ಕಾರ್ಕಳ:"ಶಾಸಕ ಸುನೀಲ್‌ ಕುಮಾರ್‌ ಕೋವಿಡ್‌ ನಿಯಮವನ್ನು ಉಲ್ಲಂಘಿಸಿ ಚೆಕ್‌ ವಿತರಣೆಯ ಸಭೆ ನಡೆಸಿದ್ದಾರೆ"-ನೀರೆ ಕೃಷ್ಣ ಶೆಟ್ಟಿ ಉಡುಪಿ ಜಿಲ್ಲೆಗೆ ಸ್ಥಳೀಯರನ್ನೇ ಶೀಘ್ರವಾಗಿ ಉಸ್ತುವಾರಿ ಸಚಿವರನ್ನು ನೇಮಿಸಿ-Times of karkala

ಹೆಬ್ರಿ:ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ಸೊಂಕಿತರ ಸಂಖ್ಯೆ ಅತೀ ಹೆಚ್ಚು ಆಗಲು ಸೂಕ್ತ ನಿರ್ಧಾರ ಕೈಗೊಳ್ಳಲು ಉಸ್ತುವಾರಿ ಸಚಿವರು ಅಪರೂಪವಾಗಿರುವುದೇ ಕಾರಣವಾಗಿದೆ. ಶೀಘ್ರವಾಗಿ ಉಡುಪಿ ಜಿಲ್ಲೆಯ ವಾಸ್ತವ ಸ್ಥಿತಿ ತಿಳಿದ ಸ್ಥಳೀಯರನ್ನೇ ಉಸ್ತುವಾರಿ ಸಚಿವರನ್ನು ನೇಮಿಸಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಧಾರವಾಡದಲ್ಲಿದ್ದು ರಾಜ್ಯದ ಗೃಹ ಸಚಿವರಾಗಿ ಒತ್ತಡಗಳಿರುತ್ತವೆ. ಜಿಲ್ಲಾಧಿಕಾರಿಯವರು ಉಸ್ತುವಾರಿ ಸಚಿವರನ್ನು ಕಾದು ನಿರ್ಧಾರ ಕೈಗೊಳ್ಳುವಾಗ ಅತೀ ವಿಳಂಬವಾಗುತ್ತದೆ. 

ಇದೇ ಸಮಸ್ಯೆಯಿಂದಾಗಿ ಉಡುಪಿ ಜಿಲ್ಲೆಯ ಸ್ಥಿತಿ ಚಿಂತಾಜನಕವಾಗಿದೆ ಎಂದ ನೀರೆ ಕೃಷ್ಣ ಶೆಟ್ಟಿ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಕೋವಿಡ್‌ ನಿಯಮವನ್ನು ಉಲ್ಲಂಘಿಸಿ ಚೆಕ್‌ ವಿತರಣೆಯ ಸಭೆ ನಡೆಸಿದ್ದಾರೆ. ಜನ ಸಾಮಾನ್ಯರಿಗೊಂದು ನ್ಯಾಯ ಶಾಸಕರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ. ಕಾರ್ಕಳ ಕ್ಷೇತ್ರದಲ್ಲಿ ವಿರೋಧ ಪಕ್ಷ ಪ್ರಬಲವಾಗಿಲ್ಲ ಎಂದು ಅವರು ಈ ರೀತಿ ಮಾಡುತ್ತಿರಬಹುದು. ನಾವು ಎಲ್ಲವನ್ನೂ ಪ್ರಶ್ನಿಸುತ್ತೇವೆ ಎಂದರು.

ರಮೇಶ ಜಾರಕಿಹೋಳಿಯನ್ನು ಬಂಧಿಸಿ:ಬಿಜೆಪಿಯ ಶಾಸಕರಾದ ಮಾಜಿ ಸಚಿವ ರಮೇಶ ಜಾರಕಿಹೋಳಿ ತಾನೂ ಕೃತ್ಯ ನಡೆಸಿದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನೈತಿಕತೆ ಇದ್ದರೆ ಇನ್ನಾದರೂ ರಮೇಶ ಜಾರಕಿಹೋಳಿಯನ್ನು ಬಂಧಿಸಿ ಎಂದು ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದರು.

 ಜಾಹೀರಾತು  

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget