ನಿಟ್ಟೆ:ಸಮಾಜ ಸೇವಕಿ ರಮೀತಾ ಶೈಲೇಂದ್ರರವರ ವಿಶೇಷ ಮುತುವರ್ಜಿಯಿಂದ ತಾಯಿಯಿಲ್ಲದೆ ತಬ್ಬಲಿಯಾಗಿದ್ದ ನಾಲ್ಕು ಮಕ್ಕಳ ರಕ್ಷಣೆ-Times of karkala

ನಿಟ್ಟೆ:ಕಾರ್ಕಳ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ,ಸಮಾಜಸೇವಕಿ ರಮೀತಾ ಶೈಲೇಂದ್ರರವರು ಲಾಕ್ ಡೌನ್ ಸಂಧರ್ಭ ಅಗತ್ಯವಿರುವವರಿಗೆ ಕಿಟ್ ನೀಡಲು ನಿಟ್ಟೆ ಗ್ರಾಮದಲ್ಲಿ ಮನೆಮನೆಗೆ ತೆರಳುತ್ತಿದ್ದ ಸಂಧರ್ಭ.. ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದನಾಡು ಎಂಬಲ್ಲಿ  ತಂದೆಯೊಂದಿಗೆ ಒಂದು ಹೆಣ್ಣುಮಗು ಸೇರಿ ನಾಲ್ಕು ಮಕ್ಕಳು ವಾಸಿಸುತ್ತಿದ್ದರು.ಇದನ್ನು ಗಮನಿಸಿದ ಸಮಾಜ ಸೇವಕಿ  ರಮೀತಾ ಶೈಲೇಂದ್ರರವರು ಕೂಡಲೇ ಉಡುಪಿ ಮಕ್ಕಳ ಪುರ್ನಸತಿ ಕೇಂದ್ರದವರನ್ನು ಸಂಪರ್ಕಿಸಿ ಮಕ್ಕಳನ್ನು ರಕ್ಷಿಸಿದ್ದಾರೆ.

ಕೌಟುಂಬಿಕ ಕಲಹದಿಂದ ಪದ್ಮನಾಭ ಎಂಬವರನ್ನು ಪತ್ನಿ ತೊರೆದು ಹೋಗಿದ್ದು ದಂಪತಿಗಳಿಗೆ ನಾಲ್ಕು ಮಂದಿ ಮಕ್ಕಳಿದ್ದರು. ತಾಯಿ ಇಲ್ಲದೆ ತಂದೆಯೊಂದಿಗೆ 1 ಹೆಣ್ಣು ಸೇರಿ ನಾಲ್ಕು ಮಂದಿ ಮಕ್ಕಳು ಅಸಹಾಯಕ ಸ್ಥಿತಿಯಲಿದ್ದರು. ನಾಲ್ವರು ತಂದೆಯೊಂದಿಗೆ ವಾಸವಾಗಿದ್ದು ಸರಿಯಾಗಿ ಅನ್ನ ಆಹಾರವಿಲ್ಲದೆ ಆರೈಕೆಯೂ ಇಲ್ಲದೆ ಮಕ್ಕಳು ನಿರ್ಗತಿಕ ಸ್ಥಿತಿಯಲ್ಲಿದ್ದರು.

ಇದನ್ನು ಗಮನಿಸಿದ ಸಮಾಜ ಸೇವಕಿ  ರಮೀತಾ ಶೈಲೇಂದ್ರರವರು ಕೂಡಲೇ ಉಡುಪಿ ಮಕ್ಕಳ ಪುರ್ನಸತಿ ಕೇಂದ್ರದವರನ್ನು ಸಂಪರ್ಕಿಸಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜೂ.2 ರಂದು ಸ್ಥಳಕ್ಕೆ ಭೇಟಿ ನೀಡಿತ್ತು. ತಾಯಿ ಇಲ್ಲದೆ ತಂದೆಯ ಆರೋಗ್ಯ ಸರಿಯಿಲ್ಲದೆ ಮಕ್ಕಳಿರುವ ಪರಿಸ್ಥಿತಿಯನ್ನು ಕಂಡು ನಾಲ್ಕು ಮಕ್ಕಳನ್ನು ಉಡುಪಿ ಪುನಾರ್ವಸತಿ ಕೇಂದ್ರಕ್ಕೆ ಕರೆದೊಯ್ದು ರಕ್ಷಣೆ ನೀಡಿದ್ದಾರೆ.ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಪುಟಾಡೋ ಆದೇಶದಂತೆ 4 ಮಕ್ಕಳಿಗೆ ಪುನಾರ್ವಸತಿ ಕಲ್ಪಿಸಲಾಗಿದೆ

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕುಮಾರ್ ನಾಯ್ಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್, ರಕ್ಷಣಾಧಿಕಾರಿ ಮಹೇಶ್ ದೇವಾಡಿಗ, ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್, ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಹೆಡ್ ಕಾನ್ಸ್ಟೇಬಲ್ ಸತೀಶ್ ನಾಯ್ಕ್, ನಿಟ್ಟೆ ಪಂಚಾಯತ್ ಅಧ್ಯಕ್ಷ ಸತೀಶ್ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಆತ್ಮನಂದ್ ಪೂಜಾರಿ, ಸಮಾಜ ಸೇವಕಿ ರಮಿತಾ ಶೈಲೇಂದ್ರ, ಹರ್ಷವರ್ಧನ್ ನಿಟ್ಟೆ ಉಪಸ್ಥಿತಿರಿದ್ದರು.

 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget