ಕಾರ್ಕಳ:ಪೆಟ್ರೋಲ್ ಡೀಸಲ್ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ವತಿಯಿಂದ ಎರಡನೇ ದಿನವೂ ಪ್ರತಿಭಟನೆ-Times of karkala

 ನಗರ ಕಾಂಗ್ರೆಸ್ ಕಾರ್ಕಳ ಹಾಗೂ ಕಿಸಾನ್ ಕಾಂಗ್ರೆಸ್ ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ಕಾರ್ಕಳ ಚತುರ್ಮುಖ ಬಸದಿ ಬಳಿ ಇರುವ ಹನುಮಾನ್ ಪೆಟ್ರೋಲ್ ಪಂಪ್ ಮುಂಬಾಗ ನಡೆಸಲಾಯಿತು.

ಮೋದಿ ಸರಕಾರದ ಬೆಲೆ ಏರಿಕೆಯನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ನಳಿನಿ ಆಚಾರ್ಯ ಹಾಗೂ ರಾಜ್ಯ ಕೆಪಿಸಿಸಿ ಕಿಸಾನ್ ಸಮಿತಿಯ ಕಾರ್ಯದರ್ಶಿ ಉದಯ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಶೆಟ್ಟಿ ಮಾತನಾಡಿದರು. 

ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಧುರಾಜ್ ಶೆಟ್ಟಿ,ತಾಲೂಕು ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಅಸ್ಲಾಂ ಯುವ ಕಾಂಗ್ರೆಸ್ ಮುಖಂಡ ಪ್ರದೀಪ್ ಶೆಟ್ಟಿ, ಪುರಸಭಾ ಸದಸ್ಯರಾದ ರೆಹಮತ್, ಹರೀಶ್ ದೇವಾಡಿಗ, ಸೋಮನಾಥ್ ನಾಯ್ಕ್ ವಿನ್ನಿ ಬೊಲ್ಟ್ ಮೆಂಡೋನ್ಸಾ, ಮಾಜಿ ಪುರಸಭಾ ಸದಸ್ಯರಾದ ರಾಜೇಶ್ ದೇವಾಡಿಗ,ವಿವೇಕಾನಂದ ಶೆಣೈ, ಸುನಿಲ್ ಕೋಟ್ಯಾನ್, ನವೀನ್ ದೇವಾಡಿಗ,ಕಾಂಗ್ರೆಸ್ ಪಕ್ಷದ  ಸದಸ್ಯರಾದ ರಾಜೇಂದ್ರ ಸುನಿಲ್ ಕುಮಾರ್ ಭಂಡಾರಿ, ಹರ್ಷ ಕೆ ಶೆಟ್ಟಿ, ರಘುಪತಿ, ಸಂತೋಷ್, ದೇವಾಡಿಗ, ರಾಜೇಂದ್ರ ಪ್ರಸಾದ್, ವಿಜಯ್ ಕುಮಾರ್, ಶಶಿಧರ್, ಕೃಷ್ಣ ಮಡಿವಾಳ ಇತರರು ಹಾಗು ಹಿರಿಯ ಕಾಂಗ್ರೆಸ್ಸಿಗರಾದ ಸಾಣೂರು ಸುಂದರ ಗೌಡ,   ಕಾರ್ಕಳ ಯುವ ಕಾಂಗ್ರೆಸ್ಸಿನ ಪದಾಧಿಕಾರಿಗಳು ಕಿಸಾನ್ ಸಮಿತಿಯ ಪದಾಧಿಕಾರಿಗಳು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಐ.ಟಿ ಸೆಲ್  ಅಧ್ಯಕ್ಷ ಸತೀಶ್ ಕಾರ್ಕಳ ಉಪಸ್ಥಿತರಿದ್ದರು.

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget