ಕಾರ್ಕಳ:"500 ಮಂದಿ ಕಾರ್ಯಕರ್ತರು ಲಸಿಕೆ ಬ್ಲಾಕ್‌ ಮಾಡಲು ದುಡಿಯುತ್ತಿದ್ದಾರೆಯೇ?" ಹೆಬ್ರಿ ಕಾರ್ಕಳದಲ್ಲಿ ಲಸಿಕೆ ಬ್ಲಾಕಿಂಗ್‌ ದಂಧೆ:ಮಂಜುನಾಥ ಪೂಜಾರಿ ಗಂಭೀರ ಆರೋಪ. "ಇಷ್ಟರ ತನಕ ಭಾರತ ಯಾರಿಂದಲೂ ಕೈ ಚಾಚಿಲ್ಲ. ಮೋದಿಯಿಂದಾಗಿ ಭಾರತ ದಿವಾಳಿಯಾಗಿದೆ."-ನೀರೆ ಕೃಷ್ಣ ಶೆಟ್ಟಿ. -Times of karkala

"500 ಮಂದಿ ಕಾರ್ಯಕರ್ತರು ಲಸಿಕೆ ಬ್ಲಾಕ್‌ ಮಾಡಲು ದುಡಿಯುತ್ತಿದ್ದಾರೆಯೇ?"

ಹೆಬ್ರಿ ಕಾರ್ಕಳದಲ್ಲಿ ಲಸಿಕೆ ಬ್ಲಾಕಿಂಗ್‌ ದಂಧೆ:ಮಂಜುನಾಥ ಪೂಜಾರಿ ಗಂಭೀರ ಆರೋಪ.

"ಇಷ್ಟರ ತನಕ ಭಾರತ ಯಾರಿಂದಲೂ ಕೈ ಚಾಚಿಲ್ಲ. ಮೋದಿಯಿಂದಾಗಿ ಭಾರತ ದಿವಾಳಿಯಾಗಿದೆ."-ನೀರೆ ಕೃಷ್ಣ ಶೆಟ್ಟಿ. 

-Times of karkala


ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿನಕ್ಕೆ 200 ಲಸಿಕೆಯು ದೊರೆಯುತ್ತಿದ್ದು 150ನ್ನು ಮಾತ್ರ ನೀಡಲಾಗುತ್ತಿದೆ. 50ನ್ನು ಉಳಿಸಿಕೊಂಡು ಬಿಜೆಪಿಯ ಕಾರ್ಯಕರ್ತರ ಮೂಲಕ ಅವರಿಗೆ ಬೇಕಾದವರಿಗೆ ನೀಡಲಾಗುತ್ತಿದೆ ಎಂದು, ಈ ಬಗ್ಗೆ ಬಲವಾದ ಗುಮಾನಿ ಇದೆ. ಕಾರ್ಕಳ ಕ್ಷೇತ್ರದಾದ್ಯಂತ ಎಲ್ಲೆಡೆಯೂ ಲಸಿಕೆ ಬ್ಲಾಕ್‌ ಆಗಿದೆ ಎಂದು ಮಂಜುನಾಥ ಪೂಜಾರಿ ಗಂಭೀರ ಆರೋಪ ಮಾಡಿದರು.

ಅವರು ಮಂಗಳವಾರ ಹೆಬ್ರಿಯ ಚೈತನ್ಯ ಯುವ ವೃಂದದ ಒಳಾಂಗಣ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ, ಲಸಿಕೆ ನೀಡುವ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಏನು ಕೆಲಸ. ಅವರ ಮೂಲಕ ಕೂಪನ್‌ ಪಡೆದು ಅವರಿಗೆ ಬೇಕಾದವರಿಗೆ ಮಾತ್ರ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಇರಲಿ, ಇವರಿಗೆ ಏನು ಕೆಲಸ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು. 

ಕಾರ್ಕಳ ಕ್ಷೇತ್ರದಲ್ಲಿ 500 ಮಂದಿ ಕಾರ್ಯಕರ್ತರು ದುಡಿಯುತ್ತಿದ್ದಾರೆ ಎಂದು  ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ. ಲಸಿಕೆಯನ್ನು ಬ್ಲಾಕ್‌ ಮಾಡಲು ದುಡಿಯುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. 

ಮುಖ್ಯಮಂತ್ರಿಗಳು ಒಂದು ಹೇಳುವುದು, ಜಿಲ್ಲಾಧಿಕಾರಿಯವರು ಒಂದು ಕಾನೂನು ಜಾರಿ ಮಾಡುವುದು. ಒಟ್ಟಾರೆಯಾಗಿ ಜನರು ತೀವೃ ಸಂಕಷ್ಟದಲ್ಲಿದ್ದಾರೆ. ಕಾರ್ಕಳ ಶಾಸಕರು ಮತ್ತು ಸಂಸದೆ ಮೌನವಾಗಿದ್ದಾರೆ. ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಕುಳಿತು ವಿಡೀಯೋ ಮೂಲಕ ಸಭೆ ಮಾಡುತ್ತಾರೆ. ಇಲ್ಲಿನ ಜನರ ಸಂಕಷ್ಟ ಕೇಳುವವರು ಯಾರು. ಇಲ್ಲಿನ ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ದೂರಿದರು.

ಬಿಜೆಪಿಯವರು ಎಲ್ಲವನ್ನು ಕೂಡ ಕಾಂಗ್ರೆಸ್‌ ಮೇಲೆ ಹೊರಿಸುತ್ತಾರೆ. ಅವರಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲ. ಎಲ್ಲರೂ ಉಳ್ಳವರು, ಸ್ಥಿತಿವಂತರ ಪರ ನಿಂತಿದ್ದಾರೆ. ಬಡವರು, ಮಧ್ಯಮ ವರ್ಗದವರ ಸ್ಥಿತಿ ಕೇಳುವವರೇ ಇಲ್ಲವಾಗಿದೆ. ಜನರ ಕಷ್ಟ ತಿಳಿಯುವ ಬದಲು ಶಾಸಕರು ಕಾರ್ಕಳ ಬಿಳಿಬೆಂಡೆ ಹೆಸರಿನಲ್ಲಿ ಬೆಂಡೆ ಬೀಜ ಹಂಚಲು ಹೋಗಿದ್ದಾರೆ. ಅವರಿಗೆ ಜನರು ಬೇಡ ಎಂದು ಮಂಜುನಾಥ ಪೂಜಾರಿ ಟಾಂಗ್‌ ನೀಡಿದರು.

ಸರ್ಕಾರ ವಿವೇಚನೆ ಯಿಲ್ಲದೆ ಜನರಿಗೆ ವಿರುದ್ಧವಾಗಿ ತೀರ್ಮಾನ ಕೈಗೊಳ್ಳುವಾಗ ನಮ್ಮ ಶಾಸಕರು, ಸಂಸದರು ಮೌನವಾಗಿರುವುದರಿಂದಲೇ ಅಧಿಕಾರಿಗಳು ಜನವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಲಾಕ್‌ ಡೌನ್‌ ಮುಂದುವರಿಸುವುದಾದರೇ ಜನರಿಗೆ ಆಹಾರ ಧಾನ್ಯಗಳ ಕಿಟ್‌ ಮತ್ತು ಪರಿಹಾರವನ್ನು ಸರ್ಕಾರವೇ ನೀಡಲಿ ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದ್ದರು. 

ಜಿಲ್ಲಾ ಪಂಚಾಯಿತಿ ಸದಸ್ಯರು ಏನು ಮಾಡಿದ್ದಾರೆ : 

ನಾನು ಕಳೆದ ಒಂದೂವರೇ ವರ್ಷದಿಂದ 10 ಲಕ್ಷ ರೂಪಾಯಿ ವೆಚ್ಚದ ನೆರವು, ಕಿಟ್‌ ವೈಯಕ್ತಿಕವಾಗಿ ನೀಡಿದ್ದೇನೆ, ಕಾಂಗ್ರೆಸ್‌ ಪಕ್ಷ ನಿರಂತರವಾಗಿ ಜನರೊಂದಿಗೆ ಇರುವ ಪಕ್ಷ. ಜನರ ಸೇವೆ ಮಾಡಿದೆ. ಹೆಬ್ರಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕಾಂಗ್ರೆಸ್‌ ನವರು ದೇಣಿಗೆ ನೀಡಲಿ ಎಂದು ಹೇಳಿದ್ದಾರೆ. ನೀವು ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಏನು ಮಾಡಿದ್ದೀರಿ. ನಾಡಿಗೆ ನಿಮ್ಮ ಕೊಡುಗೆ ಏನು. ನೀವು ಶಾಸಕರ ಕಾರ್ಯಕ್ರಮವನ್ನೇ ಹೇಳುತ್ತೀರಿ ನಿಮ್ಮದೆನಿದೆ. ನೀವು ಜನಸೇವೆಗೆ ಸಂಸ್ಥೆ ಕಟ್ಟಿ ನಾವು ಸಹಾಯ ಮಾಡುತ್ತೇವೆ ಎಂದು ಗರಂ ಆಗಿ ಹೇಳಿದರು.


ಇಷ್ಟರ ತನಕ ಭಾರತ ಯಾರಿಂದಲೂ ಕೈ ಚಾಚಿಲ್ಲ. ಮೋದಿಯಿಂದಾಗಿ ಭಾರತ ದಿವಾಳಿಯಾಗಿದೆ.-ನೀರೆ ಕೃಷ್ಣ ಶೆಟ್ಟಿ. 

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದಲೇ ಜನ ತೀವೃ ಸಂಕಷ್ಟ ಪಡಿವಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು. ಧರ್ಮದ ದೇವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಇಂದು ಮೃತರಾದವರು ಶವವನ್ನು ನದಿಗೆ ಎಸೆಯುತ್ತಿದ್ದಾರೆ. ಬಿಜೆಪಿಯವರಿಗೆ ಸಂಸ್ಕಾರ ಇಲ್ಲ, ಜನರನ್ನು ಪೊಲೀಸರು ಅಧಿಕಾರಿಗಳ ಮೂಲಕ ನಿಯಂತ್ರಿಸುತ್ತಿದ್ದಾರೆ, ಬಿಜೆಪಿಯವರ ಅಧಿಕಾರದ ವೈಫಲ್ಯದಿಂದ ಜನ ಸಾಯುತ್ತಿದ್ದಾರೆ. ಖಾಯಿಲೆ ಯಿಂದ ಅಲ್ಲ, ಎಂದು ಕೃಷ್ಣ ಶೆಟ್ಟಿ ದೂರಿದರು. ನಡೆದುಕೊಂಡು ಬರಲು ಯಾರಿಗೆ ಸಾಧ್ಯವಿದೆ. ಬೈಕ್‌ ತರಲು ಬಿಡಲ್ಲ. ಇದು ಯಾವ ನೀತಿ. ಬಿಜೆಪಿ ಸರ್ಕಾರ ವಿರುವ ಕಡೆ ಮಾತ್ರ ಕೊರೊನ ಇದೆ. ಕೊರೊನದಲ್ಲಿ ಏನೋ ಇದೆ ಎಂಬ ಸಂಶಯ ಮೂಡುತ್ತಿದೆ. ಇಷ್ಟರ ತನಕ ಭಾರತ ಯಾರಿಂದಲೂ ಕೈ ಚಾಚಿಲ್ಲ. ಮೋದಿಯಿಂದಾಗಿ ಭಾರತ ದಿವಾಳಿಯಾಗಿದೆ. ಈಗ ಬಿಜೆಪಿಯವರು, ಜನಸಾಮಾನ್ಯರು, ಉದ್ಯಮಿಗಳಿಗೆ ಯಾರಿಗೂ ಬಿಜೆಪಿ ಬೇಡವಾಗಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದರು. 

ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಶಂಕರ ಶೇರಿಗಾರ್‌, ಪ್ರಮುಖರಾದ ಸುಧಾಕರ ಶೆಟ್ಟಿ, ನಾಗರಾಜ ಭಂಡಾರಿ, ಅಶ್ವಿನಿ ಮುದ್ರಾಡಿ ಸುದ್ದಿಗೊಷ್ಠಿಯಲ್ಲಿ ಉಪಸ್ಥಿತರಿದ್ದರು.

 ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget