ಕೋವಿಡ್ ಜೀವಕ್ಕೆ ಮಾರಕವಾದರೆ ಕಾಂಗ್ರೆಸ್ ದೇಶಕ್ಕೆ ಮಾರಕ:ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ-Times of karkala

ಕೋವಿಡ್ ಜೀವಕ್ಕೆ ಮಾರಕವಾದರೆ ಕಾಂಗ್ರೆಸ್ ದೇಶಕ್ಕೆ ಮಾರಕ:ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ

ಕಾರ್ಕಳ: ಕೊವಿಡ್ ನಿಯಂತ್ರಿಸುವಲ್ಲಿ ರಾಜ್ಯ ಸರಕಾರದ ವಿಫಲ ಎನ್ನುವ ಕಾಂಗ್ರೆಸ್ ಮುಖಂಡರ ಹೇಳಿಕೆ ಹಾಸ್ಯಾಸ್ಪದ. ಕೊರೊನಾ ಎರಡನೇ ಅಲೆಯ ಹರಡುವಿಕೆ ತೀವ್ರಗತಿಯಲ್ಲಿ ಏರುತ್ತಿದ್ದು ಸೋಂಕಿತರ ಸಂಖ್ಯೆ ಘಣನೀಯವಾಗಿ ಏರುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಷಡ್ಯಂತ್ರದಿಂದ ಮಾಡಿದ ಬೆಡ್ ಬ್ಲಾಕಿಂಗ್ ದಂಧೆಯ ಅವ್ಯವಹಾರವನ್ನು ಬೆಳಕಿಗೆ ತಂದು,ಸಾವಿರಾರು ಜೀವ ಉಳಿಸುವಲ್ಲಿ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯರವರು ರಾಜ್ಯದ ಮುಂದೆ ಕಾಂಗ್ರೆಸ್‌ನ ಮುಖವಾಡ ಬಯಲು 
ಮಾಡಿದ್ದಾರೆ. 
ಕೊರೊನಾ ಪೀಡಿತ ರೋಗಿಗಳ ಸಂಖ್ಯೆ ಒಮ್ಮೆಲೆ ಏರು ಗತಿಯಲ್ಲಿ ಸಾಗುತ್ತಿರುವುದರಿಂದ 
ಕಾರ್ಕಳದಲ್ಲಿ ಆಕ್ಸಿಜನ್ ಸಮಸ್ಯೆಯಿಂದ ರೋಗಿಗಳು ಬಳಲಬಾರದು ಎಂಬ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್‌ರವರ ನೇತೃತ್ವದಲ್ಲಿ ಸಾರ್ವಜನಿಕರ ಸಹಕಾರದಿಂದ ಸ್ಥಳೀಯವಾಗಿಯೂ ಆಕ್ಸಿಜನ್ ಉತ್ಪಾದನೆ ಮಾಡುವ ಉದ್ದೇಶದಿಂದ ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೂ.35 ಲಕ್ಷ ಮತ್ತು ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ರೂ. 40 ಲಕ್ಷ ವೆಚ್ಚದಲ್ಲಿ ನೂತನ ಆಕ್ಸಿಜನ್ ಉತ್ಪಾದನಾ 
ಘಟಕವನ್ನು ತಕ್ಷಣ ಸ್ಥಾಪಿಸಲು ಕಾರ್ಯಾರಂಭ ಮಾಡಲಾಗಿದೆ.
 
ಕೋವಿಡ್ 1ನೇ ಅಲೆ ಬಂದಾಗಲು 37 ಕ್ವಾರಂಟೈನ್ ಕೇಂದ್ರಗಳನ್ನು ಮಾಡಿ, ಮನೆ ಮನೆಗೆ ದಿನಸಿ 
ಕಿಟ್, ಔಷದಿಯನ್ನು ಪಕ್ಷ ಭೇದ ಮರೆತು ಕಾರ್ಕಳ ಬಿಜೆಪಿ ನೀಡಿದ ಸೇವೆ ಇಡೀ ರಾಜ್ಯಕ್ಕೆ 
ಮಾದರಿಯಾಗಿದೆ. 

ಕಾರ್ಕಳದಲ್ಲಿ 2ನೇ ಅಲೆ ತೀವ್ರ ಗತಿಯಿಂದ ಏರುತ್ತಿರುವ ಈ ಸಂದರ್ಭದಲ್ಲಿಯೂ 
ಕಾರ್ಕಳದ 500 ರಿಂದ 600 ಬಿಜೆಪಿ ಕಾರ್ಯಕರ್ತರು ಹಗಲಿರುಳು ಎನ್ನದೇ ಸಾರ್ವಜನಿಕರ ಸೇವೆ
ಮಾಡುತ್ತಿದ್ದಾರೆ. ಇದನ್ನಾದರೂ ಅರಿತು ಕಾಂಗ್ರೆಸ್ ಕೇವಲ ಪತ್ರಿಕಾ ಪ್ರಕಟಣೆಗೆ ಹಾಗೂ ಸಾಮಾಜಿಕ 
ಜಾಲತಾಣಕ್ಕೆ ಮಾತ್ರ ಸೀಮಿತವಾಗದೇ ಮನೆ ಬಿಟ್ಟು ಕ್ಷೇತ್ರದಲ್ಲಿ ಪಕ್ಷ ಭೇದ ಮರೆತು ಸಾರ್ವಜನಿಕ ಸೇವೆಯಲ್ಲಿ ತೊಡಗುವುದು ಒಳಿತು ಎಂದು ಕ್ಷೇತ್ರಾಧ್ಯಕ್ಷರಾದ ಮಹಾವೀರ ಹೆಗ್ಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಜಾಹೀರಾತು 


 
 

 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget