ಹೆಬ್ರಿ:"ಸಣ್ಣ ಉದ್ಯಮ-ಅಂಗಡಿಯವರನ್ನು ಬದಕಲು ಬಿಡಿ"-ಮಂಜುನಾಥ ಪೂಜಾರಿ. ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಸುದ್ದಿಗೋಷ್ಠಿ.-Times of karkala

ಸಣ್ಣ ಉದ್ಯಮ - ಅಂಗಡಿಯವರನ್ನು ಬದಕಲು ಬಿಡಿ : ಮಂಜುನಾಥ ಪೂಜಾರಿ.

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಸುದ್ದಿಗೋಷ್ಠಿ


ಹೆಬ್ರಿ : ಜಿಲ್ಲಾಧಿಕಾರಿಯವರು ಕೊರೊನ ಸೋಂಕಿತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುತ್ತಿರುವುದು ಅತ್ಯಂತ ಒಳ್ಳೇಯ ಶ್ಲಾಘನೀಯ ಕೆಲಸ. ಆಹಾರ ಸಂಸ್ಕರಣೆಯ ಹೆಸರಿನಲ್ಲಿ ಗೇರು ಉದ್ಯಮಗಳು ಸರಾಗವಾಗಿ ಕಾರ್ಯಚರಿಸುತ್ತಿವೆ. ಇದರ ಜೊತೆಗೆ ದಿನದ ಖರ್ಚಿಗಾಗಿ ದುಡಿದು ಬದುಕುತ್ತಿದ್ದ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಸ್ಥರು, ಟೈಲರ್‌ಗಳು, ಬಟ್ಟೆ ಅಂಗಡಿ, ಕ್ಷೌರದಂಗಡಿ, ದೋಬಿಯವರು, ರಿಕ್ಷಾ ಚಾಲಕರ, ಕೂಲಿ ಕಾರ್ಮಿಕರ ಬಗ್ಗೆ ಜಿಲ್ಲಾಧಿಕಾರಿಯವರು ಯೋಚಿಸಿ ಅವರ ಬದುಕಿಗೆ ದಾರಿ ತೋರಿಸಬೇಕಾಗಿದೆ, ವಾರಕ್ಕೆ ಕನಿಷ್ಠ ೪ ದಿನವಾದರೂ ತೆರೆಯಲು ಅವಕಾಶ ಕೋಡಿ. ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಬಟ್ಟೆ ಸಹಿತ ವಸ್ತುಗಳು ಹಾಳಾಗುತ್ತಿವೆ. ಅವರನ್ನು ಬದುಕಲು ಬಿಡಿ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಅವರು ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಳಿಗ್ಗೆ ಬೇಗನೇ ಬ್ಯಾಂಕ್‌ ಕೂಡ ತೆರೆಯಿರಿ:ದಿನಸಿ ಅಂಗಡಿಯಂತೆಯೇ ಬ್ಯಾಂಕ್ ಗಳನ್ನು ಕೂಡ ತೆರೆಯಲು ಆದೇಶ ನೀಡಿ. ಈಗ ೯.೪೫ರೊಳಗೆ ಅಂಗಡಿಗಳನ್ನು ಬಂದ್‌ ಮಾಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಹಣದ ಅಗತ್ಯ ಇರುತ್ತದೆ. ಬ್ಯಾಂಕ್‌ ತೆರಯುವುದು ೧೦ ರ ಬಳಿಕ. ೧೦ ಗಂಟೆಯ ಬಳಿಕ ತಿರುಗಾಡಲು ಅವಕಾಶ ಇಲ್ಲ. ಇದರಿಂದ ಸಾರ್ವಜನಿಕರು ತೀವೃ ಸಮಸ್ಯೆ ಎದುರಿಸುತ್ತಿದ್ದಾರೆ. ಒಬ್ಬರಿಗೊಂದು ನಿಯಮ ಬೇಡ.. ಸಮಾನವಾಗಿ ಅವಕಾಶ ನೀಡಿ ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದರು. 

ಹೆಬ್ರಿ ಸರ್ಕಾರಿ ಆಸ್ಪತ್ರೆಯ ಬಗ್ಗೆ ನಮ್ಮ ದೂರು ಇಲ್ಲ : ಎಂಬಿಬಿಎಸ್‌ ವೈದ್ಯರನ್ನು ಕೊಡಿ : ನಮಗೆ ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯದ ವೈದ್ಯರು ಮತ್ತು ಸಿಬ್ಬಂದ್ಧಿಗಳ ಬಗ್ಗೆ ತಕರಾರು ಇಲ್ಲ. ಅವೆರಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದರೆ. ಅಲ್ಲಿ ಆಮ್ಲಜನಕ ವ್ಯವಸ್ಥೆ ಸಹಿತ ವಿವಿಧ ಸವಲತ್ತುಗಳನ್ನು ನೀಡಿ ಎಂದು ಮನವಿ ಮಾಡಿದ್ದೇವೆ ಎಂದ ಮಂಜುನಾಥ ಪೂಜಾರಿ ಹಿಂದಿನ ವೈದ್ಯರು ಮತ್ತು ಆಸ್ಪತ್ರೆಯ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ದಿನವೂ ತಕರಾರು ತೆಗೆಯುತಿದ್ದರು. ಈಗ ಇಲ್ಲಿ ದಂದ ವೈದ್ಯರೇ ಆಸ್ಪತ್ರೆಯ ಮುಖ್ಯಸ್ಥರಾಗಿದ್ದಾರೆ. ನಮಗೆ ಮುಖ್ಯವಾಗಿ ಎಂಬಿಬಿಎಸ್‌ ವೈದ್ಯರು ಬೇಕು. ಜನರನ್ನು ತಪ್ಪುದಾರಿಗೆ ಎಳೆಯಬೇಡಿ. ಎಂಬಿಬಿಎಸ್‌ ವೈದ್ಯರನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ನೇಮಿಸಿ ಎಂದು ಮಂಜುನಾಥ ಪೂಜಾರಿ ಆಗ್ರಹಿಸಿದರು.

ಹೆಬ್ರಿಗೆ ಇಂದಿರಾ ಕ್ಯಾಂಟೀನ್‌ ನೀಡಿ : ಹೆಬ್ರಿ ಗ್ರಾಮೀಣ ಪ್ರದೇಶದ ತಾಲ್ಲೂಕು ಕೇಂದ್ರವಾಗಿದ್ದು ಸರ್ಕಾರಿ ಹೆಬ್ರಿಗೆ ಅತೀ ಶೀಘ್ರವಾಗಿ ಇಂದಿರಾ ಕ್ಯಾಂಟೀನ್‌ ವ್ಯವಸ್ಥೆ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಮಂಜುನಾಥ ಪೂಜಾರಿ ಮನವಿ ಮಾಡಿದರು.

ಹೆಬ್ರಿ ಸರ್ಕಾರಿ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಮನವಿ : ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಮೂಲಕ ರಾಜ್ಯದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಮನವಿ ಮಾಡಲಾಗುವುದು ಎಂದು ಮಂಜುನಾಥ ಪೂಜಾರಿ ತಿಳಿಸಿದರು.


ಆಶಾ ಕಾರ್ಯಕರ್ತರಿಗೆ ಕನಿಷ್ಠ 15 ಸಾವಿರ ಗೌರವ ಧನ ನೀಡಿ : ಮಂಜುನಾಥ ಪೂಜಾರಿ.

ಕೇವಲ 4500 ಸಂಬಳದೊಂದಿಗೆ ಆಶಾ ಕಾರ್ಯಕರ್ತರನ್ನು ದಿನವಿಡಿ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಅವರ ಸೇವೆ ಪ್ರಶ್ನಾತೀತ ಮತ್ತು ಅಭಿನಂದನೀಯ. ಅವರಿಗೆ ಕನಿಷ್ಠವಾಗಿ ತಿಂಗಳಿಗೆ ೧೫ ಸಾವಿರ ರೂಪಾಯಿ ಗೌರವಧನ ನೀಡಬೇಕು ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಒತ್ತಾಯಿಸಿದರು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದ್ಧಿ, ಪೋಲಿಸರ ಸಹಿತ ಕೊರೊನ ವಾರಿಯರ್ಸ್‌ ಗಳಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಎಂದು ಮಂಜುನಾತ ಪೂಜಾರಿ ಮನವಿ ಮಾಡಿದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಲಕ್ಷ್ಮಣ ಆಚಾರ್‌, ಪ್ರಮುಖರಾದ ಶಶಿಕಲಾ ಡಿ.ಪೂಜಾರಿ, ಶಂಕರ ಶೇರಿಗಾರ್‌, ಸುಧಾಕರ ಶೆಟ್ಟಿ, ಅಶ್ವಿನಿ ಮುದ್ರಾಡಿ, ಶಿವರಾಮ ಪೂಜಾರಿ ಉಪಸ್ಥಿತರಿದ್ದರು.


 ಜಾಹೀರಾತು  

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget