June 2021

ಹೆಬ್ರಿ:ಅಕ್ರಮಸಕ್ರಮ - 94ಸಿ ಅರ್ಜಿಗಳ ಫಲಾನುಭವಿಗಳಿಗೆ ಅರ್ಜಿ ಮುಕ್ತಾಯದ ನೋಟಿಸ್.


"ಹಕ್ಕು ಪತ್ರ ನೀಡದೇ ಡೀಮ್ಡ್‌ ಫಾರೆಸ್ಟ್‌ ನೆಪದಲ್ಲಿ ಅರ್ಜಿಗಳನ್ನು ಮುಕ್ತಾಯಗೊಳಿಸಿದರೆ ಉಗ್ರ ಹೋರಾಟ"-ತಹಶೀಲ್ಧಾರ್‌ಗೆ ಕಾಂಗ್ರೆಸ್‌ ಎಚ್ಚರಿಕೆ.


"ಜನರ ಹಕ್ಕು ಕಸಿಯಬೇಡಿ - ಸಾಧ್ಯವಾದರೆ ಸಹಾಯ ಮಾಡಿ"-ನೀರೆ ಕೃಷ್ಣ ಶೆಟ್ಟಿ.


ಅಕ್ರಮವಾಗಿ ಮನೆ ಕಟ್ಟಿ ಕುಳಿತವರಿಗೆ ಜಾಗದ ಹಕ್ಕುಪತ್ರ ನೀಡಲು ೯೪ಸಿ ಅನ್ವಯ ಸರ್ಕಾರ ೨೦೨೨ನೇ ಇಸವಿಯ ವರೆಗೆ ಆದೇಶ ನೀಡಿದ್ದು, ಹೆಬ್ರಿಯ ಕೆಲವೆಡೆ ಅಕ್ರಮ ಸಕ್ರಮ ಮತ್ತು ೯೪ಸಿ ಅರ್ಜಿಗಳನ್ನು ಡೀಮ್ಡ್‌ ಅರಣ್ಯ ಎಂದು ತಾತ್ಕಾಲಿಕವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ಅರ್ಜಿದಾರರಿಗೆ ನೋಟಿಸ್‌ ನೀಡಿದ್ದು ಯಾರಿಗೂ ಅನ್ಯಾಯ ಆಗಬಾರದು. ಅವರು ಕೂಲಿತ ಜಾಗದ ಹಕ್ಕುಪತ್ರ ನೀಡಬೇಕು. ನೋಟಿಸನ್ನು ಮರು ಪರಿಶೀಲನೆ ನಡೆಸಬೇಕು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ನೇತ್ರತ್ವದಲ್ಲಿ ಫಲಾನುಭವಿಗಳು ಮಂಗಳವಾರ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.ಮುದ್ರಾಡಿ ಮಂಜುನಾಥ ಪೂಜಾರಿ ಕಂದಾಯ ಇಲಾಖೆಯು ಜನರಿಗೆ ಸಮಾನವಾಗಿ ನ್ಯಾಯ ಕೋಡಬೇಕು, ಜಿಲ್ಲಾಧಿಕಾರಯವರು ಈ ಬಗ್ಗೆ ಗಮನ ನೀಡಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿಗೆ ಮುಕ್ತಿಗೆ ಹಾಕುತ್ತೇವೆ, ಬಿಜೆಪಿಯವರು ಅವರಿಗೆ ಬೇಕಾದವರಿಗೆ ಹಕ್ಕುಪತ್ರ ಕೊಡಿಸುತ್ತಿದ್ದಾರೆ ಎಂದು ಮಂಜುನಾಥ ಪೂಜಾರಿ ದೂರಿದರು.


ಬಿಜೆಪಿಯವರಿಗೆ ಕೊರೊನ ಬರುವುದಿಲ್ಲವೆ : ಜಿಲ್ಲಾಧಿಕಾರಿಯವರ ಖಡಕ್‌ ಆದೇಶದ ಬಳಿಕವೂ ಜಿಲ್ಲೆಯಲ್ಲಿ ಶಾಸಕರು, ಸಚಿವರು ೪೦೦,೫೦೦ ಮಂದಿಯನ್ನು ಸೇರಿಸಿ ಸಭೆ ನಡೆಸುತ್ತಾರೆ. ಅವರಿಗೆ ಒಂದು ನೀತಿ, ಜನಸಾಮಾನ್ಯರಿಗೆ ಒಂದು ನೀತಿಯೇ, ಕೊವೀಡ್‌ಗೆ ಸಂಬಂಧಿಸಿದ ಸಭೆ ನಡೆಸಲಿ. ಇತರ ಸಭೆ ನಡೆಸುವುದು ಯಾಕೆ. ಆಗ ಕೊರೊನ ಬರುವುದಿಲ್ಲವೆ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.


ಜನರ ಹಕ್ಕು ಕಸಿಯಬೇಡಿ - ಸಾಧ್ಯವಾದರೆ ಸಹಾಯ ಮಾಡಿ : ನೀರೆ ಕೃಷ್ಣ ಶೆಟ್ಟಿ.


ಆಡಳಿತ ನಡೆಸುವವರು ಕೊರೊನದ ಹೆಸರಲ್ಲೂ ಹಣ ಮಾಡಿದ ಮೇಲೆ ಇನ್ನು ಜನರನ್ನು ಬಿಡುತ್ತಾರೆಯೇ,ಜನರ ಸಂಕಷ್ಟ ಅವರಿಗೆ ಗೊತ್ತಿಲ್ಲ. ಜನತೆಗೆ ಸಹಾಯ ಮಾಡುವಾಗ, ಹಕ್ಕುಪತ್ರ ಕೊಡುವಾಗ ಪಕ್ಷ ನೋಡಬೇಡಿ, ಅರ್ಹತೆ ನೋಡಿ ಕೊಡಿ, ಕೊರೊನದ ಸಂಕಷ್ಟದ ಕಾಲದಲ್ಲಿ ಹೆಬ್ರಿಯ ಹಲವು ಮಂದಿಗೆ ಕಂದಾಯ ಇಲಾಖೆ ನೋಟಿಸ್‌ ನೀಡಿರುವುದನ್ನು ಕಂಡರೆ ದು:ಖ ಆಗುತ್ತಿದೆ. ಜಮೀನಿನ ವಿಚಾರದಲ್ಲಿ ಜನರಿಗೆ ಅನ್ಯಾಯವಾದರೆ ತೀವೃ ಹೋರಾಟ ನಡೆಸುತ್ತೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.


ನೋಟಿಸ್‌ ಪಡೆದ ಹಲವರ ಪೈಕಿ ಬಲ್ಲೆಮನೆ ಸುಧಾಕರ ಶೆಟ್ಟಿ ಮಾತನಾಡಿ ದಯಮಾಡಿ ನಮಗೆ ಹಕ್ಕುಪತ್ರ ನೀಡಿ, ನಮ್ಮ ಹಕ್ಕು ಕಸಿಯಬೇಡಿ ಎಂದು ತಹಶೀಲ್ಧಾರ್‌ ಅವರಲ್ಲಿ ಮನವಿ ಮಾಡಿದರು.


ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಬ್ಬಿನಾಲೆ ರಂಜನಿ ಹೆಬ್ಬಾರ್‌, ಕಾಂಗ್ರೆಸ್‌ ವಿವಿಧ ಘಟಕಗಳ ಪ್ರಮುಖರಾದ ಲಕ್ಷ್ಮಣ ಆಚಾರ್‌, ಶಿವರಾಮ ಪೂಜಾರಿ, ಶಶಿಕಲಾ ಡಿ.ಪೂಜಾರಿ, ಎಚ್.ಬಿ.ಸುರೇಶ್‌, ಎಚ್.ಜನಾರ್ಧನ್‌, ಕನ್ಯಾನ ಸಂತೋಷ ನಾಯಕ್‌, ಅಶ್ವಿನಿ ಮುದ್ರಾಡಿ, ಮುನಿಯಾಲು ಉದಯ ನಾಯ್ಕ್‌, ನಾಗರಾಜ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.\

 ಜಾಹೀರಾತು 
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರಿಗೆ ಅಮೆರಿಕಾದ ಫ್ರಾಂಕ್ಲಿನ್ ಥಿಯೇಟರ್ ವತಿಯಿಂದ ವಿಭಿನ್ನವಾಗಿ ಗೌರವ ಸಲ್ಲಿಸಲಾಗಿದೆ.


ನಾನು ಅವನಲ್ಲ ಅವಳು, ಹರಿವು, ನಾತಿಚರಾಮಿ ಖ್ಯಾತಿಯ ನಟ ಸಂಚಾರಿ ವಿಜಯ್ ಅವರು ಜೂನ್ 15ರಂದು ಕೊನೆಯುಸಿರೆಳೆದಿದ್ದರು. ಅವರಿಗೆ ಗೌರವ ಸಲ್ಲಿಸಲು ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ ವತಿಯಿಂದ ಒಂದು ಸಂದೇಶವನ್ನು ಬಿತ್ತರಿಸಲಾಗಿದೆ.

‘Always in our Heart, Sanchari Vijay, Gone Yet Not Forgotten’ ಇದು ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್‌ನಲ್ಲಿ ಪ್ರಸಾರವಾಗುತ್ತಿರುವ ಸಂದೇಶ. ಈ ಸಂದೇಶ 24 ಗಂಟೆಗಳ ಕಾಲ ಥಿಯೇಟರ್ ಬೋರ್ಡ್ ಮೇಲೆ ಡಿಸ್‍ಪ್ಲೇ ಆಗಿದೆ. ಅತ್ಯದ್ಭುತ ಕಲಾವಿದ ಸಂಚಾರಿ ವಿಜಯ್‍ಗೆ ಫ್ಲಾಂಕ್ಲಿನ್ ಥಿಯೇಟರ್‍ನವರು ಸಲ್ಲಿಸಿದ ಗೌರವ ಇದಾಗಿದೆ. ಅಂದಹಾಗೆ,  ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗ, ಸಿನಿಮಾ ನಿರ್ಮಾಪಕ ರವಿ ಕಶ್ಯಪ್ ಅವರಿಂದ ಈ ಒಂದು ಗೌರವ ಸಲ್ಲಿಕೆ ಸಾಧ್ಯವಾಗಿದೆ.

ವಿಜಯ್‍ಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಬಿ.ಎಸ್. ಲಿಂಗದೇವರು ನಿರ್ದೇಶನ ಮಾಡಿದ್ದ ನಾನು ಅವನಲ್ಲ ಅವಳು ಸಿನಿಮಾದಿಂದ. ಇದೀಗ ಲಿಂಗದೇವರು ಅವರು ಫ್ರಾಂಕ್ಲಿನ್ ಚಿತ್ರಮಂದಿರದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್‍ನವರು ವಿಜಯ್ ನೆನಪಲ್ಲಿ ಇಂದು ಮೆಸೇಜ್ ಪ್ರದರ್ಶನ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕಾರಣಕರ್ತರಾದ ರವಿ ಕಶ್ಯಪ್ ರವರಿಗೆ ವಂದನೆಗಳು ಎಂದಿದ್ದಾರೆ.

ಜೂನ್ 12ರ ತಡರಾತ್ರಿ ಬೈಕ್‍ನಲ್ಲಿ ಬರುವಾಗ ವಿಜಯ್‍ಗೆ ಅಪಘಾತವಾಗಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವರು ಕೋಮಗೆ ಜಾರಿದ್ದರು. ನಂತರ ವೈದ್ಯರು ಎಷ್ಟೇ ಪ್ರಯತ್ನಪಟ್ಟರು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೂನ್ 14ರ ವೇಳೆಗೆ ಅವರ ಮೆದುಳು ನಿಷ್ಕ್ರೀಯಗೊಂಡಿದ್ದರಿಂದ ಅವರ ಅಂಗಾಂಗ ದಾನಕ್ಕೆ ಕುಟುಂಬದವರು ನಿರ್ಧಾರ ಮಾಡಿದ್ದರು. ನಂತರ ಅವರ ಅಂಗಾಂಗಗಳನ್ನು ಅವಶ್ಯಕವಿರುವ ರೋಗಿಗಳಿಗೆ ನೀಡಲಾಗಿತ್ತು. ಸಾವಿನಲ್ಲೂ ವಿಜಯ್ ಸಾರ್ಥಕತೆಯನ್ನು ಮರೆದಿದ್ದಾರೆ. ಅತ್ಯದ್ಭುತ ಕಲಾವಿದನಿಗೆ ಅಮೆರಿಕಾರದಲ್ಲಿ ಹೀಗೆ ವಿಭಿನ್ನವಾಗಿ ಗೌರವ ಸಲ್ಲಿಸಿರುವುದು ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ.

 ಜಾಹೀರಾತು 

ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಅಬ್ಬರ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 37,566 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 37,566 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,03,16,897 ಕ್ಕೆ ಏರಿಕೆಯಾಗಿದೆ. ಇದೇ ವೇಳೆ 907 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3,97,637 ಕ್ಕೆ ಏರಿಕೆಯಾಗಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ 56,994 ಕೊರೊನಾ ಸೋಂಕಿತರು ಚೇತರಿಸಿಕೊಂಡಿದ್ದು, ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2,93,66,601 ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 5,52,659 ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

 ಜಾಹೀರಾತು ಕಡ್ತಲ:ಕುಂಜಕ್ಯಾರ್‌ ಮನೆಯಲ್ಲಿ ಇಸ್ಪಿಟ್‌ ಆಟ : 7 ಮಂದಿಯ ಬಂಧನ.


ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಕುಂಜಕ್ಯಾರ್‌  ಪ್ರಸನ್ನ ಹೆಗ್ಡೆಯವರ ಮನೆಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪಿಟು ಜುಗಾರಿ ಆಟ ನಡೆಸುತ್ತಿರುವುದರ ಖಚಿತ ಮಾಹಿತಿ ಪಡೆದ ಅಜೆಕಾರು ಪೋಲೀಸ್ ಠಾಣೆ ಪೊಲೀಸ್‌ ಉಪನಿರೀಕ್ಷಕ ಸುದರ್ಶನ್ ದೊಡ್ಡಮನಿ ದಾಳಿ ನಡೆಸಿದ್ದು ಏಳು ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳಾದ  ಪ್ರಸನ್ನ ಹೆಗ್ಡೆ,ರಾಜೇಶ್ ಶೆಟ್ಟಿ, ಹರೀಶ್ ಕಾಮತ್,ಸುರೇಂದ್ರ ಶೆಟ್ಟಿ, ಮಹೇಶ್ ಶೆಟ್ಟಿ,ಸಂತೋಷ್, ಸತೀಶ್ ಹೆಗ್ಡೆ ಬಂಧಿತರು. 

ಅಂದರ್‌ ಬಾಹರ್‌ ಇಸ್ಪೀಟ್‌‌ಆಟಕ್ಕೆ ಬಳಸಿದ ಒಟ್ಟು 11,420/- ರೂಪಾಯಿ, 52 ಇಸ್ಪೀಟ್‌ಎಲೆಗಳು, ಹಳೆಯ ಪ್ಲಾಸ್ಟಿಕ್ ಗೋಣಿ ಚೀಲವನ್ನು ಸ್ವಾಧೀನಪಡಿಕೊಳ್ಳಲಾಗಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 

ನಲ್ಲೂರು:ಕೆರೆಗೆ ಬಿದ್ದು ವ್ಯಕ್ತಿಯೊ ಬ್ಬರು ಆತ್ಮಹತ್ಯೆಗೈದ ಘಟನೆ ಭಾನುವಾರ  ನಲ್ಲೂರಿನಲ್ಲಿ ನಡೆದಿದೆ.ನಲ್ಲೂರಿನ ಮಂಜಲ್ತಾರ್ ಕೆರೆಗೆ ಹಾರಿದ್ದು ಮೃತ ಸಿಲ್ವೆಸ್ಟರ್ ಮಸ್ಕರೇನಸ್ (54) ಎಂದು ತಿಳಿದು ಬಂದಿದೆ.

ಮಸ್ಕರೇನಸ್ ಅವರು ಭಾನುವಾರ ಬೆಳಿಗ್ಗೆ 7.15ರ ವೇಳೆಗೆ ಮನೆಯಿಂದ ವಾರ್ಕಿಂಗ್‌ಗೆ ಹೋಗಿದ್ದು ಬಳಿಕ ಅವರ ಮೃತದೇಹವು ಸುಮಾರು ಒಂದುವರೆ ಕಿ.ಮೀ ದೂರದಲ್ಲಿ ಕಾಡು ಪ್ರಾಣಿಗಳಿಗೆ ನೀರು ಕುಡಿಯಲೆಂದು ನಿರ್ಮಿಸಿದ ಕೆರೆಯಲ್ಲಿ ಪತ್ತೆಯಾಗಿದೆ. 


ಸಿಲ್ವೆಸ್ಟರ್ ಮಸ್ಕರೇನಸ್ ಮನೆಗೆ ಹಿಂತಿರುಗದೇ ಹಿಂದುದನ್ನು ಕಂಡು ಮನೆ ಮಂದಿ ಹುಡುಕಾಟ ನಡೆಸಿದಾಗ ಕೆರೆಯ ದಂಡೆಯ ಮೇಲೆ ಸಂಜೆ ಹೊತ್ತಿಗೆ ಮೃತರ ಚಪ್ಪಲಿ ಪತ್ತೆಯಾಗಿತ್ತು. ಅದರ ಆಧಾರದಲ್ಲಿ ಕೆರೆಯಲ್ಲಿ ಮೃತದೇಹ ಪತ್ತೆಹಚ್ಚಲು ಸಾಧ್ಯವಾಗಿದೆ.

ಮೃತರಿಗಿದ್ದ ಹೃದಯ ಸಂಬಂಧಿತ ಕಾಯಿಲೆ ಇದ್ದು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಅದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 

ಕಾರ್ಕಳ:ಮುಖ್ಯಮಂತ್ರಿ ಮೇಲೆ ಸಾರ್ವಜನಿಕರು ದಾಳಿ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟಾಂಗ್ ನೀಡಿದ್ದಾರೆ. ಡಿಕೆಶಿ ಯಾವ ಇಂಟೆಲಿಜೆನ್ಸ್ ರಿಪೋರ್ಟ್ ತೆಗೆದುಕೊಂಡಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.

 ಕಾರ್ಕಳದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್ ಉದ್ಘಾಟನೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆಶಿ ಹೇಳಿದಂತಹ ಯಾವುದೇ ಇಂಟೆಲಿಜೆನ್ಸ್ ರಿಪೋರ್ಟ್ ನಮ್ಮಲ್ಲಿಲ್ಲ. ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಬೇರೆ ಬೇರೆ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಜನರಿಂದ, ಜನರ ಮಧ್ಯದಿಂದ ಬಂದವರು. ಹೋರಾಟಗಳನ್ನು ಮಾಡಿ ಮುಖ್ಯಮಂತ್ರಿಯಾದವರು.


ಯಡಿಯೂರಪ್ಪ ಯಾವತ್ತು ಜನರ ಜೊತೆಗೆ ಇರುವವರು. ಜನರ ಮಧ್ಯೆ ಹೋಗಲು ಸಿಎಂಗೆ ಯಾವುದೇ ತೊಂದರೆ ಇಲ್ಲ. ವಿರೋಧ ಪಕ್ಷಗಳು ಹೇಳುವಂತಹ ಯಾವುದೇ ಮಾತು ಸತ್ಯ ಅಲ್ಲ. ಆತಂಕಗಳು ಏನಿದ್ದರೂ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಿಎಂ ಯಡಿಯೂರಪ್ಪನವರಿಗೆ ಆತಂಕ ಇಲ್ಲ ಎಂದರು.

ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂಬೈ ಪ್ರವಾಸ ವಿಚಾರ ನನಗೆ ಗೊತ್ತಿಲ್ಲ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಇಲ್ಲದಿರುವುದರಿಂದ ನಾನು ಏನೂ ಮಾತನಾಡುವುದಿಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು. 

 ಜಾಹೀರಾತು 

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget