ರೆಂಜಾಳ ಶಾಲೆಗೆ ತುಲುಲಿಪಿ ನಾಮಫಲಕ-Times of karkala

ಕಾರ್ಕಳ:ತುಳುನಾಡಿನಲ್ಲಿ ಇತ್ತೀಚೆಗೆ ತುಲುಲಿಪಿ ಅತಿವೇಗದಲ್ಲಿ ಬೆಳೆಯುತ್ತಿದ್ದು, ತಾಲೂಕು ಮಟ್ಟ ಜಿಲ್ಲಾಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಅನೇಕ ಮಂದಿ ತುಳು ಕಲಿತ್ತಿದ್ದಾರೆ.ಇದೀಗ ಗ್ರಾಮೀಣ ಮಟ್ಟದಲ್ಲಿಯೂ ತುಲುಲಿಪಿ ಕಲಿಕೆ ಪ್ರಾರಂಭವಾಗಿದೆ, ಇದಕ್ಕೆ ಪ್ರೋತ್ಸಾಹ ಎಂಬಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರೆಂಜಾಳದಲ್ಲಿ ತುಲುಲಿಪಿ ಇರುವ ನಾಮ ಫಲಕವನ್ನು ಅಳವಡಿಸಲಾಗಿದೆ, 



ಇದು ತುಳುನಾಡಿನಲ್ಲೆ ಪ್ರಥಮ ಬಾರಿಗೆ ಸರಕಾರಿ ಶಾಲೆಗೆ ತುಲುಲಿಪಿ ನಾಮಫಲಕ ಅಳವಡಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಮ ಫಲಕವನ್ನು ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಹರೇಂದ್ರ ರಾವ್‌ರವರು ಉದ್ಘಾಟಿಸಿ ತುಲು ಕಲಿಕೆಗೆ ನಮ್ಮ ಶಾಲೆಯಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಿ ತರಗತಿ ಪ್ರಾರಂಭಿಸುವುದಾಗಿ ತಿಳಿಸಿದರು. 



ಈ ಕಾರ್ಯಕ್ರಮದಲ್ಲಿ  ಪಂಚಾಯತ್ ಅಧ್ಯಕ್ಷರಾದ ದೀಪಿಕಾ ಶೆಟ್ಟಿ,ಶಾಲ ಶಿಕ್ಷಕಿಯಾದ ಶ್ರೀಮತಿ ಮಲ್ಲಿಕಾ ಮುನಿರಾಜ್ ಜೈನ್ ರೆಂಜಾಳ,ಶಾಲಾ SDMC ಅಧ್ಯಕ್ಷರಾದ ಉಮೇಶ್ ಶೆಟ್ಟಿ, ಹೈಸ್ಕೂಲ್ SDMC ಅಧ್ಯಕ್ಷರಾದ ಶ್ರೀಮತಿ ಶೋಭಾ ,ಗ್ರಾಮದ ಹಿರಿಯರಾದ ರಮೇಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ಮಂಟೊಟ್ಟು, ಹಾಗು ಜೈ ತುಳುನಾಡು ಸಂಘಟನೆಯ ಪ್ರಮುಖರಾದ ವಿಶು.ಶ್ರೀಕೇರ,ಶೇಖರ್ ಶ್ರೀಗಂಗೆ, ಸದಸ್ಯರಾದ ಪವನ್ ಕರ್ಕೇರ,ಪ್ರಶಾಂತ್ ಆಚಾರ್ಯ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

 ಜಾಹೀರಾತು 





 




 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget