ಕಾರ್ಕಳ:ಪೋಲಿಸ್ ಮನೆಯ ಸಾಕು ನಾಯಿಯ ಕಡಿತ- ವ್ಯಕ್ತಿಯೊರ್ವ ರಕ್ತಸಿಕ್ತ-Times of karkala

ಕಾರ್ಕಳ:ಜೋಡುರಸ್ತೆಯ ವ್ಯಾಘ್ರಚಾಮುಂಡಿ ದೇವಸ್ಥಾನ ರಸ್ತೆಯ ಬಳಿ ಪೋಲಿಸ್ ಮತ್ತು ಉಪನ್ಯಾಸಕಿ  ದಂಪತಿಗಳ ಸಾಕು ನಾಯಿಯೊಂದು  ಕೆಲಸದಿಂದ ಮನೆಗೆ ಮರಳುತಿದ್ದ ವ್ಯಕ್ತಿಯೊಬ್ಬರಿಗೆ ಕಚ್ಚಿದ್ದು ವ್ಯಕ್ತಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. 

ಇದೆ ನಾಯಿಯು ಈ ಮುಂಚೆ ಕೆಲ ಅಕ್ಕ ಪಕ್ಕದ ನಾಯಿಗಳಿಗೂ ಸಹ ಕಚ್ಚಿತ್ತು. ನಾಯಿಯನ್ನು ಕಟ್ಟಿ ಹಾಕದೆ ಇದ್ದುದರಿಂದ ಈ ದಾರಿಯಲ್ಲಿ ಸ್ಥಳೀಯರು ಹೆದರಿ ನಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಷ್ಟು ಕೋಪದ ನಾಯಿ ಇತ್ತಿಚ್ಚಿಗೆ ಮರಿ ಸಹ ಇಟ್ಟಿದ್ದು, ಕೋಪ ಇನ್ನಷ್ಟು ಕೆರಳಿತ್ತು. 



ಈದೇ ದಾರಿಯಲ್ಲಿ ಹಲವು ಮನೆಗಳಿದ್ದು ಚಿಕ್ಕ ಪುಟ್ಟ ಮಕ್ಕಳು ಸಹ ವ್ಯಾಘ್ರಚಾಮುಂಡಿ ದೇವಸ್ಥಾನದ ಬಳಿ ಆಡುತ್ತಿರುತ್ತಾರೆ. ಇಷ್ಟೆಲ್ಲಾ ಗೊತ್ತಿದರು ಸಹ ಮನೆಯವರು ಮಾತ್ರ ನಾಯಿಯನ್ನು ಹಾಗೇ ಹಗ್ಗ ಕಟ್ಟದೇ ಬೇಜವದ್ಧಾರಿತನದಿಂದ ಬಿಟ್ಟಿದ್ದು, ನಾಯಿಯನ್ನು ಕಟ್ಟಿಯೇ ಹಾಕದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ಸದ್ಯಕ್ಕೆ ದಾಳಿಗೊಳಗಾದ ವ್ಯಕ್ತಿಯು ಕಾರ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಜಾಹೀರಾತು 









Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget