ಕಾರ್ಕಳ:ಅಸಹಾಯಕ ಬಡ ಕುಟುಂಬಕ್ಕೆ ಆಸರೆಯಾದ ಪುರಸಭಾ ಸದಸ್ಯ ಶುಭದ ರಾವ್-Times of karkala

ಕಾರ್ಕಳ:ಅಸಹಾಯಕ ಬಡ ಕುಟುಂಬಕ್ಕೆ ಆಸರೆಯಾದ ಪುರಸಭಾ ಸದಸ್ಯ ಶುಭದ ರಾವ್

ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೂಡಬಿದರೆ ಪುತ್ತಿಗೆಯ  ಪಾರ್ವತಿ ಮತ್ತು ಅವರ ಕುಟುಂಬಕ್ಕೆ ಪುರಸಭಾ ಸದಸ್ಯ ಶುಭದ ರಾವ್‌‌ ಆಸರೆಯಾಗುದರ‌ ಮೂಲಕ ಮಾನವೀಯತೆಯನ್ನು ‌ಮೆರೆದಿದ್ದಾರೆ. 

ಅನಾರೋಗ್ಯದ ಕಾರಣ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೂಡಬಿದಿರೆ ಪುತ್ತಿಗೆಯ ಸಂಪಿಗೆ ನಿವಾಸಿ ಪಾರ್ವತಿ,‌ ಮತ್ತು ಅವರನ್ನು ನೋಡಿಕೊಳ್ಳಲು  ಜೊತೆಗಿದ್ದ ಪತಿ‌ ವಿವೇಕ್, ಮತ್ತು ಮಗ ಅಕ್ಷಯ್ ಆಸ್ಪತ್ರೆಯಲ್ಲಿ‌ ಉಳಿದುಕೊಂಡಿದ್ದರು.
ಕೆಲವು ದಿನಗಳ ನಂತರ ಪಾರ್ವತಿ ಗುಣಮುಖರಾಗಿದ್ದರೂ ತನ್ನ ಮನೆಯ ಬಾಡಿಗೆ ನೀಡಲೂ‌ ಅಸಾಯಕರಾಗಿ ಮನೆಗೆ ತೆರಳಲು ಸಾದ್ಯವಾಗದೆ ಪತಿ ಮತ್ತು ‌ಮಗನ ಜೊತೆ ಆಸ್ಪತ್ರೆಯಲ್ಲಿಯೇ ಉಳಿಯಬೇಕಾಯಿತು,
 ರೋಗಿ ಗುಣಮುಖರಾದ‌ ನಂತರ ಹೆಚ್ಚು ದಿನ ಆಸ್ಪತ್ರೆಯಲ್ಲಿ ‌ಉಳಿಸಿಕೊಳ್ಳಲು ಸಾದ್ಯವಾದ ಕಾರಣ ವೈದ್ಯರೊಬ್ಬರು ಈ ಬಗ್ಗೆ ಪುರಸಭಾ ಸದಸ್ಯ ಶುಭದ ರಾವ್ ಇವರ ಗಮನಕ್ಕೆ ತಂದಾಗ ಪಾರ್ವತಿಯವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿ ಅವರ‌ ಜೊತೆಯಿದ್ದ ಪತಿ ಮತ್ತು ಮಗನನ್ನು ಅವರ ಒಪ್ಪಿಗೆಯಂತೆ ಜರಿಗುಡ್ಡೆಯಲ್ಲಿರುವ ಸುರಕ್ಷಾ ಆಶ್ರಮಕ್ಕೆ ಸೇರಿಸಿ ತಕ್ಷಣಕ್ಕೆ ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳನ್ನು ‌ನೀಡಿ ಅವರ ಜೀವನ ನಿರ್ವಹಣೆಯ ಸಂಪೂರ್ಣ  ಜವಾಬ್ದಾರಿಯನ್ನು ವಹಿಸಿಕೊಂಡು ಅಸಾಯಕ ಕುಟುಂಬಕ್ಕೆ ಆಸರೆಯಾಗಿದ್ದಾರೆ. 

ಈಗಾಗಲೇ‌ ಸುಮಾರು ‌50 ಹೆಚ್ಷು‌ ಅಸಾಯಕರಿಗೆ ತಮ್ಮ ಆಶ್ರಮದಲ್ಲಿ ಆಶ್ರಯ ನೀಡುತ್ತಿರುವ ಆಯಿಷಾರವರು ಪಾರ್ವತಿ ಕುಟುಂಬದವರನ್ನು ನೋಡಿಕೊಳ್ಳುವ ಬರವಸೆಯನ್ನು ನೀಡಿದ್ದಾರೆ. 

ಪ್ರತಿಯೊಬ್ಬರೂ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಅಸಾಯಕರಿಗೆ ನೆರವಾಗುವುದು ನಮ್ಮ ಧರ್ಮ, ಧರ್ಮವನ್ನು ಪಾಲಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ - ಶುಭದ ರಾವ್


            ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget