ದೆಹಲಿ-ಮುಂಬೈನಲ್ಲಿ ದೈನಂದಿನ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆ-Times of karkala

ದೇಶದ ಎರಡು ಪ್ರಮುಖ ಮಹಾನಗರಗಳಾದ ದೆಹಲಿ ಹಾಗೂ ಮುಂಬೈನಲ್ಲಿ ದೈನಂದಿನ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ  ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ದೆಹಲಿಯಲ್ಲಿ ಬುಧವಾರ 3846 ಕೇಸ್‌ಗಳು ಪತ್ತೆ ಆಗಿದ್ದರೆ, ಮುಂಬೈನಲ್ಲಿ 1,350 ಕೇಸ್‌ಗಳು ಪತ್ತೆ ಆಗಿವೆ. 


ಇದೇ ವೇಳೆ ಮುಂಬೈನಲ್ಲಿ ಕೊರೋನಾಕ್ಕೆ 57 ಹಾಗೂ ದೆಹಲಿಯಲ್ಲಿ 235 ಮಂದಿ ಬಲಿಯಾಗಿದ್ದಾರೆ. ಮುಂಬೈನಲ್ಲಿ 29,643 ಸಕ್ರಿಯ ಪ್ರಕರಣಗಳು ಮಾತ್ರ ಇದ್ದು, ಚೇತರಿಕೆ ಪ್ರಮಾಣ ಶೇ.93ಕ್ಕೆ ಏರಿಕೆ ಆಗಿದೆ. 

ಇನ್ನೊಂದೆದೆಡೆ ದೆಹಲಿಯಲ್ಲಿ ಸತತ 3ನೇ ದಿನವೂ 5000ಕ್ಕಿಂತ ಕಡಿಮೆ ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ದಿಲ್ಲಿಯಲ್ಲಿ ಪಾಸಿಟಿವಿಟಿ ದರ ಶೇ.5.78ಕ್ಕೆ ಕುಸಿದಿದೆ.ಮೇ 5ರ ಬಳಿಕ ದೆಹಲಿಯಲ್ಲಿ ದಾಖಲಾಗಿರುವ ಅತೀ ಕನಿಷ್ಠ ದೈನಂದಿನ ಕೋವಿಡ್‌ ಸಂಖ್ಯೆ ಇದಾಗಿದೆ.

 ಜಾಹೀರಾತು  

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget