"ಕೋರೋನ ಸಂಕಷ್ಟ-ಕ್ಷಣಕ್ಕೊಂದು ಸರ್ಕಾರದ ನಿರ್ಧಾರ:ಸಂಕಷ್ಟದಲ್ಲಿ ಜನತೆ"ಮಂಜುನಾಥ ಪೂಜಾರಿ.

ಕೋರೋನ ಸಂಕಷ್ಟ -  ಕ್ಷಣಕ್ಕೊಂದು ಸರ್ಕಾರದ ನಿರ್ಧಾರ : ಸಂಕಷ್ಟದಲ್ಲಿ ಜನತೆ : ಮಂಜುನಾಥ ಪೂಜಾರಿ.

ಕೊರೋನ ೨ನೇ ಅಲೆ ದೇಶದಾದ್ಯಂತ ಅತ್ಯಂತ ಭೀಕರವಾಗಿ ವ್ಯಾಪಿಸಿದೆ. ಬೆಂಗಳೂರಿನಲ್ಲಿ ಮರಣ ಮೃದಂಗ ಭಾರಿಸುತ್ತಿದೆ. ಇನ್ನಷ್ಟು ತೀವೃವಾಗುವ ಮುನ್ಸೂಚನೆಯ ಇದೆ. ಸರ್ಕಾರ ಪ್ರತಿಪಕ್ಷವನ್ನು ಕೂಡ ವಿಸ್ವಾಸಕ್ಕೆ ತೆಗೆದುಕೊಂಡು ಒಮ್ಮತದ ನಿರ್ಧಾರಕ್ಕೆ ಬಂದು ಬಡ ಜನರನ್ನು ರಕ್ಷಿಸಬೇಕಾಗಿದೆ ಎಂದು ಹೆಬ್ರಿ ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಅವರು ಹೆಬ್ರಿ ಬ್ಲಾಕ್‌ಕಾಂಗ್ರೆಸ್‌ಕಛೇರಿಯಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಸರ್ಕಾರದ ಎಲ್ಲಾ ನಿರ್ಧಾರಗಳು ಅತ್ಯಂತ ಆತುರದಿಂದ ಕೂಡಿವೆ. ರಾಜ್ಯದ ಆರೂವರೇ ಕೋಟಿ ಜನರಿಗೆ ಯಾವೂದೇ ಹಾನಿ ಆಗಬಾರದು. ಕೋರೋನದಿಂದ ಮಾತ್ರ ಜನ ಸಾಯುತ್ತಿಲ್ಲ. ಇತರ ಖಾಯಿಲೆಯಿಂದಲೂ ಸಾವನ್ನಪ್ಪುತ್ತಿದ್ದಾರೆ. ಇತರ ರೋಗಿಗಳಿಗೆ ಬೆಡ್‌ಸಿಗುತ್ತಿಲ್ಲ. ಬೇರೆ ಆರೋಗ್ಯ ಸಮಸ್ಯೆಯ ಜನತೆ ಎಲ್ಲಿಗೆ ಹೋಗಬೇಕು, ವ್ಯಾಪಾರ ಉದ್ದಿಮೆ ಉದ್ಯೋಗ ಕಳೆದುಕೊಂಡು ಮಾಡಿದ ಸಾಲ ಕಟ್ಟಲಾಗದೇ ಜನ ಸಾಯುತ್ತಿದ್ದಾರೆ. ಇದಕ್ಕೆ ಏನು ಮಾಡಬೇಕು. ಸರ್ಕಾರ ಜನರ ರಕ್ಷಣೆಗೆ ನಿಲ್ಲಬೇಕು. ಅದರ ಬದಲಿಗೆ ಸರ್ಕಾರವೇ ಕೋರೊನದ ಹೆಸರಿನಲ್ಲಿ ಜನತೆಗೆ ಭಯ ಹುಟ್ಟಿಸುತ್ತಿದೆ. ಭಯದಿಂದಲೇ ಜನತೆ ಸಾಯುತ್ತಿದ್ದಾರೆ. ಜನರನ್ನು ಭಯದಿಂದ ಹೊರತನ್ನಿ ಎಂದು ಮಂಜುನಾಥ ಪೂಜಾರಿ ಮನವಿ ಮಾಡಿದರು.

ಜನತೆಗೆ ಬೇಕಾದ ರೀತಿ ನಿಯಮ ರೂಪಿಸಿ ರಾಜಕೀಯ ಗೊಂದಲದಿಂದ ಹೊರಬನ್ನಿ. ಲಾಕ್‌ಡೌನ್‌ನಿಯಮದಲ್ಲೆ ಗೊಂದಲ ಇದೆ. ಸರಿಯಾದ ನಿರ್ಧಾರವನ್ನು ಮೊದಲು ಮಾಡಿ ಎಂದರು.

ಅಗತ್ಯ ವಸ್ತುಗಳ ಖರೀಧಿಗೆ ಒಂದು ನಿಯಮ, ಸರ್ಕಾರಿ ಕಚೇರಿಗಳಿಗೆ, ಬ್ಯಾಂಕ್‌ಗಳಿಗೆ ಒಂದು ನಿಯಮ. ೯ ಗಂಟೆಯ ಒಳಗೆ ಅಂಗಡಿಗಳು ಬಂದ್‌ಆದರೆ . ೧೦ ಗಂಟೆಯ ಬಳಿಕ ಬ್ಯಾಂಕ್‌ತೆರೆದರೆ ಜನತೆ ಹಣ ಹೊಂದಿಸುವುದು ಹೇಗೆ ಎಂದು.

ಸಾರ್ವಜನಿಕ ಸಭೆ ಸಮಾರಂಭ ರದ್ದು ಮದುವೆಗೆ ೫೦ ಸೀಮಿತ ಮಾಡಿದ್ದಾರೆ. ಆದರೆ ಬಹುತೇಕ ಮದುವೆಯಲ್ಲಿ ೫೦೦ ಜನ ಸೇರುತ್ತಿದ್ದಾರೆ. ಇದಕ್ಕೆ ಯಾರು ಹೊಣೆ. ಪೊಲೀಸರು ಒತ್ತಡಕ್ಕೆ ಸಿಲುಕಿದ್ದಾರೆ. ಸಂಸದರು, ಶಾಸಕರು ರಾಜಕೀಯ ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸುವ ಎಲಸ ಮಾಡಲಿ, ಉಡುಪಿ ಸಂಸದರು ಜಿಲ್ಲೆಯ ಜನರ ಕಷ್ಟ ಕೇಳದೆ ಪಶ್ಚಿಮ ಬಂಗಾಳದ ಬಗ್ಗೆ ಚಿಂತನೆ ಆಡಿ ಬೆಂಗಳೂರಿನಲ್ಲಿ ಅಧಿಕಾರ ಚಲಾಯಿಸಿ ಜನರಿಂದ ನಿಜವಾಗಿ ಅಂತರ ಕಾಪಾಡಿದ್ದಾರೆ. ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲವೆ. ಆಕ್ಸಿಜನ್‌ನೀಡಲು ಕೋರ್ಟ್‌ಆದೇಶ ಬೇಕ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು. ಜನರ ಸಂಕಷ್ಟಕ್ಕೆ ನರೇಂದ್ರ ಮೋದಿಯ ಬಿಜೆಪಿ ಸರ್ಕಾವರೇ ಹೊಣೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಯುವ ಕಾಂಗ್ರೆಸ್‌ಅಧ್ಯಕ್ಷ ದಿನೇಶ ಶೆಟ್ಟಿ, ಶಶಿಕಲಾ ಡಿ ಪೂಜಾರಿ,ಅಶ್ವಿನಿ ಮುದ್ರಾಡಿ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

 ಜಾಹೀರಾತು 

 
 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget