ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸಿದ ಸುಂದರ್ ಲಾಲ್ ಬಹುಗುಣ ಅಂಕಣ:✍️ಹೆಚ್ ಪಿ ನಾಯಕ್ Times of karkala

ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸಿದ ಮಹಾನೀಯನ ಹೆಸರು ಎಲ್ಲೋ ಶಾಲಾ ದಿನದಲ್ಲಿ ಕೇಳಿದ ನೆನಪು. ಅವರು ಮಾಡಿದಂತಹ ಅದೆಷ್ಟೋ ಕೆಲಸ ಕಾರ್ಯಗಳು ನಮಗೆ ಅವರ ಹೆಸರು ಪಾಠದಿಂದ ಪರೀಕ್ಷೆವರೆಗೆ ನೆನಪಿಡದೆ ಜೀವನಕ್ಕೂ ನಮ್ಮ ಮನಸ್ಸಿಗೆ ಮರಗಳನ್ನು ಪ್ರೀತಿಸುವಂತೆ ಮಾಡಿತು.  ಕಾಡಿನ  ಸಂರಕ್ಷಣೆಗೆ ಚಿಪ್ಕೋ ಚಳುವಳಿಗೆ ರುವಾರಿಯಾದ ಇವರ ಹೆಸರು ಕಿವಿಯಲ್ಲಿ ಹೊಕ್ಕಿ ಮನಸಲ್ಲಿ ಇನ್ನೂ ಮನೆಮಾಡಿದೆ.


ಗಿಡ ಮರ ಪರಿಸರದ ಬಗ್ಗೆ ಮನಸಲ್ಲಿ ಕಾಳಜಿ ಪ್ರೀತಿಸುವ ಬಗ್ಗೆ ಪರಿಚಯಿಸಿದ ಇವರು ಇನ್ನೂ ನೆನಪಿನಲ್ಲಿ ಉಳಿಯುವಂತೆ ಮಾಡಿತು. ಇವರು ಭಾರತದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದಾರೆ. ಬಹುಗುಣರವರು ಮುಂಚಿತವಾಗಿ ವಸಾಹತು ಆಡಳಿತದ ವಿರುದ್ಧ ಜನರನ್ನು ಸಜ್ಜುಗೊಳಿಸಿದ್ದರು. ಅವರು ತಮ್ಮ ಜೀವನದಲ್ಲಿ ಗಾಂಧಿವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಗಾಂಧಿಯವರ ಪ್ರೇರಣೆಯಿಂದಾಗಿ ಹಿಮಾಲಯ ಕಾಡು ಹಾಗೂ ಬೆಟ್ಟಗಳ ನಡುವೆ ಪಾದಯಾತ್ರೆಯನ್ನು ಮಾಡಿ ಮೆಗಾ ಅಭಿವೃದ್ಧಿ ಯೋಜನೆಯಿಂದ ಹಿಮಾಲಯದ ಪರಿಸರಕ್ಕೆ ಆದ ಹಾನಿಯನ್ನು ಗಮನಿಸಿದರು.

ಚಿಪ್ಕೊ ಚಳುವಳಿಯು ಕಾಡು ಪ್ರದೇಶ ಹಾಗೂ ಕಾಡಿನ ಮರಗಳನ್ನು ರಕ್ಷಿಸಲು ಹಳ್ಳಿ ಹಳ್ಳಿಗೆ ಪ್ರಯಾಣ ಬೆಳೆಸುವ ಮೂಲಕ ಚಳುವಳಿಗೆ ಬೆಂಬಲವನ್ನು ಪಡೆದರು. ಉತ್ತರಖಾಂಡದಲ್ಲಿ ಪರಿಸರವಾದಿ ಸುಂದರ್ ಲಾಲ್ ಬಹುಗುಣ ನೇತೃತ್ವದಲ್ಲಿ ಆರಂಭವಾದ ಚಳವಳಿ ಇದು. ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಮರಗಳನ್ನು ಕಡಿಯಲು ಬಂದ ಅಧಿಕಾರಿಗಳಿಗೆ ಅಡ್ಡ ನಿಂತು, ಮರವನ್ನು ತಬ್ಬಿಕೊಂಡು, ಮೊದಲು ನಮ್ಮನ್ನು ಕೊಲ್ಲಿ, ನಂತರ ಮರವನ್ನು ಎಂದು ಜನರೆಲ್ಲ ಧೈರ್ಯವಾಗಿ ನಿಂತು ಚಳವಳಿ ಮಾಡದಿದ ಘಳಿಗೆ ಅದು. ಮನುಷ್ಯನ ಭವಿಷ್ಯಕ್ಕೆ ಅತ್ಯಗತ್ಯವಾದ ಮರಗಳ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾದ ಜನರ ನಡೆಯನ್ನು ಶ್ಲಾಘಿಸುವುದಕ್ಕೆ ಚಿಪ್ಕೋ ಚಳವಳಿಯನ್ನು ದೇಶ ಸದಾ ಕೊಂಡಾಡುತ್ತದೆ. ಚಿಪ್ಕೊ ಚಳುವಳಿಯು, ಕರ್ನಾಟಕದಲ್ಲಿ ಅಪ್ಪಿಕೊ ಚಳುವಳಿಗೆ ಸ್ಫೂರ್ತಿಯನ್ನು ನೀಡಿತು.  ಮಾರ್ಚ್‌ 26 2018 ರಂದು ಸರ್ಚ್ ಇಂಜಿನ್ ಗೂಗಲ್ ತನ್ನ ಡೂಡಲ್‌ನಲ್ಲಿ ಚಿಪ್ಕೋ ಚಳುವಳಿಯನ್ನು ನೆನಪಿಸುವಂತೆ ಮಾಡುವುದರ ಜತೆಗೆ ಕಾಡಿನ ರಕ್ಷಣೆಗೆ ನಿಲ್ಲಿ ಎಂಬ ಸಂದೇಶ ಸಾರಿದೆ.

ಚಿಪ್ಕೊ ಚಳುವಳಿಯ ನಾಯಕ ಸುಂದರ್ ಲಾಲ್ ಬಹುಗುಣ 21 ಮೇ 2021 ರಂದು ತಮ್ಮ ಕೊನೆಯುಸಿರೆಳೆದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಆಸೆಯಂತೆ ಕಾಡನ್ನು ರಕ್ಷಿಸೋಣ. ಆಮ್ಲಜನಕದ ಕೊರತೆ ಬಾರದಂತೆ ಕಾಪಾಡೋಣ. 

ಪರಿಸರ ಬೆಳೆಸಿ.. ನಾಡು ಉಳಿಸಿ..


✍️ಹೆಚ್ ಪಿ ನಾಯಕ್

 ಜಾಹೀರಾತು  

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget