"ದೈವಾರಾಧನಾ ಕ್ಷೇತ್ರದಲ್ಲಿ ದುಡಿಯುವವರಿಗೆ ಕೋವಿಡ್ ಪರಿಹಾರ ನೀಡಬೇಕು"-ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪೂಜಾರಿ ಒತ್ತಾಯ-Times of karkala

ಉಡುಪಿ:ಕೊರೋನಾ ಎರಡನೇ ಅಲೆಗೆ ಜಗತ್ತು ತತ್ತರಿಸಿ ಹೋಗಿದ್ದು ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸೀಸನ್ ನಂಬಿ ಬದುಕಿರುವ ಜನರ ಜೀವನ ಮೂರಾಬಟ್ಟೆಯಾಗಿದೆ.ಅದೆಷ್ಟೋ ಶುಭ ಸಮಾರಂಭಗಳು ಧಾರ್ಮಿಕ ಚಟುವಟಿಕೆಗಳು ನಿಂತುಹೋಗಿದ್ದು ಈ  ಸಮಾರಂಭವನ್ನು ನಂಬಿಕೊಂಡಿರುವವರ ಜೀವನನ ಅಕ್ಷರಶಃ ಬೀದಿಗೆ ಬಿದ್ದಿದೆ.

ಉಡುಪಿ ದಕ್ಷಿಣ ಕನ್ನಡಜಿಲ್ಲೆಯಲ್ಲಿ ನಡೆಯುತ್ತಿದ್ದ ಭೂತಾರಾಧನೆ ಲಾಕ್ ಡೌನ್ ನಿಂದಾಗಿ  ಸ್ತಬ್ಧಗೊಂಡಿದ್ದು,ಇದನ್ನೇನಂಬಿಕೊಂಡಿರುವ ಸಮುದಾಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ಆದುದರಿಂದ ಸರ್ಕಾರ ಕೂಡಲೇ ದೈವಾರಾಧನಾ ಕ್ಷೇತ್ರದಲ್ಲಿ ದುಡಿಯುವವರ ನೆರವಿಗೆ ಧಾವಿಸಿ ಅವರಿಗೆ ಕೋವಿಡ್ ಪರಿಹಾರ ನೀಡಬೇಕೆಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪೂಜಾರಿ ಒತ್ತಾಯಿಸಿದ್ದಾರೆ.

ಭೂತಾರಾಧನೆಯನ್ನೇ ನಂಬಿ ಬದುಕುತ್ತಿರುವ ನಲಿಕೆ ಸಮುದಾಯ,ಪರವ ಸಮುದಾಯ ಕೊರಗ ಸಮುದಾಯ,ನಾಗಬ್ಯಾಂಡ್ ವಾದಕರು,ಮಧ್ಯಸ್ಥರು,ದರ್ಶನ ಪಾತ್ರಿಗಳು ಹೀಗೆ ಹಲವಾರು ದೈವಚಾಕ್ರಿ ಮಾಡುವವಾರ ಪಾಡು ಹೇಳತೀರದಾಗಿದೆ.ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಒಂದುಲಕ್ಷದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಇದ್ದಾರೆ.ಇವರೆಲ್ಲರ ಸಂಸಾರ ನಡೆಸುವ ಆದಾಯ ಭೂತರಾದನೆಯೇ ಆಗಿರುವುದರಿಂದ ಇವರಿಗೆ ಸರ್ಕಾರದ ಪರಿಹಾರದ ಅನಿವಾರ್ಯತೆ ಇದೆ ಎಂದು ಒತ್ತಾಯಿಸಿದ್ದಾರೆ.

 ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget