ಬೇಸಿಗೆಯಲ್ಲಿ ತಂಪು ಮಾಡುವ ಸೋರೆ ಕಾಯಿ-- ಶ್ರೀಮತಿ ರಮಿತಾ ಶೈಲೆಂದ್ರ ರಾವ್ ಕಾರ್ಕಳ

ಬೇಸಿಗೆಯಲ್ಲಿ ತಂಪು ಮಾಡುವ ಸೋರೆ ಕಾಯಿ


ಸೋರೆಕಾಯಿ ಬಳ್ಳಿಯಲ್ಲಿ ಬಿಡುವ ಒಂದು ತರಕಾರಿ. ಅಧಿಕ ನೀರಿನಂಶವನ್ನು ಒಳಗೊಂಡಿರುವ ಸೋರೆಕಾಯಿಯು ಅತ್ಯಂತ ಔಷಧೀಯಗುಣಗಳನ್ನು ಒಳಗೊಂಡಿದೆ. ಈ ತರಕಾರಿ ಹಿಂದಿನ ಕಾಲದಲ್ಲಿ ಸೀಮಿತ ಅವಧಿಯಲ್ಲಿ ಅಥವಾ ಕಾಲದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಆದರೆ ಈಗ ಎಲ್ಲಾ ಕಾಲದಲ್ಲೂ ಬೆಳೆಯನ್ನು ಬೆಳೆಯುತ್ತಾರೆ.


ಸೋರೆಕಾಯಿಯನ್ನು ಯಾವಾಗಲೂ ಆರೋಗ್ಯಕರ ಸಸ್ಯಾಹಾರಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಬಹುಮುಖ ತರಕಾರಿ ಸುಮಾರು 92% ರಷ್ಟು ನೀರು ಮತ್ತು ಖನಿಜಗಳಿಂದ ಕೂಡಿದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಕೆ ಮತ್ತು ಕ್ಯಾಲ್ಸಿಯಂ ಸಮೃದ್ಧ ವಾಗಿರುವುದನ್ನು ಕಾಣಬಹುದು. ಇದು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತೆಗೆದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದರಿಂದ ಈ ರಸವು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಬನ್ನಿ ಅದ್ಭುತ ಔಷಧೀಯ ಗುಣವನ್ನು ಹೊಂದಿರುವ ಈ ತರಕಾರಿ ಸೇವನೆಯಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯೋಣ.


⭕️ಸೋರೆಕಾಯಿ ಜೂಸ್ :


 ಬೇಕಾಗುವ ಸಾಮಾಗ್ರಿಗಳು

ಬೆಲ್ಲ - 2 ಚಮಚ

ಸೋರೆಕಾಯಿ

ಏಲಕ್ಕಿ

ನೀರು 


ವಿಧಾನ :

 ಕಾಲು ಕಪ್ ನಷ್ಟು ತುಂಡರಿಸಿದ ಸೋರೆಕಾಯಿ, 2 ಚಮಚ ಬೆಲ್ಲ, ಚಿಟಿಕೆ ಏಲಕ್ಕಿ, ನೀರನ್ನು ಬೇಕಾದ ಪ್ರಮಾಣದಲ್ಲಿ ಹಾಕಿ ರುಬ್ಬಿ ಗಳಿಸಿದರೆ ರುಚಿಕರವಾದ ಸೋರೆಕಾಯಿ ಜೂಸ್ ನಿಮ್ಮ ಮುಂದೆ.


⭕️ಸೋರೆಕಾಯಿ ಗಂಜಿ :


ಬೇಕಾಗುವ ಸಾಮಾಗ್ರಿಗಳು

ಅಕ್ಕಿ- 1/2 ಕಪ್

ಬೆಲ್ಲ- 1 ಕಪ್

ತುಪ್ಪ

ಸೋರೆಕಾಯಿ 1 ಕಪ್


ವಿಧಾನ

 ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಬಾಣಲಿಗೆ ಎರಡು ಚಮಚ ತುಪ್ಪವನ್ನು ಸೇರಿಸಿ ತೊಳೆದ ಅಕ್ಕಿ1/2 ಕಪ್, ಬೆಲ್ಲ 1 ಕಪ್, ತುರಿದ ಸೋರೆಕಾಯಿ 1 ಕಪ್, ಬೇಕಾದಷ್ಟು ನೀರು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಲು ಬಿಡಿ.  ಬೆಂದ ಮೇಲೆ ಮೇಲಿಂದ ತುಪ್ಪ ಸವರಿ ಆರೋಗ್ಯಕ್ಕೆ ಹಿತಕರವಾದ ಸೋರೆಕಾಯಿ ಗಂಜಿ ನಿಮ್ಮ ಮುಂದೆ.


 ಮನೆಯಲ್ಲೊಂದು ಸೋರೆಕಾಯಿ ಬಳ್ಳಿಯನ್ನು ನೆಡೋಣ...


- ಶ್ರೀಮತಿ ರಮಿತಾ ಶೈಲೆಂದ್ರ ರಾವ್

ಕಾರ್ಕಳ 


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget