ಬಜಗೋಳಿ:ಅನಗತ್ಯ ಓಡಾಟಕೆ ಬ್ರೇಕ್!ಆರು ಮಂದಿಯ ವಿರುದ್ಧ ಪ್ರಕರಣ ದಾಖಲು,ವಾಹನ ಸೀಜ್-Times of karkala

 ಬಜಗೋಳಿ:ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದರೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ ಆರು ಜನರ ಮೇಲೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಚಿರಾಗ್ ಹೋಟೇಲ್ ಬಳಿ ಪೊಲೀಸರು ಪ್ರಕರಣ ದಾಖಲಿಸಿ ವಾಹನ ಸೀಜ್ ಮಾಡಿದ್ದಾರೆ. 

ಸಾಂಧರ್ಬಿಕ ಚಿತ್ರ 

ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ತೇಜಸ್ವಿ ಮತ್ತು ತಂಡದವರು ನಡೆಸಿದ ಕಾರ್ಯಾಚರಣೆ ನಡೆಸಿದ್ದು ಈ ಸಂಧರ್ಭ  ಆರೋಪಿತರುಗಳಾದ  ಶ್ರೀಮತಿ ಸುಮಾ,ಸುನಿಲ್,ಸುಧಾಕರ ನಾಯ್ಕ,ಮಾಧವ ಶೆಣೈ ,ಬಸವರಾಜ್  6) ಪ್ರಕಾಶ್ ಲೋಬೋ ಇವರುಗಳ ವಿರುದ್ದ ಪ್ರಕರಣ ಧಾಖಲಾಗಿದೆ.ಅಲ್ಲದೆ ಇವರ ವಾಹನಗಳನ್ನೂ ಸೀಜ್ ಮಾಡಲಾಗಿದೆ.


ತಾಲೂಕಿನಾದ್ಯಂತ ಪೊಲೀಸ್ ಚೆಕ್ ಪೋಸ್ಟ್ ಬಿಗಿಗೊಳಿಸಲಾಗಿದ್ದು ಅನಗತ್ಯ ಓಡಾಡುವವರಿಗೆ ಲಗಾಮು ಹಾಕಲಾಗುತ್ತಿದೆ.

ಪೊಲೀಸ್ ವರದಿ:

ಕಾರ್ಕಳ : ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ: 26/04/2021 ರಿಂದ ದಿನಾಂಕ: 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ಪಿರ್ಯಾದಿ ತೇಜಸ್ವಿ ಟಿ ಐ ಪಿಎಸ್ ಐ    ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಇವರು ದಿನಾಂಕ: 07/05/2021  ರಂದು ಇಲಾಖಾ ಜೀಪು ನಂಬ್ರ: ಕೆ,ಎ20-ಜಿ-162 ನೇದರಲ್ಲಿ ಚಾಲಕನಾಗಿ ಎ,ಹೆಚ್,ಸಿ, 109 ನೇ ಸತೀಶ್ ನಾಯ್ಕ, ಇವರೊಂದಿಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಚಿರಾಗ್ ಹೋಟೇಲ್ ಬಳಿ ತಪಾಸಣೆ ಮಾಡುತ್ತಿರುವಾಗ ಸಮಯ 13:00 ಗಂಟೆಗೆ 14:00 ಗಂಟೆಯ ತನಕ ಅನಗತ್ಯವಾಗಿ ಓಡಾಡಿ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಿ ಕೋವಿಡ್ ನಿಯಮ ಉಲ್ಲಂಘಿಸಿ ಅಪರಾಧ ಎಸಗಿರುವ ಆರೋಪಿತರುಗಳಾದ 1) ಶ್ರೀಮತಿ ಸುಮಾ 2) ಸುನಿಲ್ 3) ಸುಧಾಕರ ನಾಯ್ಕ 4) ಮಾಧವ ಶೆಣೈ  5) ಬಸವರಾಜ್  6) ಪ್ರಕಾಶ್ ಲೋಬೋ ಇವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು 1) ಕೆಎ20-ಇ,ಆರ್-8128 ನೇ ನಂಬ್ರದ ಸ್ಕೂಟಿ 2) ಕೆ,ಎ20-ಇ,ಹೆಚ್-4216 ಆ್ಯಕ್ವಿಟ್ ಹೋಂಡಾ ಸ್ಕೂಟಿ, 3) ಕೆ,ಎ20-ಇ,ಪಿ-1566 ನೇ ನಂಬ್ರದ ಬೈಕ್, 4) ಕೆ,ಎ20-ಇ,ಹೆಚ್.-6020 ನೇ ನಂಬ್ರದ ಹೊಂಡಾ ಮ್ಯಾಟ್ರಿಕ್ಸ್ ಸ್ಕೂಟಿ, , 5) ಕೆ,ಎ63-ಜೆ-0624 ನೇ ನಂಬ್ರದ ಹೀರೋ ಹೊಂಡಾ ಸ್ಲೆಂಡರ್ ಮೋಟಾರು ಸೈಕಲ್, 6) ಕೆ,ಎ 20-ಸಿ-0125 ನೇ ನಂಬ್ರದ ರಿಕ್ಷಾವನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  51/2021 ಕಲಂ: 269, ಐ,ಪಿ,ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

 ಜಾಹೀರಾತು 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget