ಕಾರ್ಕಳ:ವರದಕ್ಷಿಣೆ ಕಿರುಕುಳ,ಹೆಣ್ಣು ಮಗು ಹುಟ್ಟಿದ್ದಕ್ಕೆ ಡೈವೋರ್ಸ್ ಕೇಳಿದ ಗಂಡ!ಪ್ರಕರಣ ದಾಖಲು-Times of karkala

ಮಹಿಳೆಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸೇರಿದಂತೆ 7 ಜನರ ವಿರುದ್ಧ  ಕಾರ್ಕಳ  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶ್ರೀಮತಿ ನಜೀಮಾರವರಿಗೆ ಇರ್ಫಾನ್ ರೊಂದಿಗೆ ಕಾರ್ಕಳ ಮದೀನಾ ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ 5 ವರ್ಷದ ಹಿಂದೆ ಮದುವೆಯಾಗಿದ್ದು,ಮದುವೆಯ ಸಮಯ ವರನ ಹಾಗೂ ವರನ ಮನೆಯವರ ಕೋರಿಕೆಯಂತೆ 12 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದರು.


ಅದಾದ ಬಳಿಕ ಸಣ್ಣ ಸಣ್ಣ ವಿಚಾರಕ್ಕೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದು,ಬೈದು ಹೊಡೆದು ಕಿರುಕುಳ ನೀಡುತ್ತಿದ್ದರು.ಗಂಡ ಹಾಗೂ ಗಂಡನ ಮನೆಯವರು ಊಟ ತಿಂಡಿ ಕೊಡದೇ ಕಿರುಕುಳ ನೀಡಿದ್ದು ನಜೀಮಾರವರು ಹೆಣ್ಣುಮಗುವಿಗೆ ಜನ್ಮ ನೀಡಿದಾಗ ಹೆಣ್ಣು ಮಗು ನಮಗೆ ಬೇಡ, ಡೈವೋರ್ಸ ಕೊಡು ಎಂಬುದಾಗಿ ಬೆದರಿಕೆ ಹಾಕಿದ್ದರು.ಅಲ್ಲದೆ ನಜೀಮಾರವರ ತಾಯಿ ಮನೆಗೆ ಬಂದು ಡೈವೋರ್ಸ ನೀಡುವಂತೆ ಗಲಾಟೆ ಮಾಡಿದ್ದರು.

ಇಷ್ಟು ಮಾತ್ರವಲ್ಲದೆ ಕಾರ್ಕಳ ಕಾಬೆಟ್ಟಿನಲ್ಲಿ ಇರುವ  ನಜೀಮಾ ರವರ ಅಂಗಡಿಗೆ ನುಗ್ಗಿ ಗಲಾಟೆ ಮಾಡಿ  ಮಗುವಿಗೂ ಕೈಯಿಂದ ಹೊಡೆದು ಕೊಂದು ಹಾಕುತ್ತೇವೆ  ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪಕೀರನಕಟ್ಟೆ ನಿವಾಸಿಗಳಾದ ಇರ್ಫಾನ್,ಶ್ರೀಮತಿ ಸಿರಾಜ್ ಬಾನು, ಶ್ರೀಮತಿ ಆಫ್ರಿನ್,ಶ್ರೀ ಶಾಹಿದ್,ಶ್ರೀ ಇಮ್ರಾನ್ , ಸಮ್ರಿನ್, ಶಬ್ಬೀರ್ ಎಂಬುವವರ ಮೇಲೆ ಕಾರ್ಕಳ  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 








Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget