"ಲಾಂಡ್ರೀ ಕಾರ್ಮಿಕರಿಗೆ ನೆರವಿನ ಅಗತ್ಯವಿದೆ"- ಶುಭದರಾವ್ ಲಾಂಡ್ರಿ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಆಹಾರ ಕಿಟ್ ವಿತರಿಸಿದ ಪುರಸಭಾ ಸದಸ್ಯ ಕಾಂಗ್ರೇಸ್ ಮುಖಂಡ ಶುಭದರಾವ್-Times of karkala

"ಲಾಕ್ ಡೌನ್ ಕಾರಣದಿಂದಾಗಿ ಸುಮಾರು ಎರಡು ತಿಂಗಳಿಂದ ತಮ್ಮ ಅಂಗಡಿಗಳನ್ನು ಮುಚ್ಚಿದ್ದರ ಪರಿಣಾಮವಾಗಿ ಲಾಂಡ್ರಿ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದಾರೆ, ಆದರೂ ಧೃತಿಗೆಡದೆ ದೈರ್ಯವಾಗಿ ಸಮಸ್ಯೆಯನ್ನು  ಎದುರಿಸಿ ಜೀವನ ನಿರ್ವಹಣೆಯನ್ನು‌ ನಡೆಸುತ್ತಿರುವ ಅವರಿಗೆ ಸರಕಾರದ ನೆರವಿನ ಅಗತ್ಯವಿದೆ ಎಂದು ಪುರಸಭಾ ಸದಸ್ಯ ಕಾಂಗ್ರೇಸ್ ಮುಖಂಡ ಶುಭದರಾವ್ ತಿಳಿಸಿದರು. 

 

ಅವರು ತಮ್ಮ ವತಿಯಿಂದ ಕಾರ್ಕಳ ಪುರಸಭಾ ವ್ಯಾಪ್ತಿಯ ಲಾಂಡ್ರಿ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಮತ್ತು ಆಹಾರ ಕಿಟ್ಟನ್ನು ವಿತರಿಸಿ‌ ಮಾತನಾಡಿದರು.ಮಡಿವಾಳ ಸಮಾಜದ ಅದ್ಯಕ್ಷ ಸದಾನಂದ ಸಾಲಿಯಾನ್ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಅನೇಕ‌ ರಾಜಕಾರಣಿಗಳು ಮನೆ ಬಾಗಿಲಿಗೆ ಬಂದು ಭರವಸೆಗಳನ್ನು ನೀಡಿ ಹೋದವರು ಸಂಕಷ್ಟದ ಕಾಲದಲ್ಲಿ ಕಾಣೆಯಾಗುತ್ತಾರೆ.ಆದರೆ ಶುಭದರಾವ್ ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ,‌ ನಮ್ಮ ಕಷ್ಟವನ್ನು ಅರಿತು ತಾವಾಗಿಯೇ ಮುಂದೆ‌ ಬಂದು ನೆರವಾಗದ ಅವರಿಗೆ ಸಮಾಜದ ಪರವಾಗಿ ಅಭಿನಂದಿಸುತ್ತೇನೆ ಎಂದರು.  


ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಉಪಾಧ್ಯಕ್ಷ ಅಶೋಕ್ ‌ಮಡಿವಾಳ, ಮೋಹನ್‌ ಮಡಿವಾಳ, ಪಲ್ಲವಿ‌ ಸುರೇಶ್, ಸುನೀಲ್ ಕೋಟ್ಯಾನ್ ಉಪಸ್ಥಿತಿತರಿದ್ದರು, ನಾಗೇಶ್ ಹೆಗ್ಡೆ ಸ್ವಾಗತಿಸಿ, ಧನ್ಯವಾದವಿತ್ತರು.

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget