ಮುಂಡ್ಕೂರು:ಪಾಸಿಟಿವ್ ಇದ್ದ ವ್ಯಕ್ತಿಗೆ ನೆಗೆಟಿವ್ ವರದಿ,ವೈದ್ಯಾಧಿಕಾರಿ ಮೇಲೆ ವಿನಾಕಾರಣ ಆಪಾದನೆ? ದೂರು ದಾಖಲು.-Times of karkala ಟೈಮ್ಸ್ ಆಫ್ ಕಾರ್ಕಳ ವರದಿ

ಮುಂಡ್ಕೂರು:ಪಾಸಿಟಿವ್ ಇದ್ದ ವ್ಯಕ್ತಿಗೆ ನೆಗೆಟಿವ್ ವರದಿ,ವೈದ್ಯಾಧಿಕಾರಿ ಮೇಲೆ ವಿನಾಕಾರಣ ಆಪಾದನೆ? ದೂರು ದಾಖಲು.

ಟೈಮ್ಸ್ ಆಫ್ ಕಾರ್ಕಳ ವರದಿ 

ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯವರ ಮೇಲೆ ವಿನಾಕಾರಣ ಅಪವಾಡವೊಡ್ಡಿ ಕಿರುಕುಳ ನೀಡಲಾಗಿಯೆಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್‌  ಸತೀಶ್‌‌ ದೂರು ದಾಖಲಿಸಿದವರು.

ಸಾಂಧರ್ಬಿಕ ಚಿತ್ರ 


ವಿವರ:
ನವದುರ್ಗ ರೈಸ್ ಮಿಲ್‌ ಸಚ್ಚೇರಿಪೇಟೆ ಇಲ್ಲಿ ಕೋವಿಡ್‌ -19 ಪ್ರಾಥಮಿಕ ಸಂಪರ್ಕಿತರಲ್ಲಿ ಓರ್ವರಾದ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ, ಪಿಲಿಮಂಡೆ ನಿವಾಸಿ ಜಯಂತ್‌ ಎಂಬುವವರಿಗೆ ದಿನಾಂಕ 22/05/2021 ರಂದು ಕೊರೋನಾ ರಿಪೋರ್ಟ್ ಪಾಸಿಟಿವ್ ಬಂದಿತ್ತು.ಇದರಿಂದಾಗಿ ಅವರು ಹೋಮ್‌ ಐಸೋಲೇಸನ್ ಇರಬೇಕಾಗಿತ್ತು.

ಆದರೆ ಕೋವಿಡ್ ಕರ್ಪ್ಯೂ ಇದ್ದರೂ ಕೋವಿಡ್‌ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಆಳ್ವಾಸ್‌ ಆಸ್ಪತ್ರೆ ಮೂಡಬಿದಿರೆ ಇಲ್ಲಿ 22/05/2021 ರಂದು RAT ಪರೀಕ್ಷೆ ನಡೆಸಿ ನೆಗೆಟಿವ್‌ ವರದಿ ಪಡೆದಿದ್ದರು.

ಇದಾದ ಬಳಿಕ ಜಯಂತ್‌ರವರ ಪತ್ನಿ ವೈದ್ಯಾಧಿಕಾರಿ ಡಾ. ಎಸ್‌  ಸತೀಶ್‌‌ ರವರಿಗೆ ಕರೆಮಾಡಿ ವಿನಾಕಾರಣ ಆಪಾದನೆ ಮಾಡುತ್ತಿದ್ದಾರೆ.ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಾ. ಎಸ್‌  ಸತೀಶ್‌‌ ದೂರು ನೀಡಿದ್ದಾರೆ.

                                                   ಜಾಹೀರಾತು  



Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget