ಭೂ ಲೋಕದ ಅಮೃತ ಗೋಧಿ ಹುಲ್ಲಿನ ಜ್ಯೂಸ್ ಮನೆಯಲ್ಲಿಯೇ ತಯಾರಿಸಿ!-ರಮಿತಾ ಶೈಲೇಂದ್ರ ರಾವ್-Times of karkala

ವೀಟ್‌ಗ್ರಾಸ್ ಅನೇಕ  ಅಂಗಡಿಗಳಲ್ಲಿ ಮತ್ತು ಆರೋಗ್ಯ ಆಹಾರ ಮಳಿಗೆಗಳಲ್ಲಿ ಖರೀದಿಸಲು ನಿಮಗೆ ಸಿಗಬಹುದು., ಆದರೆ ನೀವು ಹಣವನ್ನು ಖರ್ಚು ಮಾಡದೇ  ನಿಮ್ಮ ಸ್ವಂತ ಮನೆಯಲ್ಲೇ ಗೋಧಿ ಗ್ರಾಸ್ ಅನ್ನು  ಬೆಳೆಸುವುದನ್ನು ಪ್ರಯತ್ನಿಸಿ.


ಜೀವಸತ್ವಗಳು, ಖನಿಜಗಳು  ತುಂಬಿರುವ ಗೋಧಿ ಗ್ರಾಸ್ ರಕ್ತದೊತ್ತಡವನ್ನು ಕಡಿಮೆ ಮಾಡುವುದು, ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಮನೆಯಲ್ಲಿ ಗೋಧಿ ಗ್ರಾಸ್ ವೇಗವಾಗಿ ಬೆಳೆಯುವುದು ಹೇಗೆ.? ಇದರ ಜ್ಯೂಸ್ ಮಾಡೋದು ಹೇಗೆ.? ತಿಳಿಯೋಣ ಇದು ಆರೋಗ್ಯಕ್ಕೆ ಪ್ರಯೋಜನ ಕೂಡ. 

* ಒಂದು ಕಪ್ ವೀಟ್ ಗ್ರಾಸ್ ಬೀಜವನ್ನು ಗಾಜಿನ ಜಾರ್ನಲ್ಲಿ ಇರಿಸಿ ಮತ್ತು ಬೀಜಗಳನ್ನು ಮುಚ್ಚಿಡಲು ಸಾಕಷ್ಟು ನೀರಿನಿಂದ ತುಂಬಿಸಿ ಇಡಿ.

* ನೀರಿನಲ್ಲಿ ನೆನೆಯಲು ಬಿಟ್ಟ ಕಾಳುಗಳು  24 ಗಂಟೆ ನೀರಿನಲ್ಲಿ ಇರಲಿ.

* ಮರುದಿನ ನೀರನ್ನು ಸೋಸಿ ಕೇವಲ ಕಾಳುಗಳನ್ನು ಹರಡಿಸಿ ಇಡಿ.

* ನಂತರ ತೊಳೆಯಿರಿ ಮತ್ತು ಮುನ್ಹ ಹಾರಡಿಸಿ, ಮತ್ತೊಮ್ಮೆ ಪುನರಾವರ್ತಿಸಿ.

* ಮೂರನೆಯ ಬಾರಿಗೆ, ಬೀಜಗಳು ಸಣ್ಣ ಬೇರುಗಳನ್ನು ಮೊಳಕೆ ಮಾಡಿರಬೇಕು ಮತ್ತು ಈಗ ನೆಟ್ಟ ನಂತರ ವೇಗವಾಗಿ ಬೆಳೆಯುತ್ತವೆ.


ಜ್ಯೂಸ್ ಮಾಡುವ ವಿಧಾನ :

* ಮೇಲಿನ ಎಳೆಯ ಸೊಪ್ಪುಗಳನ್ನು ತುಂಡರಿಸಿ ತೆಗೆದುಕೊಳ್ಳಿ.

* ಸಣ್ಣಗೆ ಹೆಚ್ಚಿದ 1ಕಪ್ ಸೊಪ್ಪಿಗೆ 2 ಕಪ್ಪಿನಷ್ಟು ನೀರನ್ನು ಮತ್ತು ರುಚಿಗೆ ತಕ್ಕ ಬೆಲ್ಲವನ್ನು ಹಾಕಿ  ರುಬ್ಬಿಕೊಳ್ಳಿ.

* ಅದನ್ನು ಸೋಸಿ ಬೇಕಾದಲ್ಲಿ ಹಾಲನ್ನು ಹಾಕಿದರೆ ರುಚಿಕರವಾದ ಗೋಧಿ ಹುಲ್ಲಿನ ಜ್ಯೂಸ್ ರೆಡಿ.

ಮನೆಯ ಅಡುಗೆ ಹಿತಕರ

-ರಮಿತಾ ಶೈಲೇಂದ್ರ ರಾವ್ 

 ಜಾಹೀರಾತು  

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget