"ಸಂಕಷ್ಟದಲ್ಲಿರುವ ಹೋಟೆಲ್ ಉದ್ಯಮಿಗಳಿಗೆ,ಕಾರ್ಮಿಕರಿಗೆ ಸರ್ಕಾರ ಕೂಡಲೇ ನೆರವಾಗಬೇಕು"- ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ ಮನವಿ-Times of karkala

ಕೊರೊನಾ ವೈರಸ್ ನಿಂದ ದೇಶದಾದ್ಯಂತ ಹೋಟೆಲ್ ಹಾಗೂ ಬಾರ್  ಉದ್ಯಮಕ್ಕೆ ಭಾರಿ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಕಳೆದ ವರ್ಷದಿಂದ ನಷ್ಟ ದ ಮೇಲೆ ನಷ್ಟ ಉಂಟಾಗಿ ಮಾಲಿಕರ,ನೌಕರರ ಸಮಸ್ಯೆ ಹೆಳತೀರದಾಗಿದೆ.


ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊಟೆಲ್ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ(Tax-free) ನೀಡಬೇಕು ಹಾಗೂ ನೌಕರರಿಗೆ ಸಹಾಯ ಧನ ನೀಡಲೇಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ ಮನವಿ ಮಾಡಿದ್ದಾರೆ.

ಕೊರೊನಾ ಸೃಷ್ಟಿಸಿದ ಲಾಕ್‌ಡೌನ್‌ ಹೊಡೆತಕ್ಕೆ ಹೋಟೆಲ್‌ ಉದ್ಯಮಿಗಳು ಹಾಗೂ ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೋವಿಡ್​ ಮಾರ್ಗಸೂಚಿಯಲ್ಲಿ ಹೋಟೆಲ್‌ಗಳಲ್ಲಿ ಕೇವಲ ಪಾರ್ಸಲ್ ಸೇವೆಗಳಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಆದ್ರೆ ಇದು ಹೋಟೆಲ್​ ಉದ್ಯಮವನ್ನು ಮತ್ತೆ ಸಂಕಷ್ಟಕ್ಕೆ ದೂಡುತ್ತಿದೆ.

ಸದಾ ಗ್ರಾಹಕರಿಂದ ತುಂಬಿತುಳುಕುತ್ತಿದ್ದ  ಬಹುತೇಕ ಹೋಟೆಲ್​​ಗಳು ಇಂದು ಖಾಲಿ ಖಾಲಿ ಇವೆ. ಹೋಟೆಲ್​ಗಳಲ್ಲಿ ಪಾರ್ಸಲ್ ಸೇವೆಗಷ್ಟೇ ಅವಕಾಶ ಇರುವುದರಿಂದ ಹೆಚ್ಚಿನ ಗ್ರಾಹಕರು ಹೋಟೆಲ್​ಗಳಿಗೆ ಬರುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಗ್ರಾಹಕರು ಬರುತ್ತಿದ್ದಾರೆ.

ಕೆಲ ಹೋಟೆಲ್‌ಗಳನ್ನು ಬಾಡಿಗೆ ಪಡೆದ ಉದ್ಯಮದಾರರು ಕಳೆದ ಎರಡೂ ತಿಂಗಳಿಂದ ವಹಿವಾಟು ನಿಂತಿರುವುದರಿಂದ ಬಾಡಿಗೆ ತುಂಬುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಇನ್ನೂ ಕೆಲವರು ಬ್ಯಾಂಕ್‌, ಫೈನಾನ್ಸ್‌ಗಳಲ್ಲಿ ಮಾಡಿದ ಸಾಲ ತೀರಿಸಲಾಗದ ಸಂಕಷ್ಟದಲ್ಲಿಸಿಲುಕಿದ್ದಾರೆ.

ಶೀಘ್ರವೇ ಸರಕಾರ ಹೋಟೆಲ್ ಉದ್ಯಮಿಗಳ ಹಾಗೂ ಕಾರ್ಮಿಕರ ನೆರವಿಗೆ ಧಾವಿಸಬೇಕು ಎಂದು ಅವರು ಈ ಸಂಧರ್ಭ ತಿಳಿಸಿದ್ದಾರೆ.

 ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget