ಪ್ರಚಾರ ಬಯಸದೆ 500 ಕ್ಕೂ ಮಂದಿಗೆ ಕಿಟ್ ವಿತರಿಸಿದ ಮೇಕ್ ಸಂ ಒನ್ ಸ್ಮೈಲ್ ತಂಡ- Times of karkala

 ಪ್ರಚಾರ ಬಯಸದೆ 500ಕ್ಕೂ ಮಂದಿಗೆ ಕಿಟ್ ವಿತರಿಸಿದ ಮೇಕ್ ಸಂ ಒನ್ ಸ್ಮೈಲ್ ತಂಡ


ಕೊರೋನದಿಂದಾಗಿ ನಮಗೆಲ್ಲ ತಿಳಿದಿರುವ ಹಾಗೆ ಬಹಳಷ್ಟು ಜನರ ಜೀವನದ ದಿಕ್ಕೇ ಬದಲಾಗಿದೆ, ಬದುಕಿಗೆ ಆಸರೆಯಾಗ ಬೇಕಿದ್ದವರೇ ಕೆಲಸವಿಲ್ಲದೇ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ, ಈ ಕಷ್ಟ ಕಾಲದಲ್ಲಿ ನಾವೆಲ್ಲರೂ ಒಂದಾಗಿ ಒಬ್ಬರಿಗೊಬ್ಬರು ನೆರವಾಗುವುದೇ ಜೀವನ.

ಮೇಕ್ ಸಂ ಒನ್ ಸ್ಮೈಲ್ ಹೆಲಪಿಂಗ್ ಹ್ಯಾಂಡ್  ತಂಡ ನಮ್ಮ ಕೈಯಲ್ಲಾದ ಕಿಂಚಿತು ಸಹಾಯವನ್ನು ಈ ಕೊರೋನದಿಂದ ತೊಂದರೆಯಾದ ಕುಟುಂಬಗಳಿಗೆ ನೀಡುತ್ತಾ ಬಂದಿರುತ್ತದೆ ಹಾಗೇ ಈ ವರುಷ ಕೊರೋನ ಎರಡನೇ ಅಲೆಯ ಲೊಕ್ಡೌನ್ ಅವಧಿಯಲ್ಲಿ ಈ ತಂಡವು ಉಡುಪಿ ಜಿಲ್ಲೆಯಾದ್ಯಂತ ಸಂಕಷ್ಠದಲ್ಲಿರುವ ಬಡ ಕುಟುಂಬಗಳಿಗೆ ಕಿಟ್ ವಿತರಿಸುವ ಕಾರ್ಯವನ್ನು ಕೈಗೆತ್ತಿಗೊಂಡಿದೆ. ಸುಮಾರು 5ಲಕ್ಷ ರೂಪಾಯಿ ವೆಚ್ಚದಲ್ಲಿ 500 ಕ್ಕಿಂತ ಹೆಚ್ಚು ಕುಟುಂಬಗಳಿಗೆ ಜಿಲ್ಲೆಯಾದ್ಯಂತ, ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ, ತೀರಾ ಬಡವರಿಗೆ ಕಿಟ್ ವಿತರಿಸುವ ಕೆಲಸವನ್ನು ಕಳೆದ 10 ದಿನಗಳಿಂದ ಯಶಸ್ವಿಯಾಗಿ ಮಾಡುತ್ತ ಬಂದಿದೆ.

ಮೊದಲಿಗೆ ಸುಮಾರು 100 ಕಿಟ್ಗಳನ್ನೂ ಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭವಾಯಿತು ನಂತರ ತಂಡದ ಸದಸ್ಯರ ಉತ್ತಮ ಪ್ರತಿಕ್ರಿಯೆಯಿಂದ್ದ  ಸುಮಾರು 500 ಕಿಟ್ಟಗಳನು ಈಗಾಗಲೇ ನೀಡಿ ಇನ್ನು ಹಲವು ಕುಟುಂಬಗಳಿಗೆ ಕಿಟ್ ವಿತರಿಸುವ ಉದ್ದೇಶ ಹೊಂದಿದ್ದಾರೆ 

ಈ ಕಿಟ್ಗಳನ್ನೂ ವಿತರಿಸುವ ಸಂದರ್ಭದಲ್ಲಿ ಯಾವುದೇ ಕುಟುಂಬದ ಫೋಟೋಗಳನ್ನೂ ತೆಗೆಯದೆ ಕೇವಲ ಮನೆಗಳ ಫೋಟೋಗಲ್ಲನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹೊಸ ಆರಂಭವನ್ನು ಆರಂಭಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಈ ತಂಡವು ಈಗಾಗಲೇ ಹಲವಾರು ಇಂತಹ ಜನಹಿಥ್ಕರವಾದ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ,


ಯಾವುದೇ ಫಲಾಪೇಕ್ಷೆ ಇಲ್ಲದೇ ಆ ಬಡ ಕುಟುಂಬಗಳ ಮನೆಯ ಬಾಗಿಲಿನಲ್ಲಿ ಕಿಟ್ಗಳನ್ನು ಇಟ್ಟು ,ಆ ಮನೆಮಂದಿಯ ಮುಖದಲ್ಲೊಂದು ಸಣ್ಣ ನಗು ತರಿಸುವ ಒಂದು ಪುಟ್ಟ ಪ್ರಯತ್ನ. ಮುಂದೆ ಖಂಡಿತವಾಗಿಯೂ ಅವರ  ಕಷ್ಟಕ್ಕೆ ನಾವೆಲ್ಲರೂ ಆಸರೆಯಾಗುವೆವು ಎಂಬುದು ಈ ತಂಡದ ಸದಸ್ಯರ ಗುರಿ.. 


ಇದರ ಜೊತೆಗೆ ಕೆಲವು ಆಶ್ರಮಗಳಿಗೆ ಆಹಾರ ಸಾಮಗ್ರಿಗಳನ್ನು ಈ ಲೊಕ್ಡೌನ್ ಸಂದರ್ಭದಲ್ಲಿ ಪೂರೈಸಿದ್ದಾರೆ, ಬ್ರಾಹ್ಮವರದ ಅಪ್ಪ ಅಮ್ಮ್ ಅನಾಥಾಲಯಾ, ಕಾರ್ಕಳದ ಸುರಕ್ಷಾ ವರದಾಶ್ರಮ, ಮಂಗಳೂರಿನ ಸ್ನೇಹದೀಪ , ಮಣಿಪಾಲದ ಹೊಸಬೆಳಕು ಈ ನಾಲ್ಕು ಸಂಸ್ಥೆ ಗಳಿಗೆ, ದಿನಸಿ ಸಾಮಗ್ರಿಗಳನ್ನೂ ಪೂರೈಸಿದ್ದಾರೆ.


ಹಲವು ಗ್ರಾಮ ಪಂಚಾಯತಿಯ ಆಶಾ ಕಾರ್ಯಕರ್ತರಿಗೆ ಸನ್ಮಾನ ಹಾಗು ಕಿಟ್ ವಿತರಣೆ,

ಅರೋಗ್ಯ ಕೇಂದ್ರದ ದಾದಿಯರಿಗೆ ಸನ್ಮಾನ ಮತ್ತು ಕಿಟ್ಗಳನ್ನು,ವೈದ್ಯಾಧಿಕಾರಿಗಳಿಗೆ ಗೌರವಾರ್ಪಣೆ, 

ಇಂತಹ ವಿವಿಧ ಕಾರ್ಯಕ್ರಮ ಗಳನ್ನೂ ನಡೆಸಿದ್ದಾರೆ.


ಈ ಕೊರೋನ ಆದಷ್ಟು ಬೇಗ ನಮ್ಮೆಲ್ಲರ ಜೀವನದಿಂದ ದೂರವಾಗಿ ನಮೆಲ್ಲರ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ ಅರೋಗ್ಯ ಸಿಗಲೆಂದು ಆ ದೇವರಲ್ಲಿ ನಾವೆಲ್ಲರೂ ಪ್ರಾರ್ಥಿಸೋಣ.


ಮೇಕ್ ಸಂಒನ್ ಸ್ಮೈಲ್ ಹೆಲಪಿಂಗ್ ಹ್ಯಾಂಡ್ ತಂಡ (MAKESOME1SMILE HELPINGHAND)

ಉಡುಪಿ /ದಕ್ಷಿಣಕನ್ನಡ/ಮುಂಬೈ.

 

Logon to: www.makesome1smile.com

 ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget