ಕಡ್ತಲ:ಕುಂಜಕ್ಯಾರ್‌ ಮನೆಯಲ್ಲಿ ಇಸ್ಪಿಟ್‌ ಆಟ : 7 ಮಂದಿಯ ಬಂಧನ-Times of karkala

ಕಡ್ತಲ:ಕುಂಜಕ್ಯಾರ್‌ ಮನೆಯಲ್ಲಿ ಇಸ್ಪಿಟ್‌ ಆಟ : 7 ಮಂದಿಯ ಬಂಧನ.


ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಕುಂಜಕ್ಯಾರ್‌  ಪ್ರಸನ್ನ ಹೆಗ್ಡೆಯವರ ಮನೆಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪಿಟು ಜುಗಾರಿ ಆಟ ನಡೆಸುತ್ತಿರುವುದರ ಖಚಿತ ಮಾಹಿತಿ ಪಡೆದ ಅಜೆಕಾರು ಪೋಲೀಸ್ ಠಾಣೆ ಪೊಲೀಸ್‌ ಉಪನಿರೀಕ್ಷಕ ಸುದರ್ಶನ್ ದೊಡ್ಡಮನಿ ದಾಳಿ ನಡೆಸಿದ್ದು ಏಳು ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳಾದ  ಪ್ರಸನ್ನ ಹೆಗ್ಡೆ,ರಾಜೇಶ್ ಶೆಟ್ಟಿ, ಹರೀಶ್ ಕಾಮತ್,ಸುರೇಂದ್ರ ಶೆಟ್ಟಿ, ಮಹೇಶ್ ಶೆಟ್ಟಿ,ಸಂತೋಷ್, ಸತೀಶ್ ಹೆಗ್ಡೆ ಬಂಧಿತರು. 

ಅಂದರ್‌ ಬಾಹರ್‌ ಇಸ್ಪೀಟ್‌‌ಆಟಕ್ಕೆ ಬಳಸಿದ ಒಟ್ಟು 11,420/- ರೂಪಾಯಿ, 52 ಇಸ್ಪೀಟ್‌ಎಲೆಗಳು, ಹಳೆಯ ಪ್ಲಾಸ್ಟಿಕ್ ಗೋಣಿ ಚೀಲವನ್ನು ಸ್ವಾಧೀನಪಡಿಕೊಳ್ಳಲಾಗಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 









Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget