ಬಜಗೋಳಿ:ಆಶಾ ಕಾರ್ಯಕರ್ತರಿಗೆ ಯುವ ಕಾಂಗ್ರೆಸ್ ವತಿಯಿಂದ ಕಿಟ್ ವಿತರಣೆ-Times of karkala

ಬಜಗೋಳಿ:ಬಜಗೋಳಿಯ‌ ಅಂಗನವಾಡಿ ಕೇಂದ್ರದಲ್ಲಿ ಯುವ ಕಾಂಗ್ರೆಸ್ ‌ಮುಖಂಡ ಕೃಷ್ಣ ಎ ಶೆಟ್ಟಿ ಇವರ ನೇತೃತ್ವದಲ್ಲಿ  ಕೊರೋನಾ ವಾರಿಯಸ್೯ಗಳಾದ ಅಶಾ‌ ಕಾರ್ಯಕರ್ತರಿಗೆ ಕಿಟ್ಟ್ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭ ಮಾತನಾಡಿದ  ಕಾಂಗ್ರೇಸ್ ಮುಖಂಡ ಪುರಸಭಾ ಸದಸ್ಯ ಶುಭದರಾವ್ "ಕೋವಿಡ್ ಸಂಕಷ್ಟದ ‌ಸಂದರ್ಭದಲ್ಲಿ ಸರಕಾರ ಭರವಸೆ ಇಟ್ಟು ನೀಡಿದ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ‌ನಿರ್ವಹಿಸುತ್ತಿರು‌ ಕೊರೋನಾ ವಾರಿಯಸ್೯ಗಳಾದ ಅಶಾ‌ ಕಾರ್ಯಕರ್ತರ ಕಾರ್ಯ ಅನನ್ಯ, ಅವರಿಗೂ ನೆರವಿನ ಅಗತ್ಯವಿದೆ ನಾವೆಲ್ಲರೂ ‌ಅವರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕಿದೆ‌" ಎಂದರು.

ನಲ್ಲೂರು, ಮುಡಾರು, ದುರ್ಗಾ ಗ್ರಾಮದ 18 ಜನ ಆಶಾ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ಮಾಸ್ಕ್, ಸ್ಯಾನಿಟೈಸರ್, ಮತ್ತು ‌ಆಹಾರ ಕಿಟ್ಟನ್ನು ನೀಡಿ ಗೌರವಿಸಲಾಯಿತು.

ಜಿಲ್ಲಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ವಿಶ್ವಾಸ್ ಅಮೀನ್ ಮಾತನಾಡಿ ಆಶಾ ಕಾರ್ಯಕರ್ತರ ಸೇವೆಯನ್ನು ಗೌರವಿಸಿ ಅವರಿಗೆ ದೈರ್ಯ ತುಂಬುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಅವರ ನೆರವಿಗೆ ಯುವ ಕಾಂಗ್ರೇಸ್ ಸದಾ‌ ನಿಲ್ಲುತ್ತದೆ ಎಂದರು. 

 ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೇಸ್ ಪ್ರದಾನ ಕಾರ್ಯದರ್ಶಿ ಕೃಷ್ಣ ಎ ಶೆಟ್ಟಿ ನಲ್ಲೂರು, ಉದ್ಯಮಿ ಸುನಿಲ್ ಕುಮಾರ್ , ಉದಯ ಸಾಲ್ಯಾನ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಕಾಪು ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಸಾಲ್ಯಾನ್ , ಹರ್ಷ ಶೆಟ್ಟಿ, ಶಶಿ, ಅಶ್ವಿನ್ ಕೋಟ್ಯಾನ್  ಗಣೇಶ್ ದೇವಾಡಿಗ, ಅಶ್ವೀನ್ ಮೊದಲಾದವರು ಉಪಸ್ಥಿತರಿದ್ದರು.

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget