ಕಲ್ಯಾ:ಊಟ ಕೇಳಿದ್ದಕ್ಕೆ ತಾಯಿಯ ತಲೆಗೆ ಹೊಡೆದ ಮಗ!ಆಸ್ಪತ್ರೆಗೆ ದಾಖಲಾದ ತಾಯಿ.ಇಂತಹ ಮೃಗಗಳೂ ಇದ್ದಾರೆಯೇ...?-Times of karkala

ಕಾರ್ಕಳ:ವೃದ್ಧ ತಾಯಿಯ ತಲೆಗೆ ಹೊಡೆದು ಗಾಯಗೊಳಿಸಿ ಚಿತ್ರಹಿಂಸೆ ನೀಡುತ್ತಿದ್ದ ಮಗನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೌದು ಇಂತದ್ದೊಂದು ಘಟನೆ ಕಾರ್ಕಳ ತಾಲೂಕಿನ ಕಲ್ಯಾ ಕಲ್ಯಾ ಗ್ರಾಮದ ಅಶೋಕನಗರ ಎಂಬಲ್ಲಿ ನಡೆದಿದೆ.


ದಿ: ಶ್ರೀಧರ ಆಚಾರ್ಯ ರವರ ಪತ್ನಿ ಶ್ರೀಮತಿ ಯಶೋದ (83) ದೂರು ದಾಖಲಿಸಿದವರು.ಅವರ ಮಗ ದಾಮೋದರ ಆಚಾರಿಯು  ತಾಯಿ ಕೆಲಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಪ್ರತೀ ದಿನ ಹೊಡೆಯುವುದು ಬಯ್ಯುವುದು ಮಾಡುತ್ತಿದ್ದ.

ದಿನಾಂಕ ಜೂನ್ 02  ರಂದು ರಾತ್ರಿ ತನ್ನ ಮಗನ ಬಳಿ ಊಟ ಕೇಳಿದ್ದು,ಅದರಿಂದ ಕೋಪಗೊಂಡ ದಾಮೋದರ ಆಚಾರಿಯು ತೆಂಗಿನ ಮರದ ಹೆಡೆಯಿಂದ ಇವರ ತಲೆಯ ಹಿಂಬಾಗಕ್ಕೆ ಹೊಡೆದು ಗಾಯಗೊಳಿಸಿದ್ದಾನೆ.ಇದರಿಂದ ತಾಯಿಯು ಗಂಭೀರ ಗಾಯಗೊಂಡಿದ್ದಾರೆ.

ಯಶೋದ ರವರು ಹೆದರಿಕೆಯಿಂದ ಈ ವಿಚಾರವನ್ನು ಯಾರಲೀಯೂ ಹೇಳದೇ ಇದ್ದು, ಇಂದು ಬೆಳಿಗ್ಗೆ ಯಾರೋ ಇವರನ್ನು ಅಂಬುಲೆನ್ಸ್ ನಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದರು.

ಮಗ ದಾಮೋದರ ಆಚಾರಿಯ ಮೃಗೀಯ ವರ್ತನೆಯ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ:

ಪಿರ್ಯಾದಿದಾರರಾದ ಶ್ರೀಮತಿ ಯಶೋದ (83) ಗಂಡ; ದಿ: ಶ್ರೀಧರ ಆಚಾರ್ಯ ವಾಸ: ಅನುಗ್ರಹ ನಿಲಯ ಅಶೋಕನಗರ ಕುಂಟಾಡಿ ಕಲ್ಯಾ ಅಂಚೆ, ಮತ್ತು  ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ  ರವರು  ವಯೋವೃದ್ದರಾಗಿದ್ದು, ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಅಶೋಕನಗರ ಎಂಬಲ್ಲಿ ಅನುಗ್ರಹ ನಿವಾಸದಲ್ಲಿ ವಾಸವಾಗಿದ್ದು ಅವರಿಗೆ ಮನೆ ಕೆಲಸ ಮಾಡಲು ಸಾದ್ಯವಾಗದ ಕಾರಣ ಅವರ ಮಗ ದಾಮೋದರ ಆಚಾರಿಯು ಕೋಪದಿಂದ ಪ್ರತಿದಿನ ಹೊಡಯವುದು ಬೈಯುವುದು ಮಾಡುತ್ತಿದ್ದು, ಅದರಂತೆ ದಿನಾಂಕ 02/06/2021 ರಂದು 21:00 ಗಂಟೆಗೆ ಶ್ರಿಮತಿ ಯಶೋದ ರವರು ತನ್ನ ಮಗ ದಾಮೋದರ ಆಚಾರ್ಯ ನಿಗೆ ಊಟ ಕೇಳಿದ್ದು, ಅದರಿಂದ ಕೋಪಗೊಂಡ ದಾಮೋದರ ಆಚಾರಿಯು ತೆಂಗಿನ ಮರದ ಹೆಡೆಯಿಂದ ಇವರ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತ ಗಾಯಗೊಳಿಸಿ ನಿನಗೆ ಊಟ ಹಾಕಲು ಆಗುದಿಲ್ಲ ಎಂದು ಬೈದಿದ್ದು, ಶ್ರೀಮತಿ ಯಶೋದ ರವರು ಹೆದರಿಕೆಯಿಂದ ಈ ವಿಚಾರವನ್ನು ಯಾರಲೀಯೂ ಹೇಳದೇ ಇದ್ದು, ಈ ದಿನ ಬೆಳಿಗ್ಗೆ ಯಾರೋ ಇವರನ್ನು ಅಂಬುಲೆನ್ಸ್ ನಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 69/2021 ಕಲಂ: 323, 324, 504, ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget