ಕಾರ್ಕಳಕ್ಕೆ ಮಹೇಶ್ ಬೈಲೂರು ವರ...✍🏻 ಜಿತೇಂದ್ರ ಕುಂದೇಶ್ವರ-Times of karkala

ಕಾರ್ಕಳದಲ್ಲಿ ಎರಡು ದಶಕಗಳ‌‌ ಹಿಂದೆ ಹಿಂದುತ್ವದ ದೊಡ್ಡ ಅಲೆ ಎದ್ದಿತ್ತು.ಈ ಮೂಲಕ ಅದೆಷ್ಟೋ ವರ್ಷಗಳಿಂದ ಕೈ ಭದ್ರ ಕೋಟೆಯನ್ನು ಭೇದಿಸಿ ವಿಧಾನಸಭೆಗೆ ಬಿಜೆಪಿ ತನ್ನ ಪ್ರತಿನಿಧಿಯನ್ನು ಆಯ್ಕೆ ಮಾಡಿತ್ತು.ಆಗ ನಾನು ಅಲ್ಲಿ‌ಪತ್ರಕರ್ತನಾಗಿ‌ ಸಾಕ್ಷಿಯಾಗಿದ್ದೆ.ಅಂದು ಬೋಳ ಪಬ್ಬರ(ಪ್ರಭಾಕರ ಕಾಮತ್)ಸಂಘಟನಾ ಶಕ್ತಿ ನನ್ನ ಗಮನಕ್ಕೆ ಬಂದಿತ್ತು.


ಎರಡು ದಶಕಗಳ ಬಳಿಕ ಮತ್ತೊಂದು ದೊಡ್ಡ ಹಿಂದುತ್ವದ ಅಲೆ ಎದ್ದಿದೆ. ಇದು ರಾಜಕೀಯ ಶಕ್ತಿ ಸಂಚಯನಕ್ಕಾಗಿ ಅಲ್ಲವೇ ಅಲ್ಲ. ತುಳುನಾಡಿನ ದೈವಗಳ ಶಕ್ತಿ ಸಾನ್ನಿಧ್ಯಕ್ಕಾಗಿ.ಕಾರ್ಕಳ ದ ಹತ್ತೂರುಗಳಿಂದ ಸಾವಿರಾರು ತುಳುವರು ಅತ್ತೂರು‌ ಕಡೆ‌ ಹೆಜ್ಜೆ ಇಡುವಂತೆ ಮಾಡಿದ ಸಂಘಟನಾ ಶಕ್ತಿ ಕುರಿತು ನನಗೆ ಮೆಚ್ಚುಗೆ ಇದೆ. 

ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನನಗೆ ಈ ಸಂಘಟನೆ ಶಕ್ತಿಯಲ್ಲಿ ನನ್ನ ಕಣ್ಣಿಗೆ ಪ್ರಮುಖವಾಗಿ ಬೆಂಕಿಯ ಚೆಂಡಿನಂತೆ ಕಾಣಿಸಿಕೊಂಡವರು ಮಹೇಶ್ ಬೈಲೂರು.ಬೆಂಕಿಗೆ ಗಾಳಿಯಾದವರು ಹತ್ತಾರು ಮಂದಿ,ಬೆಂಕಿಗೆ ಇಂಧನವಾದವರು ಸಮಿಧೆಯಾದವರು ನೂರಾರು ಮಂದಿ.ಇವರೆಲ್ಲರ ಹಿಂದೆ ಕಣ್ಣಿಗೆ ಕಾಣಿಸಿಕೊಳ್ಳದ ಮಹಾನ್ ಮಹಿಮರ ಬೆಂಬಲ (ಬೆರಿ ಸಹಾಯ) ಖಂಡಿತಾ ಇದೆ. ಅವರಿಗೂ ನಮನಗಳು. 

ಹಿಂದುತ್ವವನ್ನು ಉದ್ಯಮವಾಗಿ ಬಳಸಿದವರು ಹಲವು ಮಂದಿ ಆದರೆ ಮಹೇಶ್ ಬೈಲೂರು ಹಿಂದುತ್ವಕ್ಕಾಗಿ ಜವುಳಿ ಉದ್ಯಮವನ್ನೂ ಪಕ್ಕಕ್ಕಿಟ್ಟವರು.ಕಾರ್ಕಳದಲ್ಲಿ ಪುನರಪಿ ಹಿಂದುತ್ವ ಕಟ್ಟಿದ ವಿರೋಧಿಗಳ ಹೆಡೆಮುರಿ ಕಟ್ಟಿದ  ಸ್ವ ಪಕ್ಷೀಯ ರ ವಿರೋಧ ಮೆಟ್ಟಿದ ಇಟ್ಟ ಹೆಜ್ಜೆ ಹಿಮ್ಮೆಟ್ಟದ ದಿಟ್ಟ ಗಟ್ಟಿಗ,ಬೈಲೂರ್ದ‌ ಮುತ್ತು ಅತ್ತೂರ್ದ ಗತ್ತು ಮಹೇಶ್ ಬೈಲೂರು 


ಪರ್ಪಲೆದ ಕಲೆ, ದೈವೊದ ನೆಲೆ ತೋಜಾಯಿನ ಕಾರ್ನಿಕ ಶಕ್ತಿಲೆ 

ಎನ್ನ ಉಡಲ್ ದಿಂಜಿ ಸೊಲ್ಮೆಲು

ಕಾರ್ಕಳಕ್ಕೆ ಮಹೇಶ್ ವರ

-ಜಿತೇಂದ್ರ ಕುಂದೇಶ್ವರ

 ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget