May 2021

ಕೆಲ ದಿನಗಳ ಹಿಂದೆ ಬಜಗೋಳಿ ಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಪ್ರಭುರವರ ಪತಿ ದಾಮೋದರ್(69) ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.



ಸೋಮವಾರ ಬಜಗೋಳಿ ಕಂಬಳ ಕ್ರಾಸ್ ನಲ್ಲಿ ಸ್ಕೂಟಿಯಲ್ಲಿ ರಸ್ತೆಯಲ್ಲಿ ಸಾಗುವಾಗ ಸಂಧರ್ಭ ದಾಮೋದರ್ ರವರಿಗೆ ಟೆಂಪೋ ಡಿಕ್ಕಿ ಹೊಡೆದಿದ್ದು ಕೂಡಲೇ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೇ.25ರಂದು ತಡರಾತ್ರಿ ಮೃತಪಟ್ಟಿದ್ದಾರೆ.

ಮೃತರು ಪತ್ನಿ,ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನ ಅಗಲಿದ್ದಾರೆ.\

 ಜಾಹೀರಾತು 





ಕೊರೊನಾ ವೈರಸ್ ನಿಂದ ದೇಶದಾದ್ಯಂತ ಹೋಟೆಲ್ ಹಾಗೂ ಬಾರ್  ಉದ್ಯಮಕ್ಕೆ ಭಾರಿ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಕಳೆದ ವರ್ಷದಿಂದ ನಷ್ಟ ದ ಮೇಲೆ ನಷ್ಟ ಉಂಟಾಗಿ ಮಾಲಿಕರ,ನೌಕರರ ಸಮಸ್ಯೆ ಹೆಳತೀರದಾಗಿದೆ.


ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊಟೆಲ್ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ(Tax-free) ನೀಡಬೇಕು ಹಾಗೂ ನೌಕರರಿಗೆ ಸಹಾಯ ಧನ ನೀಡಲೇಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ ಮನವಿ ಮಾಡಿದ್ದಾರೆ.

ಕೊರೊನಾ ಸೃಷ್ಟಿಸಿದ ಲಾಕ್‌ಡೌನ್‌ ಹೊಡೆತಕ್ಕೆ ಹೋಟೆಲ್‌ ಉದ್ಯಮಿಗಳು ಹಾಗೂ ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೋವಿಡ್​ ಮಾರ್ಗಸೂಚಿಯಲ್ಲಿ ಹೋಟೆಲ್‌ಗಳಲ್ಲಿ ಕೇವಲ ಪಾರ್ಸಲ್ ಸೇವೆಗಳಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಆದ್ರೆ ಇದು ಹೋಟೆಲ್​ ಉದ್ಯಮವನ್ನು ಮತ್ತೆ ಸಂಕಷ್ಟಕ್ಕೆ ದೂಡುತ್ತಿದೆ.

ಸದಾ ಗ್ರಾಹಕರಿಂದ ತುಂಬಿತುಳುಕುತ್ತಿದ್ದ  ಬಹುತೇಕ ಹೋಟೆಲ್​​ಗಳು ಇಂದು ಖಾಲಿ ಖಾಲಿ ಇವೆ. ಹೋಟೆಲ್​ಗಳಲ್ಲಿ ಪಾರ್ಸಲ್ ಸೇವೆಗಷ್ಟೇ ಅವಕಾಶ ಇರುವುದರಿಂದ ಹೆಚ್ಚಿನ ಗ್ರಾಹಕರು ಹೋಟೆಲ್​ಗಳಿಗೆ ಬರುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಗ್ರಾಹಕರು ಬರುತ್ತಿದ್ದಾರೆ.

ಕೆಲ ಹೋಟೆಲ್‌ಗಳನ್ನು ಬಾಡಿಗೆ ಪಡೆದ ಉದ್ಯಮದಾರರು ಕಳೆದ ಎರಡೂ ತಿಂಗಳಿಂದ ವಹಿವಾಟು ನಿಂತಿರುವುದರಿಂದ ಬಾಡಿಗೆ ತುಂಬುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಇನ್ನೂ ಕೆಲವರು ಬ್ಯಾಂಕ್‌, ಫೈನಾನ್ಸ್‌ಗಳಲ್ಲಿ ಮಾಡಿದ ಸಾಲ ತೀರಿಸಲಾಗದ ಸಂಕಷ್ಟದಲ್ಲಿಸಿಲುಕಿದ್ದಾರೆ.

ಶೀಘ್ರವೇ ಸರಕಾರ ಹೋಟೆಲ್ ಉದ್ಯಮಿಗಳ ಹಾಗೂ ಕಾರ್ಮಿಕರ ನೆರವಿಗೆ ಧಾವಿಸಬೇಕು ಎಂದು ಅವರು ಈ ಸಂಧರ್ಭ ತಿಳಿಸಿದ್ದಾರೆ.

 ಜಾಹೀರಾತು 





ಮುಂಡ್ಕೂರು:ಪಾಸಿಟಿವ್ ಇದ್ದ ವ್ಯಕ್ತಿಗೆ ನೆಗೆಟಿವ್ ವರದಿ,ವೈದ್ಯಾಧಿಕಾರಿ ಮೇಲೆ ವಿನಾಕಾರಣ ಆಪಾದನೆ? ದೂರು ದಾಖಲು.

ಟೈಮ್ಸ್ ಆಫ್ ಕಾರ್ಕಳ ವರದಿ 

ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯವರ ಮೇಲೆ ವಿನಾಕಾರಣ ಅಪವಾಡವೊಡ್ಡಿ ಕಿರುಕುಳ ನೀಡಲಾಗಿಯೆಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್‌  ಸತೀಶ್‌‌ ದೂರು ದಾಖಲಿಸಿದವರು.

ಸಾಂಧರ್ಬಿಕ ಚಿತ್ರ 


ವಿವರ:
ನವದುರ್ಗ ರೈಸ್ ಮಿಲ್‌ ಸಚ್ಚೇರಿಪೇಟೆ ಇಲ್ಲಿ ಕೋವಿಡ್‌ -19 ಪ್ರಾಥಮಿಕ ಸಂಪರ್ಕಿತರಲ್ಲಿ ಓರ್ವರಾದ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ, ಪಿಲಿಮಂಡೆ ನಿವಾಸಿ ಜಯಂತ್‌ ಎಂಬುವವರಿಗೆ ದಿನಾಂಕ 22/05/2021 ರಂದು ಕೊರೋನಾ ರಿಪೋರ್ಟ್ ಪಾಸಿಟಿವ್ ಬಂದಿತ್ತು.ಇದರಿಂದಾಗಿ ಅವರು ಹೋಮ್‌ ಐಸೋಲೇಸನ್ ಇರಬೇಕಾಗಿತ್ತು.

ಆದರೆ ಕೋವಿಡ್ ಕರ್ಪ್ಯೂ ಇದ್ದರೂ ಕೋವಿಡ್‌ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಆಳ್ವಾಸ್‌ ಆಸ್ಪತ್ರೆ ಮೂಡಬಿದಿರೆ ಇಲ್ಲಿ 22/05/2021 ರಂದು RAT ಪರೀಕ್ಷೆ ನಡೆಸಿ ನೆಗೆಟಿವ್‌ ವರದಿ ಪಡೆದಿದ್ದರು.

ಇದಾದ ಬಳಿಕ ಜಯಂತ್‌ರವರ ಪತ್ನಿ ವೈದ್ಯಾಧಿಕಾರಿ ಡಾ. ಎಸ್‌  ಸತೀಶ್‌‌ ರವರಿಗೆ ಕರೆಮಾಡಿ ವಿನಾಕಾರಣ ಆಪಾದನೆ ಮಾಡುತ್ತಿದ್ದಾರೆ.ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಾ. ಎಸ್‌  ಸತೀಶ್‌‌ ದೂರು ನೀಡಿದ್ದಾರೆ.

                                                   ಜಾಹೀರಾತು  



ಬೆಳ್ಮಣ್:"ಅನ್ನಕ್ಕೂ ವಿಷ" ಸರಕಾರದ ವಿರುದ್ಧ ದೀಪಕ್ ಕೋಟ್ಯಾನ್ ಆಕ್ರೋಶ


 ಬೆಳ್ಮಣ್‌ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ವಿತರಣೆಯಾದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಗ್ರಾಮದ ಗ್ರಾಹಕರು ಮನೆಗೆ ಪಡಿತರ ತೆಗೆದುಕೊಂಡು ಹೋದ ಅಕ್ಕಿಯನ್ನು ನೀರಿನಲ್ಲಿ ಹಾಕಿ ತೊಳೆಯುತ್ತಿದ್ದಾಗ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಆಹಾರ ಇಲಾಖೆ ಮೂಲಕ ವಿತರಣೆ ಆಗುವ ಅಕ್ಕಿ ಬಹಳಷ್ಟು ಸಲ ಕಲಬೆರಕೆಯಿಂದ ಕೂಡಿರುವುದು ರಾಜ್ಯದ ಅಲ್ಲಲ್ಲಿ ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೆಳ್ಮಣ್ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ವಿತರಣೆಯಾಗಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿ ನೋಡಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ದೀಪಕ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


8 ದಿನಗಳ ಹಿಂದೆ ಒಂದಿಬ್ಬರು ಗ್ರಾಹಕರಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೀತಿ ಅಕ್ಕಿ ದೊರೆತಿದ್ದು, ಈ ಕುರಿತು ತಕ್ಷಣವೇ ಆಹಾರ ನಿರೀಕ್ಷಕರಿಗೆ ದೂರು ನೀಡಲಾಗಿದೆ. ಒಂದು
ಗೋಣಿಯಲ್ಲಿ ಇಂತಹ ಅಕ್ಕಿ ದೊರೆತಿದೆ. ಎಲ್ಲಿ ಕಲಬೆರಕೆಯಾಗಿದೆ ಮತ್ತು ಯಾರಿಂದ ಆಗಿದೆ ಎನ್ನುವುದು ತನಿಖೆಯಾಗಿ ಇದರಲ್ಲಿ ಶಾಮೀಲಾಗಿ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ಕಿ ಪಡೆದವರು ಪ್ಲಾಸ್ಟಿಕ್ ಅಕ್ಕಿ ಪತ್ತೆಯಾದರೆ ಕೂಡಲೇ ವಾಪಸ್‌ ನೀಡಬೇಕು ಎಂದಿದ್ದಾರೆ.

2013 ರಲ್ಲಿ ಸಿದ್ಧರಾಮಯ್ಯ ಸರಕಾರವಿದ್ದಾಗ ಹಸಿವು ಮುಕ್ತ ರಾಜ್ಯಕ್ಕೆ ಮಾದರಿಯಾಗಿತ್ತು.‌ ಇಂದಿರಾ ಕ್ಯಾಂಟೀನ್ ಜೊತೆಗೆ ಉಚಿತ ಅಕ್ಕಿಯೊಂದಿಗೆ ತೊಗರಿ ಬೇಳೆ,ಅಡುಗೆ ಎಣ್ಣೆ,ಅಯೋಡಿನ್ ಉಪ್ಪು ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರಕಾರ ಅನ್ನಕ್ಕೆ ಕನ್ನ ಹಾಕಿದ್ದು ಉಚಿತ ಅಕ್ಕಿ ಸರಬರಾಜು ನಿಲ್ಲಿಸಿ ಪಾವತಿಸಿ ಪಡೆಯುವ ಅಕ್ಕಿಯಲ್ಲೂ ಕಲಬೆರಕೆ ಮಾಡಿದ್ದು ಬಡ ಜನರ ಜೀವದ ಜೊತೆ ಸರಕಾರ ಚೆಲ್ಲಾಟ ಆಡುತ್ತಿದೆಯೇ ಎಂದು ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಪ್ರಶ್ನಿಸಿದ್ದಾರೆ.

ಅನ್ನ ಭಾಗ್ಯ ಯೋಜನೆಯಲ್ಲೂ ಸರಕಾರದ ಕಲಬೆರಕೆ ಈಗ ಬಯಲಾಗಿದ್ದು ರಾಜ್ಯದ ಜನರ ಆರೋಗ್ಯದ ಕುರಿತು ಬೇಜವಬ್ದಾರಿ ಪ್ರದರ್ಶಿಸುವ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 ಜಾಹೀರಾತು  

ಸಣ್ಣ ಉದ್ಯಮ - ಅಂಗಡಿಯವರನ್ನು ಬದಕಲು ಬಿಡಿ : ಮಂಜುನಾಥ ಪೂಜಾರಿ.

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಸುದ್ದಿಗೋಷ್ಠಿ


ಹೆಬ್ರಿ : ಜಿಲ್ಲಾಧಿಕಾರಿಯವರು ಕೊರೊನ ಸೋಂಕಿತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುತ್ತಿರುವುದು ಅತ್ಯಂತ ಒಳ್ಳೇಯ ಶ್ಲಾಘನೀಯ ಕೆಲಸ. ಆಹಾರ ಸಂಸ್ಕರಣೆಯ ಹೆಸರಿನಲ್ಲಿ ಗೇರು ಉದ್ಯಮಗಳು ಸರಾಗವಾಗಿ ಕಾರ್ಯಚರಿಸುತ್ತಿವೆ. ಇದರ ಜೊತೆಗೆ ದಿನದ ಖರ್ಚಿಗಾಗಿ ದುಡಿದು ಬದುಕುತ್ತಿದ್ದ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಸ್ಥರು, ಟೈಲರ್‌ಗಳು, ಬಟ್ಟೆ ಅಂಗಡಿ, ಕ್ಷೌರದಂಗಡಿ, ದೋಬಿಯವರು, ರಿಕ್ಷಾ ಚಾಲಕರ, ಕೂಲಿ ಕಾರ್ಮಿಕರ ಬಗ್ಗೆ ಜಿಲ್ಲಾಧಿಕಾರಿಯವರು ಯೋಚಿಸಿ ಅವರ ಬದುಕಿಗೆ ದಾರಿ ತೋರಿಸಬೇಕಾಗಿದೆ, ವಾರಕ್ಕೆ ಕನಿಷ್ಠ ೪ ದಿನವಾದರೂ ತೆರೆಯಲು ಅವಕಾಶ ಕೋಡಿ. ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಬಟ್ಟೆ ಸಹಿತ ವಸ್ತುಗಳು ಹಾಳಾಗುತ್ತಿವೆ. ಅವರನ್ನು ಬದುಕಲು ಬಿಡಿ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಅವರು ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಳಿಗ್ಗೆ ಬೇಗನೇ ಬ್ಯಾಂಕ್‌ ಕೂಡ ತೆರೆಯಿರಿ:ದಿನಸಿ ಅಂಗಡಿಯಂತೆಯೇ ಬ್ಯಾಂಕ್ ಗಳನ್ನು ಕೂಡ ತೆರೆಯಲು ಆದೇಶ ನೀಡಿ. ಈಗ ೯.೪೫ರೊಳಗೆ ಅಂಗಡಿಗಳನ್ನು ಬಂದ್‌ ಮಾಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಹಣದ ಅಗತ್ಯ ಇರುತ್ತದೆ. ಬ್ಯಾಂಕ್‌ ತೆರಯುವುದು ೧೦ ರ ಬಳಿಕ. ೧೦ ಗಂಟೆಯ ಬಳಿಕ ತಿರುಗಾಡಲು ಅವಕಾಶ ಇಲ್ಲ. ಇದರಿಂದ ಸಾರ್ವಜನಿಕರು ತೀವೃ ಸಮಸ್ಯೆ ಎದುರಿಸುತ್ತಿದ್ದಾರೆ. ಒಬ್ಬರಿಗೊಂದು ನಿಯಮ ಬೇಡ.. ಸಮಾನವಾಗಿ ಅವಕಾಶ ನೀಡಿ ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದರು. 

ಹೆಬ್ರಿ ಸರ್ಕಾರಿ ಆಸ್ಪತ್ರೆಯ ಬಗ್ಗೆ ನಮ್ಮ ದೂರು ಇಲ್ಲ : ಎಂಬಿಬಿಎಸ್‌ ವೈದ್ಯರನ್ನು ಕೊಡಿ : ನಮಗೆ ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯದ ವೈದ್ಯರು ಮತ್ತು ಸಿಬ್ಬಂದ್ಧಿಗಳ ಬಗ್ಗೆ ತಕರಾರು ಇಲ್ಲ. ಅವೆರಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದರೆ. ಅಲ್ಲಿ ಆಮ್ಲಜನಕ ವ್ಯವಸ್ಥೆ ಸಹಿತ ವಿವಿಧ ಸವಲತ್ತುಗಳನ್ನು ನೀಡಿ ಎಂದು ಮನವಿ ಮಾಡಿದ್ದೇವೆ ಎಂದ ಮಂಜುನಾಥ ಪೂಜಾರಿ ಹಿಂದಿನ ವೈದ್ಯರು ಮತ್ತು ಆಸ್ಪತ್ರೆಯ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ದಿನವೂ ತಕರಾರು ತೆಗೆಯುತಿದ್ದರು. ಈಗ ಇಲ್ಲಿ ದಂದ ವೈದ್ಯರೇ ಆಸ್ಪತ್ರೆಯ ಮುಖ್ಯಸ್ಥರಾಗಿದ್ದಾರೆ. ನಮಗೆ ಮುಖ್ಯವಾಗಿ ಎಂಬಿಬಿಎಸ್‌ ವೈದ್ಯರು ಬೇಕು. ಜನರನ್ನು ತಪ್ಪುದಾರಿಗೆ ಎಳೆಯಬೇಡಿ. ಎಂಬಿಬಿಎಸ್‌ ವೈದ್ಯರನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ನೇಮಿಸಿ ಎಂದು ಮಂಜುನಾಥ ಪೂಜಾರಿ ಆಗ್ರಹಿಸಿದರು.

ಹೆಬ್ರಿಗೆ ಇಂದಿರಾ ಕ್ಯಾಂಟೀನ್‌ ನೀಡಿ : ಹೆಬ್ರಿ ಗ್ರಾಮೀಣ ಪ್ರದೇಶದ ತಾಲ್ಲೂಕು ಕೇಂದ್ರವಾಗಿದ್ದು ಸರ್ಕಾರಿ ಹೆಬ್ರಿಗೆ ಅತೀ ಶೀಘ್ರವಾಗಿ ಇಂದಿರಾ ಕ್ಯಾಂಟೀನ್‌ ವ್ಯವಸ್ಥೆ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಮಂಜುನಾಥ ಪೂಜಾರಿ ಮನವಿ ಮಾಡಿದರು.

ಹೆಬ್ರಿ ಸರ್ಕಾರಿ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಮನವಿ : ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಮೂಲಕ ರಾಜ್ಯದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಮನವಿ ಮಾಡಲಾಗುವುದು ಎಂದು ಮಂಜುನಾಥ ಪೂಜಾರಿ ತಿಳಿಸಿದರು.


ಆಶಾ ಕಾರ್ಯಕರ್ತರಿಗೆ ಕನಿಷ್ಠ 15 ಸಾವಿರ ಗೌರವ ಧನ ನೀಡಿ : ಮಂಜುನಾಥ ಪೂಜಾರಿ.

ಕೇವಲ 4500 ಸಂಬಳದೊಂದಿಗೆ ಆಶಾ ಕಾರ್ಯಕರ್ತರನ್ನು ದಿನವಿಡಿ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಅವರ ಸೇವೆ ಪ್ರಶ್ನಾತೀತ ಮತ್ತು ಅಭಿನಂದನೀಯ. ಅವರಿಗೆ ಕನಿಷ್ಠವಾಗಿ ತಿಂಗಳಿಗೆ ೧೫ ಸಾವಿರ ರೂಪಾಯಿ ಗೌರವಧನ ನೀಡಬೇಕು ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಒತ್ತಾಯಿಸಿದರು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದ್ಧಿ, ಪೋಲಿಸರ ಸಹಿತ ಕೊರೊನ ವಾರಿಯರ್ಸ್‌ ಗಳಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಎಂದು ಮಂಜುನಾತ ಪೂಜಾರಿ ಮನವಿ ಮಾಡಿದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಲಕ್ಷ್ಮಣ ಆಚಾರ್‌, ಪ್ರಮುಖರಾದ ಶಶಿಕಲಾ ಡಿ.ಪೂಜಾರಿ, ಶಂಕರ ಶೇರಿಗಾರ್‌, ಸುಧಾಕರ ಶೆಟ್ಟಿ, ಅಶ್ವಿನಿ ಮುದ್ರಾಡಿ, ಶಿವರಾಮ ಪೂಜಾರಿ ಉಪಸ್ಥಿತರಿದ್ದರು.


 ಜಾಹೀರಾತು  

ಹೆಬ್ರಿ:ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ಸೊಂಕಿತರ ಸಂಖ್ಯೆ ಅತೀ ಹೆಚ್ಚು ಆಗಲು ಸೂಕ್ತ ನಿರ್ಧಾರ ಕೈಗೊಳ್ಳಲು ಉಸ್ತುವಾರಿ ಸಚಿವರು ಅಪರೂಪವಾಗಿರುವುದೇ ಕಾರಣವಾಗಿದೆ. ಶೀಘ್ರವಾಗಿ ಉಡುಪಿ ಜಿಲ್ಲೆಯ ವಾಸ್ತವ ಸ್ಥಿತಿ ತಿಳಿದ ಸ್ಥಳೀಯರನ್ನೇ ಉಸ್ತುವಾರಿ ಸಚಿವರನ್ನು ನೇಮಿಸಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಧಾರವಾಡದಲ್ಲಿದ್ದು ರಾಜ್ಯದ ಗೃಹ ಸಚಿವರಾಗಿ ಒತ್ತಡಗಳಿರುತ್ತವೆ. ಜಿಲ್ಲಾಧಿಕಾರಿಯವರು ಉಸ್ತುವಾರಿ ಸಚಿವರನ್ನು ಕಾದು ನಿರ್ಧಾರ ಕೈಗೊಳ್ಳುವಾಗ ಅತೀ ವಿಳಂಬವಾಗುತ್ತದೆ. 

ಇದೇ ಸಮಸ್ಯೆಯಿಂದಾಗಿ ಉಡುಪಿ ಜಿಲ್ಲೆಯ ಸ್ಥಿತಿ ಚಿಂತಾಜನಕವಾಗಿದೆ ಎಂದ ನೀರೆ ಕೃಷ್ಣ ಶೆಟ್ಟಿ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಕೋವಿಡ್‌ ನಿಯಮವನ್ನು ಉಲ್ಲಂಘಿಸಿ ಚೆಕ್‌ ವಿತರಣೆಯ ಸಭೆ ನಡೆಸಿದ್ದಾರೆ. ಜನ ಸಾಮಾನ್ಯರಿಗೊಂದು ನ್ಯಾಯ ಶಾಸಕರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ. ಕಾರ್ಕಳ ಕ್ಷೇತ್ರದಲ್ಲಿ ವಿರೋಧ ಪಕ್ಷ ಪ್ರಬಲವಾಗಿಲ್ಲ ಎಂದು ಅವರು ಈ ರೀತಿ ಮಾಡುತ್ತಿರಬಹುದು. ನಾವು ಎಲ್ಲವನ್ನೂ ಪ್ರಶ್ನಿಸುತ್ತೇವೆ ಎಂದರು.

ರಮೇಶ ಜಾರಕಿಹೋಳಿಯನ್ನು ಬಂಧಿಸಿ:ಬಿಜೆಪಿಯ ಶಾಸಕರಾದ ಮಾಜಿ ಸಚಿವ ರಮೇಶ ಜಾರಕಿಹೋಳಿ ತಾನೂ ಕೃತ್ಯ ನಡೆಸಿದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನೈತಿಕತೆ ಇದ್ದರೆ ಇನ್ನಾದರೂ ರಮೇಶ ಜಾರಕಿಹೋಳಿಯನ್ನು ಬಂಧಿಸಿ ಎಂದು ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದರು.

 ಜಾಹೀರಾತು  

ಮಾಳ:ವಿವಾಹಿತ ಮಹಿಳೆಯೋರ್ವಳು ಇಬ್ಬರೊಂದಿಗೆ ಅನೈತಿಕ ಸಂಭಂದ ಹೊಂದಿದ್ದು ಇದೀಗ ಒಬ್ಬಾತನು ಮತ್ತೊಬ್ಬನಿಂದ ಭೀಕರವಾಗಿ ಕೊಲೆಯಾದ ಘಟನೆ ನಿನ್ನೆ ರಾತ್ರಿ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಳ ಎಂಬಲ್ಲಿ  ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.  


ಮಿಯಾರು ಬೋರ್ಕಟ್ಟೆ ನಿವಾಸಿ ಹರೀಶ್ ಪೂಜಾರಿ(42) ಕೊಲೆಯಾದ ದುರ್ದೈವಿ. ಗುರುವ ಎಂಬಾತ ಕೊಲೆ ಆರೋಪಿ ಎಂದು ತಿಳಿದುಬಂದಿದೆ. 

ಇವರಿಬ್ಬರೂ ರೀಟಾ ಎಂಬಾಕೆಯೊಂದಿಗೆ ಅನೈತಿಕ ಸಂಭಂದ ಹೊಂದಿದ್ದು  ಅವರ ಮನೆಗೆ ಹೋಗಿದ್ದರು. ಆಗ ಹರೀಶ್ ಹಾಗೂ ಗುರುವ  ಇಬ್ಬರ ನಡುವೆಯೂ ಮಾತಿನ ಚಕಮಕಿ ಉಂಟಾಗಿದ್ದು, ಕೋಪಗೊಂಡ ಗುರು ಹರೀಶನ ತಲೆಗೆ ರಾಡಿನಿಂದ ಬಡಿದು ಪರಾರಿಯಾಗಿದ್ದ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರೀಶ್ ಮೃತಪಟ್ಟಿದ್ದಾನೆ.

ಮಿಯಾರು ಬೋರ್ಕಟ್ಟೆ ನಿವಾಸಿ ಹರೀಶ್ ಪೂಜಾರಿ(42) ಕೊಲೆಯಾದ ದುರ್ದೈವಿ

ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎಂದು ತಿಳಿದು ಬಂದಿದ್ದು ಮತ್ತಷ್ಟು ವಿವರಗಳು ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ.

ಕಾರ್ಕಳ ಗ್ರಾಮಾಂತರ ಸರ್ಕಲ್  ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಆರೋಪಿ ಗುರುವನ್ನು ವಶಕ್ಕೆ ಪಡೆದಿದ್ದಾರೆ.

 ಜಾಹೀರಾತು  


ಹೆಬ್ರಿಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದರೂ ನಿಯಮ ಮೀರಿ ಬೇಕರಿ  ಹೆಬ್ರಿಯಲ್ಲಿ ಬೇಕರಿಯೊಂದು ತೆರೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



ದಿನಾಂಕ 22-05-2021 ರಂದು ಸಂಜೆ 6.30 ಗಂಟೆಗೆ ಹೆಬ್ರಿ ತಾಲೂಕು ಹೆಬ್ರಿ ಗ್ರಾಮದ ಹೆಬ್ರಿ ಮೇಲ್ಪೇಟೆ ಎಂಬಲ್ಲಿ ಹೆಬ್ರಿ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ  ಮಹೇಶ.ಟಿ.ಎಂ ಇವರು ರೌಂಡ್ಸ್ ನಲ್ಲಿರುವಾಗ, ಸರಕಾರವು ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿ ನಿಗದಿತ ಸಮಯವನ್ನು ಹೊರತುಪಡಿಸಿ ರಾಮಚಂದ್ರ ಉಡುಪ (56) ಇವರು ಬೇಕರಿಯನ್ನು ತೆರೆದು ವ್ಯಾಪಾರ ಮಾಡಿಕೊಂಡಿದ್ದದ್ದು ಕಂಡುಬಂದಿದೆ. 

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಜಾಹೀರಾತು  

 ಮಿಯ್ಯಾರು:ಖಚಿತ ಮಾಹಿತಿಯ ಮೇರೆಗೆ ಮಿಯ್ಯಾರು ಗ್ರಾಮದ ಮಂಗಳಪಾದೆ ಎಂಬಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಕಾರ್ಕಳ ನಗರ ಪೊಲೀಸ್‌ ಠಾಣೆ ಪೊಲೀಸ್‌ ಉಪನಿರೀಕ್ಷಕ ಮಧು ಬಿ ಇ ಮತ್ತು ತಂಡದವರು  ದಿನಾಂಕ 22/05/2021 ರಂದು  ಮಧ್ಯಾಹ್ನ ಬಂಧಿಸಿದ್ದಾರೆ. 



ಜೋಡುಕಟ್ಟೆ ಮಂಗಳಪಾದೆ, ಮಿಯ್ಯಾರು ನಿವಾಸಿ ರೋಶನ್‌ಮೊಂತೋ ದಾಂತಿ (32),  ಬಂಧಿತ ವ್ಯಕ್ತಿ.

ಬಂಧಿತನ ವಶದಲ್ಲಿದ್ದ 90 ಎಮ್‌ ಎಲ್‌ ನ  ಮದ್ಯ ತುಂಬಿದ  ಒಟ್ಟು 82 ಸ್ಯಾಚೆಟ್‌ಗಳನ್ನು ಹಾಗೂ ಮದ್ಯ  ಮಾರಾಟ  ಮಾಡಿ ಸಂಗ್ರಹವಾದ ನಗದು 200/- ರೂಪಾಯಿ ಮತ್ತು 1-ಖಾಕಿ ಬಣ್ಣದ ರಟ್ಟಿನ ಬಾಕ್ಸ್‌‌‌‌‌ ವಶಪಡಿಸಿಕೊಳ್ಳಲಾಗಿದೆ.


ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ:

ಕಾರ್ಕಳ: ದಿನಾಂಕ 22/05/2021 ರಂದು 14:00 ಗಂಟೆಗೆ ಮಧು ಬಿ ಇ, ಪೊಲೀಸ್‌ ಉಪನಿರೀಕ್ಷಕರು, ಕಾರ್ಕಳ ನಗರ ಪೊಲೀಸ್‌ ಠಾಣೆ  ಇವರು ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಮಂಗಳಪಾದೆ ಎಂಬಲ್ಲಿ ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುವುದಾಗಿ ಬಂದ ಖಚಿತ ಮಾಹಿತಯಂತೆ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ರೋಶನ್‌ಮೊಂತೋ ದಾಂತಿ (32), ತಂದೆ: ಅಂತೋನಿ ದಾಂತಿ, ವಾಸ: ಜೆ ಆರ್‌ದಾಂತಿ ಕಂಪೌಂಡ್‌, ಜೋಡುಕಟ್ಟೆ ಮಂಗಳಪಾದೆ, ಮಿಯ್ಯಾರು ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 90 ಎಮ್‌ ಎಲ್‌ ನ  ಮದ್ಯ ತುಂಬಿದ  ಒಟ್ಟು 82 ಸ್ಯಾಚೆಟ್‌ಗಳನ್ನು ಹಾಗೂ ಮದ್ಯ  ಮಾರಾಟ  ಮಾಡಿ ಸಂಗ್ರಹವಾದ ನಗದು 200/- ರೂಪಾಯಿ ಮತ್ತು 1-ಖಾಕಿ ಬಣ್ಣದ ರಟ್ಟಿನ ಬಾಕ್ಸ್‌‌‌‌‌ ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.  

 ಜಾಹೀರಾತು  

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget