ಕಾರ್ಕಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂತೆಕಟ್ಟೆಯ ಕೃಷ್ಣಾನುಗ್ರಹ ಅನಾಥಾಶ್ರಮದ ಸೋಕಿತರಿಗೆ ನೆರವು-Times of karkala

ಕಾರ್ಕಳ:ಅನಾಥ ಮಕ್ಕಳ ಬಾಳಿನ ಆಶಾಕಿರಣವಾದ ಉಡುಪಿಯ ಸಂತೆಕಟ್ಟೆಯ ಕೃಷ್ಣಾನುಗ್ರಹ ಅನಾಥಾಶ್ರಮಕ್ಕೂ ಕರೋನ ಸೋಂಕು ವಕ್ಕರಿಸಿಕೊಂಡಿದ್ದು ಸುಮಾರು 12 ಜನ ಪುಟ್ಟ ಪುಟ್ಟ ಅನಾಥ ಮಕ್ಕಳು ಹಾಗೂ 9 ಜನ ಸಿಬ್ಬಂದಿಗಳು ಸೇರಿ 21 ಜನರಿಗೆ ಕರೋನ ಬಂದಿದೆ.  ಆಶ್ರಮದಲ್ಲಿ ಇನ್ನೂ 17 ಜನ ಮಕ್ಕಳಿದ್ದು ಪ್ರಸ್ತುತ ಅವರಿಗೆ ನೆಗೆಟಿವ್ ವರದಿ ಬಂದಿದ್ದು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. 

ಇದನ್ನು ಮನಗಂಡು ಕಾರ್ಕಳ ಬ್ಲಾಕ್ ಕಾಂಗ್ರೆಸ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಹಾಗೂ ಕಾರ್ಕಳ ನಗರ ಕಾಂಗ್ರೆಸ್ ವತಿಯಿಂದ ಆಶ್ರಮದ  ಸಿಬ್ಬಂದಿ ವರ್ಗ ಮತ್ತು ಮಕ್ಕಳಿಗೆ ಬೇಕಾದ  ಔಷಧಿ ಕಿಟ್ ಹಾಗೂ ಇನ್ನಿತರ ದಿನಬಳಕೆಯ ಅಗತ್ಯ ವಸ್ತುಗಳನ್ನು ಹಾಗೂ ಆರ್ಥಿಕ ಸಹಾಯ ಧನವನ್ನು ಅನಾಥ ಮಕ್ಕಳ ಬಾಳಿನ ಆಶಾಕಿರಣವಾದ ಕೃಷ್ಣಾನುಗ್ರಹಕ್ಕೆ ಭೇಟಿ ನೀಡಿ ನೀಡಲಾಯಿತು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ, ನಗರ ಕಾಂಗ್ರೆಸ್ ಅಧ್ಯಕ ಮಧುರಾಜ್ ಶೆಟ್ಟಿ, ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್, ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಸೌರಭ್ ಬಲ್ಲಾಳ್ ಪಕ್ಷದ ಮುಖಂಡರಾದ ಹರೀಶ್ ಕಿಣಿ, ಶ್ರೀ ನವೀನ್ ದೇವಾಡಿಗ, ವೆರೋನಿಕಾ ಕರ್ನೋಲಿಯಾ, ಡಾ.ಸುನೀತಾ ಶೆಟ್ಟಿ, ಪ್ರಸನ್ನ ಜತ್ತನ್ನ, ಜನಾರ್ಧನ್ ಬಂಡಾರ್ಕರ್, ಮಾದವ ಬನ್ನಂಜೆ, ಸದಾಶಿವ ಕಟ್ಟೆಗುಡ್ಡೆ, ಸುನಿಲ್ ಕೋಟ್ಯಾನ್, ಸುನಿಲ್ ಕುಮಾರ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

 ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget