ಬೈಲೂರು:ಲಾರಿ-ಗೂಡ್ಸ್ ರಿಕ್ಷಾ ಡಿಕ್ಕಿ,ಚಾಲಕಗೆ ಗಾಯ-Times of karkala

ಬೈಲೂರು:ಸರಕು ಸಾಗಾಣಿಕಾ ಲಾರಿಯೊಂದು  ಗೂಡ್ಸ್ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ರಿಕ್ಷಾ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಬಸ್ರಿ ಶಾಲೆಯ ಸಮೀಪ ಹಾದು ಹೋಗುವ ಉಡುಪಿ-ಕಾರ್ಕಳ ಜಿಲ್ಲಾ ಮುಖ್ಯ ರಸ್ತೆಯಲ್ಲಿ ನಡೆದಿದೆ.ಗೂಡ್ಸ್ ರಿಕ್ಷಾ ಚಾಲಕ ರಾಜರಾಮ ಗಾಯಗೊಂಡವರು.

ದಿನಾಂಕ 08/06/2021 ರಂದು ಮಧ್ಯಾಹ್ನ 3:00 ಗಂಟೆಗೆ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಬಸ್ರಿ ಶಾಲೆಯ ಸಮೀಪ ಹಾದು ಹೋಗುವ ಉಡುಪಿ-ಕಾರ್ಕಳ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸರಕು ಸಾಗಾಣಿಕಾ ಲಾರಿ (KA-20-AB-0925)ಚಾಲಕನು ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ರಾಜರಾಮ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಗೂಡ್ಸ್ ರಿಕ್ಷಾ(KA-20-AA-2631) ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಗೂಡ್ಸ್ ರಿಕ್ಷಾ ಡಾಮಾರು ರಸ್ತೆಯಲ್ಲಿ ಮಗುಚಿಬಿದ್ದು, ಗೂಡ್ಸ್ ರಿಕ್ಷಾ ರಾಜರಾಮ ಗಂಭೀರ ಗಾಯಗೊಂಡಿದ್ದಾರೆ.

ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget