂರುವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿ ಇಂದು (01/04/2021) ಸಂಭವಿಸಿದೆ.ಮೃತವ್ಯಕ್ತಿಯನ್ನು ರಂಗನಪಲ್ಕೆ ನಿವಾಸಿ ಸಾಧು ಪೂಜಾರಿ (65)  ಎಂದು ಗುರುತಿಸಲಾಗಿದೆ.


ಸಾಧು ಪೂಜಾರಿ (65)  ಇಂದು ಬೆಳಿಗ್ಗೆ 7:30 ಗಂಟೆಗೆ ತನ್ನ ಮನೆಯೊಳಗೆ ತೀವೃ ಅಸ್ವಸ್ಥಗೊಂಡು ನೆಲದಲ್ಲಿ ಹೊರಳಾಡುತ್ತಿದ್ದು, ಅವರ ಬಾಯಿಯಿಂದ ಯಾವುದೋ ಕೆಟ್ಟ ವಾಸನೆ ಮತ್ತು ಬಿಳಿ ಬಣ್ಣದ ನೊರೆ ಬರುತ್ತಿತ್ತು.ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದರು.ಸಾಧು ಪೂಜಾರಿ ತನ್ನ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು ಎನ್ನಲಾಗುತ್ತಿದ್ದು ಸಾವಿನ ಸುತ್ತ ಸಾಕಷ್ಟು ಅನುಮಾನ ಮೂಡುತ್ತಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ: 

ಕಾರ್ಕಳ: ಪಿರ್ಯಾದಿದಾರರಾದ ಸಚಿನ್, (25),ತಂದೆ: ನಾರಾಯಣ ಪೂಜಾರಿ, ವಾಸ: ಜಡ್ಡು ಮನೆ, ರಂಗನಪಲ್ಕೆ ಅಂಚೆ, ಕೌಡೂರು ಗ್ರಾಮ, ಕಾರ್ಕಳ ಇವರ ದೊಡ್ಡಪ್ಪ ಸಾಧು ಪೂಜಾರಿ (65) ಎಂಬವರು ಸಚಿನ್‌ ರವರ ಮನೆಯ ಪಕ್ಕದಲ್ಲಿ ಪ್ರತ್ಯೇಕವಾಗಿ ಒಬ್ಬಂಟಿಯಾಗಿ ವಾಸ್ತವ್ಯ ಇದ್ದವರು ದಿನಾಂಕ 01/04/2021 ರಂದು ಬೆಳಿಗ್ಗೆ 7:30 ಗಂಟೆಗೆ ತಾವು ವಾಸ್ತವ್ಯ ಇರುವ ಮನೆಯೊಳಗೆ ತೀವೃ ಅಸ್ವಸ್ಥಗೊಂಡು ನೆಲದಲ್ಲಿ ಹೊರಳಾಡುತ್ತಿದ್ದು, ಅವರ ಬಾಯಿಯಿಂದ ಯಾವುದೋ ಕೆಟ್ಟ ವಾಸನೆ ಮತ್ತು ಬಿಳಿ ಬಣ್ಣದ ನೊರೆ ಬರುತಿದ್ದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯ ವೈದ್ಯರು ಸಾಧು ಪೂಜಾರಿಯವರನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತು  


 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget